ಪ್ರಗತಿವಾಹಿನಿ ಸುದ್ದಿ, ಮೈಸೂರು: ಮೈಸೂರು ಸೆಂಟರ್ ಫಾರ್ ಕಲ್ಚರ್ ಕಮ್ಯೂನಿಕೇಷನ್ ಅಂಡ್ ಕ್ರಿಯೇಟಿವಿಟಿ ಸಂಸ್ಥೆಯ( ಫೋರ್ ಸಿ) ವತಿಯಿಂದ ಸೆ.೧೬ರಂದು ಸಂಜೆ ೭ ಗಂಟೆಗೆ ರಾಮಕೃಷ್ಣನಗರದ ರಮಾಗೋವಿಂದ ರಂಗಮಂದಿರದಲ್ಲಿ ಯುವ ಪ್ರತಿಭೆ ಸಿರಿ ವಾನಳ್ಳಿ ಅವರಿಂದ ‘ಆನಂದಭಾವಿನಿ’ ಎಂಬ ಏಕವ್ಯಕ್ತಿ ನಾಟಕ ಪ್ರದರ್ಶನವನ್ನು ಏರ್ಪಡಿಸಲಾಗಿದೆ.
ಸುಮಾರು ೯೦ ನಿಮಿಷವಿರುವ ಈ ನಾಟಕದ ಮೂಲ ಪಠ್ಯವನ್ನು ಸಾವಿತ್ರಿ ಅವರು ರಚಿಸಿದ್ದಾರೆ. ಈ ನಾಟಕವನ್ನು ಮರಾಠಿ ಮೂಲದಲ್ಲಿ ಪುರುಷೋತ್ತಮ್ ಶಿವರಾಮ್ ರೇಗೆ ರಚಿಸಿದ್ದು, ಕನ್ನಡಕ್ಕೆ ಗಿರಿಜಾ ಶಾಸ್ತ್ರಿ ಭಾಷಾಂತರಿಸಿದ್ದಾರೆ. ರಂಗರೂಪಕ್ಕೆ ಸುಧಾ ಆಡುಕಳ ತಂದಿದ್ದು, ಸಂಗೀತ ಅನುಷ್ ಶೆಟ್ಟಿ, ಮುನ್ನ, ನಿರ್ದೇಶನ ಡಾ.ಶ್ರೀಪಾದ ಭಟ್ ಮಾಡಿದ್ದಾರೆ ಎಂದು ಫೋರ್ ಸಿ ಸಂಸ್ಥೆ ಕಾರ್ಯದರ್ಶಿ ಶ್ರೀವತ್ಸ ಶರ್ಮ ತಿಳಿಸಿದ್ದಾರೆ. ಮಾಹಿತಿಗೆ ೭೦೧೯೨೪೦೧೨೮.
ಅಮೃತಾ ಫಡ್ನವಿಸ್ ಬಗ್ಗೆ ಆಕ್ಷೇಪಾರ್ಹ ಕಮೆಂಟ್; ಮಹಿಳೆ ಬಂಧನ
https://pragati.taskdun.com/latest/woman-arrested-abusive-facebook-commentsdevendra-fadnaviss-wifeamrita-fudnavis/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ