Kannada NewsLatest

ಪ್ರಭಾಕರ ಕೋರೆಯವರಿಗೆ ಶ್ರೀ ವೀರಭದ್ರೇಶ್ವರ ಪ್ರಶಸ್ತಿ ಪ್ರಧಾನ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ವೀರಭದ್ರೇಶ್ವರ ಪ್ರಶಸ್ತಿ ಬಂದಿರುವುದು ನನಗೆ ಸಂತಸ ತಂದಿದೆ. ಈ ಪ್ರಶಸ್ತಿ ಕೆ.ಎಲ್.ಇ ಸಂಸ್ಥೆಯನ್ನ ಕಟ್ಟಿದ ಸಪ್ತರ್ಷಿಗಳಿಗೆ ಸಲ್ಲುತ್ತದೆ ಎಂದು ಕೆ ಎಲ್ ಇ ಸಂಸ್ಥೆ ಮುಖ್ಯಸ್ಥ ಡಾ.ಪ್ರಭಾಕರ ಕೋರೆ ತಿಳಿಸಿದ್ದಾರೆ.

ಉತ್ತರ ಕರ್ನಾಟಕದಲ್ಲಿ ಹಿಂದೆ ಒಬ್ಬರೇ ಒಬ್ಬರು ಲಿಂಗಾಯತ ವೈದ್ಯರಿದ್ದರು ಇಂದು ಪ್ರಪಂಚದ ಎಲ್ಲಡೆ ವೈದ್ಯರು ಸೇವೆ ಮಾಡುತ್ತಿದ್ದು ಇದು ಲಿಂಗಾಯುತ ಶಿಕ್ಷಣ ಸಂಸ್ಥೆಯ ಕೊಡುಗೆಯಾಗಿದೆ. ಸಪ್ತರ್ಷಿಗಳ ಸೇವೆಯ ಫಲವಾಗಿ ಇಂದು ಕೆಎಲ್‌ಇ ವಿದೇಶದಲ್ಲೊ ಸೇರಿದಂತೆ 250ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನ ಹೊಂದಿದೆ, ನನ್ನ ತಂದೆ ತಾಯಿ ಸೇವಾ ಮನೋಭಾವನೆಯನ್ನ ಹೊಂದಿದ್ದರು. ಸೇವೆ ಇದ್ದಲ್ಲಿ ಪ್ರಶಸ್ತಿ ತಾನಾಗಿ ಬರುತ್ತದೆ. ಈ ಪ್ರಶಸ್ತಿಯ ಮುಖಾಂತರ ಬಂದಿರುವ ಒಂದು ಲಕ್ಷ ರೂಪಾಯಿಗಳನ್ನ ಬೆಳಗಾವಿಯಲ್ಲಿ ಲಿಂಗಾಯುತ ವಿದ್ಯಾರ್ಥಿನಿಯರಿಗಾಗಿ ನಿರ್ಮಿಸುತ್ತಿರುವ ಉಚಿತ ವಿದ್ಯಾರ್ಥಿ ನಿಲಯಕ್ಕೆ ದೇಣಿಗೆಯಾಗಿ ನೀಡುತ್ತೇನೆ ಎಂದರು.

ಸಂಸ್ಥೆ 4000 ಹಾಸಿಗೆಗಳ ಉನ್ನತ ಸೌಲಭ್ಯವುಳ್ಳ ಆಸ್ಪತ್ರೆಯನ್ನ ದೇಶಕ್ಕೆ ನೀಡಿದೆ ಎಂದು ಹೇಳಿದರು. ಅವರು ನಿನ್ನೆ ಬೆಂಗಳೊರು ಅರಮನೆ ಮೈದಾನದಲ್ಲಿ ವೀರಶ್ಯವ ಲಿಂಗಾಯತ ಸಂಘಟನಾ ವೇದಿಕೆ ಆಯೋಜಿಸಿದ್ದ ಶ್ರೀ ವೀರಭದ್ರೇಶ್ವರ ಜಯಂತೊತ್ಸವ 2022 ಸಮಾರಂಭದಲ್ಲಿ ರಾಷ್ಟ್ರ ಪ್ರಶಸ್ತಿಯಾದ ಶ್ರೀ ವೀರಭದ್ರೇಶ್ವರ ಪ್ರಶಸ್ತಿ ಪುರಸ್ಕಾರ ಸ್ವೀಕರಿಸಿ ಮಾತನಾಡುತ್ತಿದ್ದರು.

ಸಮಾರಂಭವನ್ನ ಉದ್ಘಾಟಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೊರಪ್ಪನವರು ಮಾತನಾಡಿ ಶೈಕ್ಷಣಿಕ ಹಾಗೊ ಸಹಕಾರಿ ಕ್ಷೇತ್ರದಲ್ಲಿ ಮಾಡಿರುವ ಅಭೊತಪೊರ್ವ ಸೇವೆಗಾಗಿ ಪ್ರಭಾಕರ ಕೋರೆಯವರಿಗೆ ಈ ಪ್ರಶಸ್ತಿ ದೊರೆತಿರುವುದು ಸೊಕ್ತ ಎಂದರು. ಸಮಾರಂಭದ ಸಾನಿಧ್ಯವನ್ನ ಉಜ್ಜಿನಿ ಪೀಠದ ಜಗದ್ಘುರು ಸಿದ್ದಲಿಂಗ ರಾಜ ದೇಶಿಕೇಂದ್ರ ಶಿವಾಚಾರ್ಯ ಸ್ಡಾಮಿಜಿ ವಹಿಸಿದ್ದರು.

Home add -Advt

ಸಮಾರಂಭದ ಅಧ್ಯಕ್ಷತೆಯನ್ನ ಅಖೀಲ ಭಾರತ ವೀರಶೈವ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷರಾದ ಶಾಸಕ ಶಾಮನೊರು ಶಿವ ಶಂಕರಪ್ಪನವರು ವಹಿಸಿದ್ದರು. ಸಮಾರಂಭದ ವೇದಿಕೆಯಲ್ಲಿ ಮಾಜಿ ಸಚಿವ ಎಂಬಿ ಪಾಟೀಲ, ಮಾಜಿ ಶಾಸಕ ಮಹಾಂತೇಶ ಕವಟಗಿಮಠ, ಕಾಡ ನಿಗಮ ಅಧ್ಯಕ್ಷ ವಿ.ಐ ಪಾಟೀಲ, ಶಾಸಕರಾದ ಮಹಮ್ಮದ್ ನಲಪಾಡ್, ಹ್ಯಾರಿಸ್, ಚಲನಚಿತ್ರ ವಾಣಿಜ್ಯ ಮಂಡಳಿಯ ಉಮೇಶ ಬಣಕಾರ್ ಮಾಜಿ ಮಹಾಪೌರರಾದ ಗಂಗಾಂಬಿಕೆ ಮಲ್ಲಿಕಾರ್ಜುನ್ ಮುಂತಾದವರು ಉಪಸ್ಥಿತರಿದ್ದರು. ಕರ್ನಾಟಕ ಗಡಿನಾಡು ಪ್ರದೇಶಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ ಸೋಮಶೇಖರ್ ವೀರಭದ್ರೇಶ್ವರ ಚರಿತ್ರಾ ನುಡಿ ನೀಡಿದರು . ವೀರಶೈವ ಲಿಂಗಾಯತ ಸಂಘಟನಾ ವೇಧಿಕೆಯ ರಾಷ್ಟ್ರೀಯ ಅಧ್ಯಕ್ಷ ಪ್ರದೀಪ್ ಕಂಕಣವಾಡಿ ಪ್ರಾಸ್ತಾವಿಕವಾಗಿ ಮಾತನಾಡಿ ಸಂಘಟನೆ ಹಾಗೊ ವೀರಭದ್ರೇಶ್ವರ ಜಯಂತಿ ಕುರಿತು ತಿಳಿಸಿದರು.

ಶ್ರೇಷ್ಠ, ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಕೈಜೋಡಿಸಿ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕರೆ

https://pragati.taskdun.com/latest/ranichennamma-univercitybelagavi10th-ghatikotsava/

Related Articles

Back to top button