ಪ್ರಗತಿವಾಹಿನಿ ಸುದ್ದಿ, ನ್ಯೂಯಾರ್ಕ್: ಯುಎಸ್ ನ ನೆವಾಡದಲ್ಲಿ ಒಂಬತ್ತು ದಿನಗಳ ಬರ್ನಿಂಗ್ ಮ್ಯಾನ್ ಫೆಸ್ಟಿವಲ್ ಕೊನೆಗೊಂಡ ಬೆನ್ನಿಗೇ ಭಾರೀ ಪ್ರಮಾಣದಲ್ಲಿ ಉಂಟಾದ ಟ್ರಾಫಿಕ್ ಜಾಮ್ ಘಟನೆಯ ಚಿತ್ರಗಳು ವೈರಲ್ ಆಗಿವೆ.
ಬರ್ನಿಂಗ್ ಮ್ಯಾನ್ ಫೆಸ್ಟಿವಲ್ ಸೋಮವಾರ ಕೊನೆಗೊಂಡಿತ್ತು. ಈ ವೇಳೆ ಬ್ಲಾಕ್ ರಾಕ್ ಮರುಭೂಮಿಯಲ್ಲಿನ ಸ್ಥಳದಿಂದ ಹೊರಡುವವರು ಎಂಟು ಗಂಟೆಗಳ ಕಾಲ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡು ಫಜೀತಿಪಟ್ಟರು.
ಅನೇಕರು ದಾರಿಯುದ್ದಕ್ಕೂ ನಿಲ್ದಾಣಗಳಲ್ಲಿ ಇಂಧನ ಕೊರತೆ ಅನುಭವಿಸಿದರು. ಟ್ರಾಫಿಕ್ ಜಾಮ್ ಚಿತ್ರದಲ್ಲಿ ಹಲವು ಕಿ.ಮೀ. ಉದ್ದಕ್ಕೂ ವಾಹನಗಳು ನಿಂತಿರುವುದು ಕಂಡುಬರುತ್ತಿದ್ದು ಮೇಲ್ನೋಟಕ್ಕೆ ಅತ್ಯದ್ಭುತವಾಗಿ ಕಾಣುತ್ತಿದ್ದರೂ ಅಲ್ಲಿ ಜನ ಪಟ್ಟ ಕಿರಿಕಿರಿ ಮಾತ್ರ ಹೇಳತೀರದು.
ಪಾಕಿಸ್ತಾನದಲ್ಲಿ ಇರುವಿಕೆ ಸಾಬೀತುಪಡಿಸಿದ ಭಾರತೀಯ ವಿಮಾನ ಹೈಜಾಕ್ ಮಾಡಿದ ಮೋಸ್ಟ್ ವಾಂಟೆಡ್ ಉಗ್ರ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ