Latest

ಗಣೇಶನ ಮುಂದೆ ರಶ್ಮಿಕಾ ಎಡವಟ್ಟು; ಫ್ಯಾನ್ ಗಳೂ ಗರಂ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ನಟಿ ರಶ್ಮಿಕಾ ಮಂದಣ್ಣಗೆ ಅವರ ಫ್ಯಾನ್ ಗಳೇ ಜಾಲತಾಣದಲ್ಲಿ ತಿವಿಯತೊಡಗಿದ್ದಾರೆ.

“ಯಾವ ಜಾಗದಲ್ಲಿ ಹೇಗಿರಬೇಕು ತಿಳಿದಿಲ್ವಾ?” ಅಂತಲೂ ಪ್ರಶ್ನಿಸುತ್ತಿದ್ದಾರೆ. ಇದಕ್ಕೆ ಕಾರಣವೂ ಉಂಟು. ತಮ್ಮದೇ ನಟನೆಯ ‘ಗುಡ್ ಬೈ’ ಚಿತ್ರದ ಟ್ರೇಲರ್ ಲಾಂಚಿಂಗ್  ಸಮಾರಂಭದಲ್ಲಿ ಪಾಲ್ಗೊಳ್ಳಲು ರಶ್ಮಿಕಾ ಮಾಡರ್ನ್ ಉಡುಪಿನಲ್ಲಿ ಹೋಗಿದ್ದರು.  ಎದೆ ಭಾಗದ ಅಗತ್ಯಕ್ಕಿಂತ ಹೆಚ್ಚು ಎಕ್ಸ್ ಪೋಸ್ ನಲ್ಲಿ ಅವರು ಬೋಲ್ಡ್ ಆಗಿ ಕಾಣುತ್ತಿದ್ದರು.

ಇಷ್ಟೇ ಕಾರ್ಯಕ್ರಮ ಮುಗಿಸಿ ಬಂದಿದ್ದರೆ ಬಹುಶಃ ಫ್ಯಾನ್ ಗಳು ಜಾಲತಾಣದಲ್ಲಿ ಕಿವಿ ಹಿಂಡುವ ಕೆಲಸ ಮಾಡಬೇಕಾಗಿ ಬರುತ್ತಿರಲಿಲ್ಲವೇನೋ. ಅಲ್ಲಿನ ಕಾರ್ಯಕ್ರಮ ಮುಗಿಸಿದವರೇ ಸಮೀಪದಲ್ಲಿರುವ ಗಣೇಶ ದೇಗುಲಕ್ಕೆ ದರ್ಶನ ಪಡೆಯಲು ಹೋಗಿದ್ದಾರೆ.

ಅಲ್ಲಿ ಅವರ ಅಪಾರ ಸಂಖ್ಯೆಯ ಫ್ಯಾನ್ ಗಳೂ ಜಮಾಯಿಸಿದ್ದರು. ಟ್ರೇಲರ್ ಲಾಂಚಿಂಗ್ ಕಾರ್ಯಕ್ರಮದವರೆಗೆ ಅವರ ಬೋಲ್ಡ್ ಅವತಾರಕ್ಕೆ ಕ್ಲೀನ್ ಬೋಲ್ಡ್ ಆಗಿದ್ದವರೂ  ಈ ವೇಳೆ  ಅಸಮಾಧಾನಗೊಂಡರು. ದೇವಾಲಯಕ್ಕೆ ಬರುವಾಗ ಇಂಥ ವೇಷ ಬೇಕಿತ್ತಾ ಎಂದು ಕೆಲವರು ಕಿಡಿಯಾದರು.

Home add -Advt

ಇದೀಗ ಬಹು ಚರ್ಚೆಯ ವಿಷಯವಾಗಿ ಪರಿಣಮಿಸಿದೆ. ಜಾಲತಾಣಗಳಲ್ಲಿ ಪರ- ವಿರೋಧದ ಚರ್ಚೆ ಕೂಡ ಆರಂಭವಾಗಿದೆ.

ಪ್ರವೀಣ್ ನೆಟ್ಟಾರು ಹತ್ಯೆ ಕೇಸ್; SDPI ಮುಖಂಡನ ನಿವಾಸದ ಮೇಲೆ NIA ದಾಳಿ

Related Articles

Back to top button