Kannada NewsLatest

ಶಾಸಕಿ ಲಕ್ಷ್ಮೀ ಹೆಬ್ಬಾಳಕರಗೆ ‘Development Queen’ ಬಿರುದು ಕೊಟ್ಟ ಜನತೆ; ಅಭಿಮಾನದ ದ್ಯೋತಕವಾಗಿ ಬಂತು ಸ್ಟಿಕ್ಕರ್

ಪ್ರಗತಿವಾಹಿನಿ ನ್ಯೂಸ್, ಬೆಳಗಾವಿ: ತಮ್ಮ ನಿರಂತರ ಕ್ರಿಯಾಶೀಲತೆ, ಜನಪರತೆ, ಅಭೂತಪೂರ್ವ ಅಭಿವೃದ್ಧಿ ಕಾರ್ಯದಿಂದ ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನಮನ ಗೆದ್ದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಕ್ಷೇತ್ರದ ಜನತೆ ‘Fire Brand Lady’,  ‘Development Queen’ ಎಂದು ಕರೆದಿದೆ.

ಈ ಅಭಿಮಾನದ ದ್ಯೋತಕವಾಗಿ ಈಗ ಅಭಿಮಾನಿಗಳೇ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರ ಹೆಸರಿನ ಸ್ಟಿಕ್ಕರ್ ಗಳನ್ನು ತಯಾರಿಸಿ ಅದನ್ನು ಅವರ ಕೈಯ್ಯಿಂದಲೇ ಬಿಡುಗಡೆಗೊಳಿಸಿ ತಮ್ಮ ವಾಹನಗಳಿಗೆ ಅಂಟಿಸಿಕೊಂಡಿದ್ದಾರೆ.

ವೃತ್ತಾಕಾರದ  ಸ್ಟಿಕ್ಕರ್ ನಲ್ಲಿ ಲಕ್ಷ್ಮೀ ಹೆಬ್ಬಾಳಕರ ಅವರ ಭಾವಚಿತ್ರವಿದ್ದು ಅದರಲ್ಲಿ ‘Fire Brand Lady’ ಹಾಗೂ  ‘Development Queen’ ಎಂದು ನಮೂದಿಸಲಾಗಿದೆ.

 

ಲಕ್ಷ್ಮೀ ಹೆಬ್ಬಾಳಕರ ಅವರು ಬೆಳಗಾವಿ ಗ್ರಾಮಿಣ ಕ್ಷೇತ್ರದ ಶಾಸಕಿಯಾದಾಗಿನಿಂದ ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವವೇ ಆರಂಭಗೊಂಡಿದೆ. ಎಲ್ಲ ರೀತಿಯ ಮೂಲ ಸೌಕರ್ಯಗಳ ಅಭಿವೃದ್ಧಿಯ ಜೊತೆಜೊತೆಯಲ್ಲೇ ಕ್ಷೇತ್ರದಲ್ಲಿ ಮಹಿಳೆಯರ ಸಬಲೀಕರಣದೊಂದಿಗೆ ನೊಂದವರಿಗೆ ನೆರವಾಗಿ, ಸಾಧಕರಿಗೆ ಪ್ರೋತ್ಸಾಹಕರಾಗಿ ಅವರು ನಿರ್ವಹಿಸಿದ ಜನಸೇವೆ ಅಪಾರ ಮನ್ನಣೆ ಗಳಿಸಿದ್ದಕ್ಕೆ ಈ ಸ್ಟಿಕ್ಕರ್ ಸಾಕ್ಷಿಯಾಗಿದೆ.

ವಿಶೇಷವಾಗಿ ಕ್ಷೇತ್ರದ ಯುವಜನತೆ ಲಕ್ಷ್ಮೀ ಹೆಬ್ಬಾಳಕರ ಅವರನ್ನು ಅಭಿವೃದ್ಧಿಯ ಐಕಾನ್ ಆಗಿ ಸ್ವೀಕರಿಸಿದ್ದು ಸ್ವಯಂ ಪ್ರೇರಣೆಯಿಂದ ಯುವಕರೇ ಸಿದ್ಧಪಡಿಸಿ ವಿತರಿಸುತ್ತಿರುವ ಈ ಸ್ಟಿಕ್ಕರ್ ಗಳು ವ್ಯಾಪಕವಾಗಿ ಬೇಡಿಕೆ ಪಡೆದಿವೆ.

ಶನಿವಾರ ಸ್ಟಿಕ್ಕರ್ ಗಳನ್ನು ಬಿಡುಗಡೆಗೊಳಿಸಿದ ಲಕ್ಷ್ಮೀ ಹೆಬ್ಬಾಳಕರ ಅವರ ಕೈಯ್ಯಿಂದಲೇ ತಮ್ಮ ವಾಹನಗಳಿಗೆ ಅವುಗಳನ್ನು ಅಂಟಿಸಿಕೊಂಡು ಯುವಜನ ಕೃತಾರ್ಥತೆ ಹೊಂದಿದ್ದಾರೆ.

ಇದಕ್ಕೆ ಪ್ರತಿಯಾಗಿ ಲಕ್ಷ್ಮೀ ಹೆಬ್ಬಾಳಕರ ಅವರು “ನನ್ನ ಮೇಲಿರುವ ವಾತ್ಸಲ್ಯಭರಿತ ಪ್ರೀತಿಯನ್ನು ಈ ಅಭಿಮಾನಿಗಳು ಸ್ಟಿಕರ್ ಗಳ ಮೂಲಕ ತೋರಿಸುತ್ತಿರುವುದು ಮನಸ್ಸಿಗೆ ಖುಷಿ ಎನಿಸುತ್ತಿದೆ. ನಿಮ್ಮ ಅಭಿಮಾನದಿಂದಲೇ ನಾನು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿಯಾಗಿದ್ದೇನೆ, ಈ ಸಂದರ್ಭದಲ್ಲಿ ಒಟ್ಟಾರೆಯಾಗಿ ಕ್ಷೇತ್ರದ ಎಲ್ಲ ಹಿರಿಯರಿಗೆ, ಕಿರಿಯರಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು. ನಿಮ್ಮೆಲ್ಲರ ಪ್ರೀತಿ, ಪ್ರೋತ್ಸಾಹ, ಆಶೀರ್ವಾದ ಸದಾಕಾಲವೂ ಹೀಗೆಯೇ ಮುಂದುವರೆಯಲಿ ಎಂದು ಕೇಳಿಕೊಳ್ಳುತ್ತೇನೆ.” ಎಂದು ಹೇಳಿದ್ದಾರೆ.

ನಾಳೆ 6 ರೈಲುಗಳ ಸಂಚಾರ ಸ್ಥಗಿತ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button