Latest

ಚಂಡಮಾರುತ ಭೀತಿ; ಮತ್ತೆ ಭಾರಿ ಮಳೆ ಎಚ್ಚರಿಕೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಈಗಾಗಲೇ ವರುನಾರ್ಭಟಕ್ಕೆ ಕರುನಾಡು ತತ್ತರಗೊಂಡಿದ್ದು, ನಿನ್ನೆ ಕೊಂಚ ತಣ್ಣಗಾಗಿದ್ದ ಮಳೆರಾಯ ಇಂದು ಮುಂಜಾನೆಯಿಂದಲೇ ಮತ್ತೆ ಅಬ್ಬರಿಸಲು ಆರಂಭಿಸಿದ್ದಾನೆ. ಮಳೆ ಅವಾಂತರದಿಂದ ಕಂಗೆಟ್ಟಿರುವ ರಾಜ್ಯದ ಜನತೆಗೆ ಮತ್ತೊಂದು ಶಾಕ್ ನೀಡಿರುವ ಹವಾಮಾನ ಇಲಾಖೆ ಚಂಡಮಾರುತ ಬೀಸುವ ಎಚ್ಚರಿಕೆಯೊಂದಿಗೆ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದೆ.

ಮುಂದಿನ ಎರಡು ದಿನಗಳ ಕಾಲ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆಯಾಗಲಿದೆ. ಚಂಡಮಾರುತದ ಪರಿಚಲನೆಯಿಂದಾಗಿ ಕರ್ನಾಟಕ ಹಾಗೂ ಅಕ್ಕಪಕ್ಕದ ರಾಜ್ಯಗಳಲ್ಲಿ ಮಳೆ ಅಬ್ಬರ ಇನ್ನಷ್ಟು ಜೋರಾಗಲಿದೆ.

ಕರಾವಳಿ ಜಿಲ್ಲೆಗಳು ಹಾಗೂ ದಕ್ಷಿಣ ಒಳನಾಡಿನಲ್ಲಿ ಇಂದು ನಾಳೆ ಹಾಗೂ ಸೆ 9,10ರಂದು ಭಾರಿ ಮಳೆಯಾಗಲಿದೆ ಎಂದು ತಿಳಿಸಿದೆ. ಪೂರ್ವ, ಮಧ್ಯ, ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ಬೀಸಲಿದ್ದು, ರಾಯಲಸೀಮಾ ಹಾಗೂ ದಕ್ಷಿಣ ಒಳನಾಡಿನ ಕರ್ನಾಟಕದಾದ್ಯಂತ ಉತ್ತರ ಕೇರಳದವರೆಗೆ ಚಂಡಮಾರುತ ಬೀಸಲಿದೆ. ಈ ಹಿನ್ನೆಲೆಯಲ್ಲಿ ಮಳೆಯ ಪ್ರಮಾಣ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದೆ.

ಈಗಾಗಲೇ ರಾಜಧಾನಿ ಬೆಂಗಳೂರಿನಲ್ಲಿ ಪ್ರವಾಹ ಪರಿಸ್ಥಿತಿ ಸ್ವಲ್ಪ ಇಳಿಮುಖವಾಗುತ್ತಿದ್ದರೂ ಮಳೆಯಿಂದಾಗಿರುವ ಅವಾಂತರಗಳು ಮಾತ್ರ ನಿಂತಿಲ್ಲ. ಈ ಹಿನ್ನೆಲೆಅಲ್ಲಿ ಐಟಿ ಕಂಪನಿಗಳಾದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಹಾಗೂ ವಿಪ್ರೋ ಸೇರಿದಂತೆ ಹಲವು ಕಂಪನಿಗಳು ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಂ ಘೋಷಿಸಿವೆ.
ಬೆಂಗಳೂರು ವರುಣಾರ್ಭಟ: ಕೋಟ್ಯಾಧಿಪತಿಗಳ ಕಾರು, ಬಂಗಲೆಗಳಿಗೂ ಜಲಕಂಟಕ

https://pragati.taskdun.com/latest/karnataka-bengaluru-heavyrain-flood-richest-people-car-bangllow-submereged/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button