
ಪ್ರಗತಿವಾಹಿನಿ ಸುದ್ದಿ, ಮುಂಬೈ: ಭಾರತದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ಪತ್ರಿಕಾಗೋಷ್ಠಿಯೊಂದರಲ್ಲಿ ‘Sexy’ ಎಂಬ ಪದ ಬಳಕೆಗೆ ತಪ್ಪಿಸಲು ಅನುಮಾನಿಸಿ, ಅಳುಕಿದ ವಿಡಿಯೊವೊಂದು ಈಗ ವೈರಲ್ ಆಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ “ನಾವು ಉತ್ತಮ ಫಲಿತಾಂಶ ನೀಡುವ ದಾಳಿಯುಕ್ತ ಬೌಲಿಂಗ್ ಹೊಂದಿದ್ದೇವೆಂಬ ಬಗ್ಗೆ ನನಗೆ ಸಂಪೂರ್ಣ ವಿಶ್ವಾಸವಿದೆ” ಎಂದ ಅವರು, “ಊಮ್.. ನಾನೊಂದು ಪದ ಬಳಸಲು ಬಯಸಿದ್ದೆ. ಆದರೆ ಅದು ಸಾಧ್ಯವಿಲ್ಲ” ಎಂದರು.
ಈ ಅಂಶದಿಂದ ಕುತೂಹಲಗೊಂಡ ಪತ್ರಕರ್ತರೊಬ್ಬರು ಅದು ಯಾವ ಶಬ್ದ ಎಂದು ಕೇಳಿದಾಗ “ಅದು ನಾಲ್ಕು ಅಕ್ಷರಗಳ ಶಬ್ದ ‘S’ ನಿಂದ ಪ್ರಾರಂಭವಾಗುತ್ತದೆ” ಎಂದಷ್ಟೇ ಒಗಟಾಗಿ ಹೇಳಿದ್ದಾರೆ.
ಮಾಜಿ ಪತ್ನಿಯೊಂದಿಗೆ ಸಿಕ್ಕಾಪಟ್ಟೆ ಪ್ರೀತಿಯಲ್ಲಿದ್ದಾರಂತೆ ನಟ ಗುಲ್ಶನ್ ದೇವಯ್ಯ




