Latest

ಮುರುಘಾ ಶ್ರೀಗಳ ಬಂಧನ

ಪ್ರಗತಿವಾಹಿನಿ ಸುದ್ದಿ, ಚಿತ್ರದುರ್ಗ – ಮುರುಘಾ ಶ್ರೀಗಳನ್ನು ಬಂಧಿಸಲಾಗಿದೆ. ಮಠದ ಒಳಗೇ ಅವರನ್ನು ಬಂಧಿಸಲಾಗಿದೆ.

ಪೋಕ್ಸೋ ಕಾಯ್ದೆಯಡಿ ಗಂಭೀರ ಪ್ರಕರಣ ಎದುರಿಸುತ್ತಿರುವ ಚಿತ್ರದುರ್ಗ ಮುರುಘಾಮಠದ ಶಿವಮೂರ್ತಿ ಶರಣರನ್ನು ಬಂಧಿಸಲಾಗಿದೆ.

10ನೇ ತರಗತಿ ಓದುತ್ತಿರುವ ಮುರುಘಾಮಠದ ಹಾಸ್ಟೆಲ್ ನಲ್ಲಿದ್ದ ಇಬ್ಬರು ಬಾಲಕಿಯರನ್ನು ಲೈಂಗಿಕ ತೃಷೆಗಾಗಿ ಸ್ವಾಮಿಗಳು ಬಳಸಿಕೊಂಡಿದ್ದಾರೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಕಳೆದ ಶನಿವಾರ ಪ್ರಕರಣ ದಾಖಲಾಗಿದೆ. ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದರಿಂದ ಮತ್ತು ಓರ್ವ ಬಾಲಕಿ ಪರಿಶಿಷ್ಟ ಜಾತಿಗೆ ಸೇರಿದ್ದರಿಂದ ವಿಷಯ ತೀವ್ರ ಸ್ವರೂಪ ಪಡೆದುಕೊಂಡಿದೆ.

ತಮ್ಮನ್ನು ಬಂಧಿಸದಂತೆ ಶ್ರೀಗಳು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಅರ್ಜಿ ಇನ್ನೂ ವಿಚಾರಣೆಗೆ ಬಂದಿಲ್ಲ. ಗುರುವಾರ ವಿಚಾರಣೆ ಇತ್ತಾದರೂ ಶುಕ್ರವಾರಕ್ಕೆ ಮುಂದೂಡಲಾಗಿದೆ. ಇದು ಕೂಡ ಸ್ವಾಮೀಜಿಗಳ ಬಂಧನದ ಅನುಮಾನ ಹುಟ್ಟಿಸಿತ್ತು.

Home add -Advt

ಜೊತೆಗೆ ಗುರುವಾರ ರಾತ್ರಿಯಾಗುತ್ತಿದ್ದಂತೆ ಮಠದ ಸುತ್ತಲೂ ಮತ್ತು ಚಿತ್ರದುರ್ಗ ನಗರದಾದ್ಯಂತ ಭಾರಿ ಬಂಧೋಬಸ್ತ್ ಕೈಗೊಳ್ಳಲಾಗಿತ್ತು. ಬೇರೆ ಜಿಲ್ಲೆಗಳಿಂದಲೂ ಹೆಚ್ಚಿನ ಪೊಲೀಸ್ ಪಡೆಗಳನ್ನು ಕರೆಸಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಚಿತ್ರದುರ್ಗದಲ್ಲಿ ಬೀಡುಬಿಟ್ಟಿದ್ದು, ತೀವ್ರ ಚರ್ಚೆಯಲ್ಲಿ ತೊಡಗಿದ್ದರು. ಎಲ್ಲೆಡೆ ಬ್ಯಾರಿಕೇಡ್ಗಳನ್ನು ಅಳವಡಿಸಿದ್ದು, ವಾಹನಗಳ ತಪಾಸಣೆ ತೀವ್ರಗೊಂಡಿತ್ತು.

ಇವನ್ನೆಲ್ಲ ಗಮನಿಸಿದಾಗ ಶ್ರೀಗಳ ಬಂಧನ ಸನ್ನಿಹಿತವಾಗಿರುವ ಲಕ್ಷಣ ಕಾಣುತ್ತಿತ್ತು.  ಇದೀಗ ಶ್ರೀಗಳ ಬಂಧನವಾಗಿದೆ.

ಮಧ್ಯರಾತ್ರಿ ಅವರ ಮೆಡಿಕಲ್ ಟೆಸ್ಟ್‌ ಮಾಡಿಸಿ, ನ್ಯಾಯಾಧೀಶರು ಎದುರು ಹಾಜರುಪಡಿಸುವ ಸಾಧ್ಯತೆ ಇದೆ.

https://pragati.taskdun.com/latest/murughasharana-case-ncpr-suomoto-dely-police-fir-arrest/

ರಾತ್ರಿಯೇ ಮುರುಘಾ ಶ್ರೀಗಳ ಬಂಧನವಾಗುತ್ತಾ? ಅನುಮಾನಕ್ಕೆ ಇಲ್ಲಿದೆ ಕಾರಣ

https://pragati.taskdun.com/latest/will-murugha-shree-be-arrested-at-night-here-is-the-reason-for-doubt/

Related Articles

Back to top button