Latest

ಪಂಜಾಬಿ ಗಾಯಕ ಆಸ್ಟ್ರೇಲಿಯಾದಲ್ಲಿ ಸಾವು

ಪ್ರಗತಿವಾಹಿನಿ ಸುದ್ದಿ, ಕ್ಯಾನ್ ಬೆರಾ: ಭಾರತದ ಪಂಜಾಬ್ ಮೂಲದ ಗಾಯಕರೊಬ್ಬರು ಆಸ್ಟ್ರೇಲಿಯಾದಲ್ಲಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ನಿರ್ವೈರ್ ಸಿಂಗ್ (42) ಮೃತಪಟ್ಟವರು. ಕೆಲಸದ ಸ್ಥಳಕ್ಕೆ ಅವರು ತೆರಳುತ್ತಿದ್ದ ವೇಳೆ ಮೆಲ್ಬೋರ್ನ್ ಬಳಿ ಕಿಯಾ ಸೆಡಾನ್‌ ನಲ್ಲಿ ಸಂಭವಿಸಿದ ಮೂರು ವಾಹನಗಳ ಭೀಕರ ಡಿಕ್ಕಿಯಲ್ಲಿ ವಾಹನಗಳ ಮಧ್ಯೆ ಸಿಲುಕಿ ಅವರು ಮಂಗಳವಾರ  ಅಸು ನೀಗಿದರು.

Home add -Advt

“ಅವರು ತಪ್ಪಾದ ಸಮಯದಲ್ಲಿ ತಪ್ಪು ಸ್ಥಳದಲ್ಲಿದ್ದರು” ಎಂದು ಅಲ್ಲಿನ ಪೊಲೀಸ್ ಹೇಳಿಕೆ ನೀಡಿದ್ದಾರೆ.

ಒಂಬತ್ತು ವರ್ಷಗಳ ಹಿಂದೆ  ನಿರ್ವೈರ್ ಸಿಂಗ್ ಆಸ್ಟ್ರೇಲಿಯಾಕ್ಕೆ ತೆರಳಿ ಅಲ್ಲೇ ನೆಲೆಸಿದ್ದರು. ತಮ್ಮ ಪಂಜಾಬಿ ಹಾಡುಗಳಿಂದಾಗಿ ಜಾಗತಿಕ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದ ಅವರು ಆಸ್ಟ್ರೇಲಿಯಾದಲ್ಲಿಯೂ ಅನೇಕ ಭಾರತೀಯ ಸಂಜಾತ ಫ್ಯಾನ್ ಗಳನ್ನು ಹೊಂದಿದ್ದರು.

ಅವರ ಸಾವು ಆಸ್ಟ್ರೇಲಿಯಾದಲ್ಲಿರುವ ಭಾರತೀಯ ಸಮುದಾಯವನ್ನು ಆಘಾತಕ್ಕೀಡು ಮಾಡಿದೆ. ಅನೇಕ ಅಭಿಮಾನಿಗಳು ಅವರ ಸಾವಿಗೆ ಜಾಲತಾಣಗಳಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಬಿಜೆಪಿ ನಾಯಕನನ್ನು ಗುಂಡಿಟ್ಟು ಹತ್ಯೆಗೈದ ದುಷ್ಕರ್ಮಿಗಳು

 

Related Articles

Back to top button