ಸರ್ವ ಧರ್ಮಗಳನ್ನು ಗೌರವಿಸುವ ಪ್ರವೃತ್ತಿ ಬೆಳೆಯಲಿ: ಶಾಸಕಿ ಲಕ್ಷ್ಮೀ ಹೆಬ್ಬಾಳಕರ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬುದ್ಧ, ಬಸವ, ಅಂಬೇಡ್ಕರ್, ಏಸುಕ್ರಿಸ್ತ ಮುಂತಾದ ಮಹನೀಯರು ಜಗತ್ತಿಗೆ ಶಾಂತಿ, ಪ್ರೀತಿ, ವಾತ್ಸಲ್ಯಗಳ ಮೂಲಕ ನಾವೆಲ್ಲರೂ ಭಾರತೀಯ ಮಕ್ಕಳು ಎಂದು ತೋರಿಸಿಕೊಟ್ಟಿದ್ದಾರೆ. ಇಂದು ಈ ಎಲ್ಲ ಮಹನೀಯರ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ನಮ್ಮ ಜೀವನಕ್ಕೆ ಒಂದು ಅರ್ಥ ಸಿಗಲಿದೆ ಎಂದು ಬೆಳಗಾವಿ ಗ್ರಾಮಿಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.
ಗಣೇಶಪುರ ಶಿವಂ ನಗರದಲ್ಲಿರುವ ಸೆಂಟ್ ಜಾನ್ ಬಾಪ್ಟಿಸ್ಟ್ ಚರ್ಚ್ ಸುತ್ತಮುತ್ತಲಿನ ರಸ್ತೆಗಳನ್ನು ನಿರ್ಮಾಣ ಮಾಡಿಕೊಟ್ಟ ಹಿನ್ನಲೆಯಲ್ಲಿ ಚರ್ಚಿನ ಪದಾಧಿಕಾರಿಗಳಿಂದ ಸನ್ಮಾನ ಸ್ವೀಕರಿಸಿ ಭಾನುವಾರ ಮಾತನಾಡಿದರು.
ದೇವನೊಬ್ಬ ನಾಮ ಹಲವು ಎನ್ನುವ ಹಾಗೆ, ವಿವಿಧ ಧರ್ಮೀಯರು ತಮ್ಮದೇ ಆದ ಪದ್ಧತಿಯಲ್ಲಿ ದೇವರನ್ನು ಸ್ಮರಿಸುತ್ತಾರೆ. ಆದರೆ ಎಲ್ಲ ಧರ್ಮಗಳ ಸಾರವೂ ಒಂದೇ ಆಗಿದ್ದು ಸರ್ವ ಧರ್ಮಗಳನ್ನು ಗೌರವಿಸುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದು ಅವರು ಹೇಳಿದರು.
ಇದೇ ವೇಳೆ ಚರ್ಚ್ ವತಿಯಿಂದ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹಾಗೂ ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳಕರ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಚರ್ಚಿನ ಫಾದರ್ ಮೈಕೆಲ್ ಫರ್ನಾಂಡಿಸ್, ಸಿಸ್ಟರ್ ರೀನಾ, ಚರ್ಚಿನ ಸದಸ್ಯರು, ಸಂತೋಷ ಫರ್ನಾಂಡಿಸ್, ಮಿಲನ್ ಡಿಸೋಜಾ ಹಾಗೂ ಶಿವಂ ನಗರದ ನಿವಾಸಿಗಳು ಉಪಸ್ಥಿತರಿದ್ದರು.
ನಿದ್ದೆಗೆಡಿಸಿದ ಚಿರತೆ: ಬೆಳ್ಳಂಬೆಳಗ್ಗೆ ಗಾಲ್ಫ್ ಮೈದಾನದ ತುಂಬ ಪೊಲೀಸ್, ಅರಣ್ಯ ಸಿಬ್ಬಂದಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ