ಚುನಾವಣೆಗೆ ನಿಲ್ಲಲೆಂದು ಅಂದು ಹೊಸ ಪ್ಯಾಂಟ್ ಹೊಲಿಸಿದ್ದ ಉಮೇಶ ಕತ್ತಿ! ; ನನಸಾಗಲೇ ಇಲ್ಲ 2 ರಾಜ್ಯದ ಕನಸು
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – 1985ರಲ್ಲಿ ಉಮೇಶ ಕತ್ತಿಯವರ ತಂದೆ, ಹಾಲಿ ಶಾಸಕ ವಿಶ್ವನಾಥ ಕತ್ತಿ ವಿಧಿವಶರಾಗುತ್ತಾರೆ. ಆಗ ಹಿರಿಯರೆಲ್ಲ ಸೇರಿ ಉಮೇಶ ಕತ್ತಿಯನ್ನೇ ಉಪಚುನಾವಣೆಗೆ ಕಣಕ್ಕಿಳಿಸುವ ತೀರ್ಮಾನ ತೆಗೆದುಕೊಳ್ಳುತ್ತಾರೆ.
ಆ ಸಂದರ್ಭದಲ್ಲಿ ಉಮೇಶ ಕತ್ತಿ ಆಗಷ್ಟೆ ಕಾಲೇಜು ಮುಗಿಸಿದ್ದರು. ರಾಜಕೀಯ ಅನುಭವ ಕಡಿಮೆ. ಆಗ ರಾಜಕಾರಣಕ್ಕೆ ಬೇಕಾದ ಡ್ರೆಸ್ ಕೂಡ ಇರಲಿಲ್ಲ. ಹಾಗಾಗಿ ಚುನಾವಣೆಗೆ ನಿಲ್ಲಲೆಂದು ಹೊಸ ಪ್ಯಾಂಟ್ ಹೊಲಿಸಿದ್ದೆ, ಹಿರಿಯರು ಹೊಸ ಟೋಪಿ ತಂದು ತೊಡಿಸಿದ್ದರು. ಚುನಾವಣೆ ಎಂದರೇನೆಂದೇ ನನಗೆ ಗೊತ್ತಿರಲಿಲ್ಲ ಎಂದು ಈಚೆಗಷ್ಟೆ ಪ್ರಗತಿವಾಹಿನಿ ಜೊತೆಗೆ ತಮ್ಮ ಜೀವನ ಕಥೆ ಹೇಳಿಕೊಂಡಿದ್ದರು.
ಮೊದಲ ಚುನಾವಣೆಯಲ್ಲೇ ಭರ್ಜರಿ ಜಯಗಳಿಸಿದ ಅವರು ನಂತರದಲ್ಲಿ ರಾಜಕೀಯದಲ್ಲಿ ಒಂದೊಂದೇ ಮೆಟ್ಟಿಲು ಏರುತ್ತ ಬೆಳೆದರು. ಒಟ್ಟೂ 8 ಬಾರಿ, 6 ವಿವಿಧ ಪಕ್ಷಗಳಿಂದ ಸ್ಪರ್ಧಿಸಿ ಗೆದ್ದಿದ್ದ ಅವರು ಒಂದು ಬಾರಿ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು.
4 ಬಾರಿ ಸಚಿವರಾಗಿ ಕೆಲಸ ಮಾಡಿದ್ದರು.
ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ ಎಂದು ಪದೇ ಪದೆ ಹೇಳುತ್ತಿದ್ದ ಅವರು ಪ್ರತ್ಯೇಕ ರಾಜ್ಯದ ಕನಸು ಕಂಡಿದ್ದರು. 2024ರ ಲೋಕಸಭೆ ಚುನಾವಣೆ ಬಳಿಕ ಕರ್ನಾಟಕ 2 ರಾಜ್ಯಗಳಾಗಿ ವಿಭಾಗವಾಗಲಿದೆ. ದೇಶದಲ್ಲಿ 50 ಹೊಸ ರಾಜ್ಯಗಳಾಗಲಿವೆ ಎಂದಿದ್ದರು.
ಮುಂದೊಂದು ದಿನ ನಾನೂ ಮುಖ್ಯಮಂತ್ರಿಯಾಗಲಿದ್ದೇನೆ. ಇನ್ನೂ ನನಗೆ ಸಾಕಷ್ಟು ಅವಕಾಶಗಳಿವೆ ಎಂದು ಹೇಳುತ್ತಿದ್ದರು.
ಬುಧವಾರ ಸರಕಾರಿ ಕಚೇರಿ, ಶಾಲೆ, ಕಾಲೇಜುಗಳಿಗೆ ರಜೆ
https://pragati.taskdun.com/latest/wednesday-is-a-holiday-for-government-offices-schools-and-colleges/
https://pragati.taskdun.com/karnataka-news/2-state-in-karnataka-after-2024-50-new-state-in-the-country-umesh-katti/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ