ಪ್ರಗತಿವಾಹಿನಿ ಸುದ್ದಿ; ತುಮಕೂರು: ತುಮಕೂರು ಜಿಲ್ಲೆಯ ಶಿರಾ ನಗರಸಭೆಯ ಜೆಡಿಎಸ್ ಸದಸ್ಯ ರವಿಶಂಕರ್ ಆಯ್ಕೆಯನ್ನು ಕೋರ್ಟ್ ಅಸಿಂಧುಗೊಳಿಸಿ ಆದೇಶ ಹೊರಡಿಸಿದೆ.
ರವಿಶಂಕರ್ ವಿರುದ್ಧ ಅಪರಾಧ ಕೃತ್ಯದ ಆರೋಪ ಕೇಳಿಬಂದಿತ್ತು. ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಶಿರಾ ಜೆ ಎಂ ಎಫ್ ಸಿ ಕೋರ್ಟ್ ರವಿಶಂಕರ್ ಆಯ್ಕೆಯನ್ನು ಅಸಿಂಧುಗೊಳಿಸಿದೆ.
ಚೆಕ್ ಬೌನ್ಸ್ ಪ್ರಕರಣ, ಕೋಮುಗಲಭೆಸೃಷ್ಟಿ, ಅಪಘಾತ ಪ್ರಕರಣಗಳು ರವಿಶಂಕರ್ ವಿರುದ್ಧ ದಾಖಲಾಗಿತ್ತು. ನಾಮಪತ್ರ ಸಲ್ಲಿಸುವ ವೇಳೆ ತಮ್ಮ ಮೇಲೆ ದಾಖಲಾಗಿರುವ ಎಲ್ಲಾ ಪ್ರಕರಣಗಳ ವಿವರಗಳನ್ನು ಅಫಿಡವಿಟ್ ನಲ್ಲಿ ಉಲ್ಲೇಖಿಸಿ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಬೇಕು. ಆದರೆ ಈ ಬಗ್ಗೆ ಮಾಹಿತಿ ನೀಡದೇ ಮುಚ್ಚಿಟ್ಟಿದ್ದರು. ಅಲ್ಲದೇ ರವಿಶಂಕರ್ ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ನಾಮಪತ್ರದಲ್ಲಿ ತನ್ನ ಬಳಿ 4 ಕೋಟಿ ಮೌಲ್ಯದ ಆಸ್ತಿ ಇದೆ ಎಂದು ಉಲ್ಲೇಖಿಸಿದ್ದರು.
ಕೋಟಿಗಟ್ಟಲೆ ಆಸ್ತಿಯಿದ್ದರೂ ಬಿಪಿಎಲ್ ಕಾರ್ಡ್ ಪಡೆದು ಸರ್ಕಾರದಿಂದ ಉಚಿತ ರೇಷನ್ ಪಡೆಯುತ್ತಿದ್ದರು.
ಈ ಹಿನ್ನೆಲೆಯಲ್ಲಿ ಶಿರಾ ಕೋರ್ಟ್ ನ್ಯಾ.ಗೀತಾಂಜಲಿ ವಾರ್ಡ್ ನಂಬರ್ 9ರಿಂದ ಆಯ್ಕೆಯಾದ ರವಿಶಂಕರ್ ಸದಸ್ಯತ್ವ ರದ್ದುಗೊಳಿಸಿ ಉಪಚುನಾವಣೆ ನಡೆಸುವಂತೆ ಆದೇಶಿಸಿದ್ದಾರೆ.
https://pragati.taskdun.com/latest/high-courtstay-for-package-tenderkarwar/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ