Latest

ಹಾಸ್ಟೇಲ್ ವಾರ್ಡನ್ ರಶ್ಮಿ ಬಂಧನ

ಪ್ರಗತಿವಾಹಿನಿ ಸುದ್ದಿ; ಚಿತ್ರದುರ್ಗ: ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಕ್ಸೋ ಪ್ರಕರಣದಲ್ಲಿ ಬಂಧನಕ್ಕೀಡಾರುವ ಮುರುಘಾಶ್ರೀ ಎದೆನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬೆಳವಣಿಗೆಗಳ ಬೆನ್ನಲ್ಲೇ ಇದೀಗ ಪ್ರಕರಣದ ಎರಡನೇ ಆರೋಪಿ ಮುರುಘಾ ಮಠದ ಹಾಸ್ಟೇಲ್ ವಾರ್ಡನ್ ರಶ್ಮಿಯನ್ನು ಚಿತ್ರದುರ್ಗ ಪೊಲೀಸರು ಬಂಧಿಸಿದ್ದಾರೆ.

ಮುರುಘಾ ಶ್ರೀಗಳ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಇಬ್ಬರು ಆರೋಪಿಗಳ ಬಂಧನವಾದಂತಾಗಿದೆ. ಈಗಾಗಲೇ ಬಂಧಿಸಲ್ಪಟ್ತಿರುವ ಮುರುಘಾ ಮಠಡ ಡಾ.ಶಿವಮೂರ್ತಿ ಶರಣರು ಎದೆನೋವು ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರಕರಣದ ಎರಡನೇ ಆರೋಪಿ ವಾರ್ಡನ್ ರಶ್ಮಿಯನ್ನು ನಿನ್ನೆಯೇ ಚಿತ್ರದುರ್ಗ ಪೊಲಿಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ರಶ್ಮಿ ಅವರ ತೀವ್ರ ವಿಚಾರಣೆ ಬಳಿಕ ಇದೀಗ ಅವರನ್ನು ಬಂಧಿಸಲಾಗಿದೆ.

ಮುರುಘಾಶ್ರೀಗಳು ತಮ್ಮ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಮುರುಘಾಮಠದಲ್ಲಿ ಓದುತ್ತಿದ್ದ ಇಬ್ಬರು ಬಾಲಕಿಯರು ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು. ಹಾಸ್ಟೇಲ್ ವಾರ್ಡನ್ ರಶ್ಮಿ ಸ್ವಾಮೀಜಿಗಳಿಗೆ ಹಣ್ಣು ಕೊಟ್ಟು ಬನ್ನಿ ಎಂದು ಶ್ರೀಗಳ ಬಳಿ ಕಳುಹಿಸುತ್ತಿದ್ದರು. ಈ ವೇಳೆ ಸ್ವಾಮೀಜಿಗಳು ತಮ್ಮ ಮೇಲೆ ದೌಜನ್ಯ ಎಸಗಿದ್ದಾಗಿ ಮಕ್ಕಳು ಆರೋಪಿಸಿದ್ದರು. ಮುರುಘಾಶ್ರೀಗಳು ಸೇರಿದಂತೆ ಮಠದ ಐವರ ವಿರುದ್ಧ ಮೈಸೂರು ನಜಾರಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಮುರುಘಾಶ್ರೀಗಳು ICUಗೆ ಶಿಫ್ಟ್

Home add -Advt

Related Articles

Back to top button