ಪ್ರಗತಿವಾಹಿನಿ ಸುದ್ದಿ, ಹುಬ್ಬಳ್ಳಿ – ನಿಕಟಪೂರ್ವ ಸಭಾಪತಿ, ಮೇಲ್ಮನೆ ಹಿರಿಯ ಸದಸ್ಯ ಬಸವರಾಜ ಹೊರಟ್ಟಿಯವರಿಗೆ ಲಂಡನ್ನಿನ ವಲ್ರ್ಡಬುಕ್ ಆಫ್ ರಿಕಾರ್ಡ ಸಂಸ್ಥೆಯವರು ದಾಖಲೆಯ ದೃಢೀಕರಣ ಪ್ರಮಾಣಪತ್ರ ನೀಡಿದ್ದಾರೆ.
ಕಳೆದ ಐದು ದಶಕಗಳಿಂದ ಶೈಕ್ಷಣಿಕ ಹಾಗೂ ಸಾರ್ವಜನಿಕ ಕ್ಷೇತ್ರದಲ್ಲಿ ಹಲವಾರು ವಿಧಾಯಕ ಸೇವೆಗಳನ್ನು ಸಲ್ಲಿಸುವ ಮೂಲಕ ಬಸವರಾಜ ಹೊರಟ್ಟಿಯವರ ಹೆಸರು ಕನ್ನಡ ನಾಡಿಗೆ ಚಿರ-ಪರಿಚಿತ ವಿಧಾನಪರಿಷತ್ತಿಗೆ ಸತತ 8 ಬಾರಿ ಆಯ್ಕೆಯಾಗುವ ಮೂಲಕ ಐತಿಹಾಸಿಕ ದಾಖಲೆ ಮಾಡಿದ ನಿಕಟಪೂರ್ವ ಸಭಾಪತಿಗಳು ಮೇಲ್ಮನೆ ಹಿರಿಯ ಸದಸ್ಯರಾದ ಬಸವರಾಜ ಹೊರಟ್ಟಿಯವರಿಗೆ ಲಂಡನ್ನಿನ ವಲ್ರ್ಡಬುಕ್ ಆಫ್ ರಿಕಾರ್ಡ ಸಂಸ್ಥೆಯವರು ದಾಖಲೆಯ ದೃಢೀಕರಣ ಪ್ರಮಾಣಪತ್ರ ನೀಡಿದ್ದಾರೆ ಎಂದು ಡಾ.ಬಸವರಾಜ ಧಾರವಾಡ ತಿಳಿಸಿದ್ದಾರೆ.
1980 ರಿಂದ ವಿಧಾನಪರಿಷತ್ತಿಗೆ ಒಂದೇ ಕ್ಷೇತ್ರದಿಂದ ಸತತ 8 ಬಾರಿ ಆಯ್ಕೆಯಾಗುವ ಮೂಲಕ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ. ಸಾಮಾನ್ಯ ಶಿಕ್ಷಕರಾದ ಹೊರಟ್ಟಿಯವರು ಶಿಕ್ಷಣ ಸಚಿವರಾಗಿ, ವಿವಿಧ ಖಾತೆಗಳ ಸಚಿವರಾಗಿ ಎರಡು ಬಾರಿ ಸಭಾಪತಿಯಾಗಿ ಸೇವೆ ಸಲ್ಲಿಸಿದ್ದು ಶಿಕ್ಷಣ ಕ್ಷೇತ್ರಕ್ಕೆ ಶಿಕ್ಷಣ ವಲಯಕ್ಕೆ ಅಭಿಮಾನದ ಸಂಗತಿ. ಸಾರ್ವಜನಿಕವಾಗಿ ಅವರು ಮಾಡಿದ ಅಪ್ರತಿಮ ಸೇವೆ ಕಳೆದ 5 ದಶಕಗಳಿಂದ ಶಿಕ್ಷಕರ ಹಿತಕ್ಕಾಗಿ ಹೋರಾಟ ಮಾಡುತ್ತಾ ಬರುವ ಮೂಲಕ ಹೋರಾಟದ ಹೊರಟ್ಟಿಎಂದೇ ನಾಡಿಗೆ ಚಿರಪರಿಚಿತರಾದವರು. ಶೈಕ್ಷಣಿಕ ಸೇವೆಯಲ್ಲಿ ಅವರು ಮಾಡಿದ ಹೆಗ್ಗುರುತುಗಳು ನಿತ್ಯ ಶಿಕ್ಷಕ ವಲಯ ಮೆಲಕು ಹಾಕುತ್ತಿದೆ. ಶಿಕ್ಷಕರ ಹೊಟ್ಟೆ ಮತ್ತು ರಟ್ಟೆ ಗಟ್ಟಿಗೊಳಿಸಿದ ಹೊರಟ್ಟಿಯವರೆಂದೇ ನಾಡಿಗೆ ಚಿರಪರಿಚಿತರಾಗಿದ್ದಾರೆ. ಈ ಎಲ್ಲ ಸಂಗತಿಗಳು ದಾಖಲೆಗಳಿಗೆ ಅರ್ಹವಾಗಿವೆ.
ಲಂಡನ್ನಿನ ವಲ್ರ್ಡಬುಕ್ ಆಫ್ ರಿಕಾರ್ಡ ಸಂಸ್ಥೆಯವರು ಹೊರಟ್ಟಿಯವರು ಜಾಗತಿಕ ಶಾಂತಿಗಾಗಿ ಅವರು ಸಲ್ಲಿಸಿದ ಮಾನವೀಯ ಸೇವೆಗಾಗಿ ಅವರ ವ್ಯಕ್ತಿತ್ವದ ಇತರೆ ಮಜಲುಗಳನ್ನು, ಸಾಧನೆಗಳನ್ನು ಹಾಗೂ ಮೇಲ್ಮನೆಗೆ ಸತತ 8 ಬಾರಿ ಆಯ್ಕೆಯಾಗುವ ಮೂಲಕ ಶಿಕ್ಷಕರ ಮತ್ತು ಹೊರಟ್ಟಿಯವರ ಅವಿನಾಭಾವ ಸಂಬಂಧದ ಕುರಿತು ಅಧ್ಯಯನ ಮಾಡಿ ಒಬ್ಬ ಮೇರು ಸಾಧಕ ಎಂದು ವಲ್ರ್ಡಬುಕ್ ಆಫ್ ರಿಕಾರ್ಡ ಸಂಸ್ಥೆಯವರು ಹೊರಟ್ಟಿಯವರ ದಾಖಲೆಗಳನ್ನು ದಾಖಲೀಕರಿಸಿ ಸಂಖ್ಯೆ:198/2022 ದಿನಾಂಕ:29-08-2022 ರಂದು ದೃಢೀಕರಣ ಪ್ರಮಾಣ ಪತ್ರ ನೀಡಿ ಗೌರವಿಸಿದ್ದಾರೆ. ಈ ದಾಖಲೆ ಇಡೀ ಶಿಕ್ಷಕ ಸಮುದಾಯಕ್ಕೆ ಸಲ್ಲುತ್ತದೆ ಎಂದು ಇದೆ ಸಮಯದಲ್ಲಿ ಹೊರಟ್ಟಿಯವರು ವಿನಮ್ರವಾಗಿ ಹೇಳಿದ್ದಾರೆ. ಹೊರಟ್ಟಿಯವರ ಈ ಐತಿಹಾಸಿಕ ದಾಖಲೆಗೆ ನಾಡಿನ ಸಮಸ್ತ ಶಿಕ್ಷಕರು, ಹಿತೈಷಿಗಳು, ಶುಭ ಕೋರಿದ್ದಾರೆ.
https://pragati.taskdun.com/latest/arrest-of-mr-muruga/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ