ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಕಾಂಗ್ರೆಸ್ ಪಕ್ಷ ಮಹತ್ವಾಕಾಂಕ್ಷೆಯ ಭಾರತ್ ಜೋಡೊ ಕಾರ್ಯಕ್ರಮ ಆಯೋಜಿಸಿದೆ. ಈ ಅಭಿಯಾನವನ್ನು ಶತಾಯುಗತಾಯ ಕಳೆಗುಂದುವಂತೆ ಮಾಡುವುದು ಬಿಜೆಪಿಯ ಗುರಿಯಾಗಿದೆ. ಹಾಗಾಗಿ ಬಿಜೆಪಿ ಈಗ ರಾಹುಲ್ ಗಾಂಧಿ ಅವರ ಟಿ ಶರ್ಟ್ ಮೇಲೂ ಕಣ್ಣು ಹಾಕಿದೆ. ಭಾರತ್ ಜೋಡೋ ರ್ಯಾಲಿಯಲ್ಲಿ ರಾಹುಲ್ ಗಾಂಧಿ ಧರಿಸಿರುವ ಬಿಳಿ ಬಣ್ಣದ ಟಿ ಷರ್ಟ್ ಬರ್ಲಬೆರ್ರಿ ಕಂಪನಿಯದ್ದಾಗಿದ್ದು ಇದರ ಬೆಲೆ 41250 ರೂ. ಎನ್ನಲಾಗಿದೆ.
ರಾಹುಲ್ ಗಾಂಧಿ ಅವರ ಟಿ ಶರ್ಟ್ ಬಗ್ಗೆ ಬಿಜೆಪಿಯ ಅಧೀಕೃತ ಟ್ವಿಟರ್ ಹ್ಯಾಂಡಲ್ ನಿಂದ ಟ್ವೀಟ್ ಮಾಡಲಾಗಿದ್ದು ಭಾರತ್ ದೇಖೋ ( ಭಾರತವೇ ನೋಡು ) ಎಂದು ಉಲ್ಲೇಖಿಸಲಾಗಿದೆ.
ಆದರೆ ಇದಕ್ಕೆ ಅಷ್ಟೇ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಧಿರಿಸಿನ ಬಗ್ಗೆಯೇ ಮಾತಾಡುವುದಾದರೆ ಪ್ರಧಾನಿ ಮೋದಿ ಅವರ 10 ಲಕ್ಷ ರೂ. ಸೂಟ್ ಬಗ್ಗೆ ಮಾತಾಡಬೇಕಾಗುತ್ತದೆ ಎಂದಿದೆ.
ಕಾಡಾನೆ ದಾಳಿಗೆ ವ್ಯಕ್ತಿ ಬಲಿ; ರಣಾಂಗಣವಾದ ಅರಣ್ಯ ಇಲಾಖೆ ಆವರಣ
https://pragati.taskdun.com/latest/elephant-attackvillegers-protestlathichargechikkamagaloremudigere/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ