Latest

ಬಿಜೆಪಿ ನಾಯಕನನ್ನು ಗುಂಡಿಟ್ಟು ಹತ್ಯೆಗೈದ ದುಷ್ಕರ್ಮಿಗಳು

ಪ್ರಗತಿವಾಹಿನಿ ಸುದ್ದಿ; ಗುರುಗ್ರಾಮ: ಬಟ್ಟೆ ಶೋರೂಮ್ ನಲ್ಲಿ ಬಿಜೆಪಿ ನಾಯಕ ಸುಖ್ಬೀರ್ ಖತಾನಾ ಅಲಿಯಾಸ್ ಸುಖಿ ಎಂಬುವವರನ್ನು ಗುಂಡಿಟ್ಟು ದುಷ್ಕರ್ಮಿಗಳು ಹತ್ಯೆ ಮಾಡಿರುವ ಘಟನೆ ಗುರುಗ್ರಾಮದಲ್ಲಿ ನಡೆದಿದೆ.

ರಿಥೋಜ್ ಗ್ರಾಮದ ನಿವಾಸಿ ಬಿಜೆಪಿ ಮುಖಂಡ ಸುಖ್ಬೀರ್ ತನ್ನ ಸ್ನೇಹಿತರೊಂದಿಗೆ ಶಾಪಿಂಗ್ ಗಾಗಿ ರೇಮಂಡ್ ಬಟ್ಟೆ ಅಂಗಡಿಗಢೋಗಿದ್ದರು. ಈ ವೇಳೆ ಏಕಾಏಕಿ ಶೋರೋಂ ಗೆ ನುಗ್ಗಿದ ದುಷ್ಕರ್ಮಿಗಳು, ಬಿಜೆಪಿ ಮುಖಂಡನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಖತಾನಾ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಸಾವನಪ್ಪಿದ್ದಾರೆ.

Home add -Advt

ಸುಖ್ಬೀರ್ ಖತಾನಾ ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಅವರ ಆಪ್ತರಾಗಿದ್ದು, ಸೊಹ್ನಾದಿಂದ ಪರಿಷತ್ ಚುನಾವಣೆಗೆ ಸ್ಪರ್ದಿಸಲು ಮುಂದಾಗಿದ್ದರು. ಬಿಜೆಪಿ ಮುಖಂಡನ ಮೇಲೆ ಗುಂಡಿನ ದಾಳಿ ನಡೆಸಿ, ಬಟ್ಟೆ ಅಂಗಡಿಯಿಂದ ಐವರು ಬಂದೂಕುಧಾರಿಗಳು ಹೊರಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಹಾಸ್ಟೇಲ್ ವಾರ್ಡನ್ ರಶ್ಮಿ ಬಂಧನ

Related Articles

Back to top button