Kannada NewsLatest

ಬೆಳಗಾವಿಯಲ್ಲಿ 17 ಸೇತುವೆಗಳು ಮುಳುಗಡೆ; ಮತ್ತಷ್ಟು ಹೆಚ್ಚುತ್ತಿದೆ ಪ್ರವಾಹ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಪಶ್ಚಿಮ ಘಟ್ಟ ಭಾಗದಲ್ಲಿ ಭಾರಿ ಮಳೆಯಿಂದಾಗಿ ಬೆಳಗಾವಿ ಜಿಲ್ಲೆಯಲ್ಲಿ ವರುಣಾರ್ಭಟಕ್ಕೆ 17 ಸೇತುವೆಗಳು ಮುಳುಗಡೆಯಾಗಿದ್ದು, ಕ್ಷಣ ಕ್ಷಕ್ಕೂ ಪ್ರವಾಹ ಭೀತಿ ಎದುರಾಗಿದೆ. ಹಲವು ಗ್ರಾಮಗಳು ಸಂಪರ್ಕ ಕಳೆದುಕೊಂಡಿದ್ದು, ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಗೊಕಾಕ್-ಸಿಂಗಾಪುರ, ಗೊಕಾಕ್ -ಚಿಗಡೊಳ್ಳಿ, ಮುಡಲಗಿ-ಸುಣದೊಳ್ಳಿ, ಸುಣದೊಳ್ಳಿ-ಪಟಗುಂಡಿ, ಮೂಡಲಗಿ ಕಮಲದಿನ್ನಿ, ಕಮಲದಿನಿ-ಹುಣಶಾಡ, ಕುಲಗೊಡ-ಔರಾದಿ, ಔರಾದಿ-ಮಹಾಲಿಂಗಪುರ, ಕುಲಗೊಡ-ಸಣಡೊಳ್ಳಿ ಸಣದೊಳ್ಳಿ-ಮೂಡಳ್ಳಿ, ಕುಳಗೋಡ-ಡವಳೇಶ್ವರ, ದವಳೇಶ್ವರ-ಮಾಹಾಲಿಂಗಪುರ ಸೇತುವೆಗಳು ಜಲಾವೃತಗೊಂಡಿವೆ.

ಇನ್ನು ಸಿಂಗಳಾಪುರ-ಹುಕ್ಕೇರಿ, ಹುಕ್ಕೇರಿ-ನೋಗಿನಾಳ, ನೋಗಿನಾಳ-ಗೋಡಗೇರಿ, ಹುಕ್ಕೇರಿ-ಅರ್ಜುನವಾಡ, ಅರ್ಜುನವಾಡ-ಕುರಣಿ, ಸಂಕೇಶ್ವರ- ,ಯಲ್ಮರಡಿ-ಕುರಣಿ, ಕುರಣಿ-ಕೋಚರಿ, ಯಲಮರಡಿ-ಯರ್ನಾಳ, ಯರ್ನಾಳ- ಹುಕ್ಕೇರಿ, ಯಲಮರಡಿ-ಬೋಡಗೇರಿ, ಬೋಡಗೇರಿ-ನೋಗಿನಾಳ, ಸದಲಗಾ-ಬಜವಾಡಿ, ಬಜವಾಡಿ-ನಿಪ್ಪಾಣಿ, ಸದಲಗಾ-ಬೋಜ, ಬೋಜ-ಕಾರಜಗ, ಸಿದ್ನಾಳ-ಅಕ್ಕೋಳ, ಭೀವಶಿಯಿಂದ -ಜತ್ರಾಟಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಗಳು ಮುಳುಗಡೆಯಾಗಿವೆ.

ಹಿಡಕಲ್ ಜಲಾಶಯದಿಂದ ಘಟಪ್ರಭಾನದಿಗೆ 27,000 ಕ್ಯೂಸೆಕ್ ನೀರು ಬಿಡಲಾಗಿದ್ದು, ಜಿಲ್ಲೆಯಾದ್ಯಂತ ಪ್ರವಾಹ ಪರಿಸ್ಥಿತಿಯುಂಟಾಗಿದೆ.

ಘಟಪ್ರಭಾ ನದಿ ಪ್ರವಾಹಕ್ಕೆ ಗೋಕಾಕ್ ತಾಲೂಕಿನಲ್ಲಿಯೂ ಪ್ರವಾಹ ಪರಿಸ್ಥಿತಿಯುಂಟಾಗಿದ್ದು, ಇಲ್ಲಿನ ಹಳೆ ದನದ ಪೇಟೆ, ಉಪ್ಪಾರ ಓಣಿ ಹಾಗೂ ಹಲವು ಮನೆಗಳಿಗೆ ನದಿ ನೀರು ನುಗ್ಗಿದೆ. ಲೋಳಸೂರ-ಚಿಕ್ಕೋಲಿ ಸೇತುವೆಗಳು ಮುಳುಗಡೆಯಾಗಿವೆ.

ಮುಂಜಾಗೃತಾಕ್ರಮವಾಗಿ ಸೇತುವಗಳಿಗೆ ತೆರಳುವ ಮಾರ್ಗದಲ್ಲಿ ಅಡ್ಡಲಾಗಿ ಬ್ಯಾರಿಕೇಡ್ ಗಳನ್ನು ಹಾಕಿ ಪೊಲೀಸ್ ಸಿಬ್ಬಂದಿಗಳು ನಿಯೋಜನೆಗೊಂಡಿದ್ದು, ಜನಸಂಚಾರ ನಿರ್ಬಂಧಿಸಿದ್ದಾರೆ.

New Doc 2022-09-12 (1)

ಭಾರಿ ಮಳೆಗೆ ಕುಸಿದುಬಿದ್ದ ಮನೆ; ಯುವಕ ದುರ್ಮರಣ

https://pragati.taskdun.com/latest/uttarakannadahome-collapseman-deathheavy-rain/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button