ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನದ ಅಂಗವಾಗಿ ಸೇವಾ ಪಾಕ್ಷಿಕ ಹಮ್ಮಿಕೊಳ್ಳಲಾಗಿದೆ ಎಂದು ಚಿಕ್ಕೋಡಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ರಾಜೇಶ್ ನೇರ್ಲಿ ತಿಳಿಸಿದರು.
ಚಿಕ್ಕೋಡಿಯ ಜಯಪ್ರಕಾಶ ನಾರಾಯಣ ಭವನದಲ್ಲಿ ಆಯೋಜಿಸಿದ್ದ ಜಿಲ್ಲೆಯ ಮತ್ತು ಮಂಡಲಗಳ ಮೋರ್ಚಾ ಪದಾಧಿಕಾರಿಗಳ ಸಭೆ ಹಮ್ಮಿಕೊಂಡು ಮಾತನಾಡಿದ ಅವರು, ಸೆ.17 ರಿಂದ ಅ.2 ರವರೆಗಿನ ಈ ಅವಧಿಯಲ್ಲಿ ಯುವ ಮೋರ್ಚಾ ವತಿಯಿಂದ ರಕ್ತದಾನ ಶಿಬಿರ, ಪ್ರಧಾನಿ ನರೇಂದ್ರ ಮೋದಿಯವರ ಜೀವನ ಕುರಿತು ಪ್ರದರ್ಶಿನಿ, ವೈದ್ಯಕೀಯ ಪ್ರಕೋಷ್ಠದ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ, ದಿವ್ಯಾಂಗಿಗಳಿಗೆ ಕೃತಕ ಕಾಲು ಜೋಡಣೆ, ಜೀವ ರಕ್ಷಕ ಲಸಿಕಾ ಅಭಿಯಾನ, ಮಂಡಲ ಹಾಗೂ ಬೂತ್ ಮಟ್ಟದಲ್ಲಿ ಕ್ಷಯ ರೋಗಿಗಳನ್ನು ಗುರಿತಿಸಿ ಒಂದು ವರ್ಷ ಅವಧಿಗೆ ದತ್ತು ಪಡೆಯುವ ಕಾರ್ಯ ನಡೆಯಲಿದೆ.
ರೈತ ಮೋರ್ಚಾ ವತಿಯಿಂದ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತಾ ಅಭಿಯಾನ, ಕೆರೆಗಳನ್ನು ಸ್ವಚ್ಛಗೊಳಿಸುವ ಅಮೃತ ಸರೋವರ ಯೋಜನೆ, ಮಳೆ ನೀರಿನ ಸಂಗ್ರಹದ ಬಗೆಗೆ ಅರಿವು, ಆತ್ಮ ನಿರ್ಭರ ಭಾರತದ ಕಲ್ಪನೆಯನ್ನು ಜಿಲ್ಲೆಯಲ್ಲಿ ಜಾಗೃತಿಗೊಳಿಸುವದು, ಮಹಿಳಾ ಮೋರ್ಚಾ ವತಿಯಿಂದ ಪ್ರತಿ ಮಂಡಲದ ಅಂಗನವಾಡಿ ದತ್ತು ಪಡೆದು ಅಭಿವೃದ್ಧಿ ಪಡೆಸುವ ಸೇವಾ ಕಾರ್ಯಗಳನ್ನು ಅನುಷ್ಠಾನಗೊಳಿಸಲಾಗುವುದು ಮತ್ತು ಅಂಗನವಾಡಿ ಕಾರ್ಯಕರ್ತರಿಗೆ ಸನ್ಮಾನ ಹಮ್ಮಿಕೊಳ್ಳವುದು ಎಂದು ತಿಳಿಸಿದರು.
ಇದೇ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಜೀವನ, ದೂರದೃಷ್ಟಿ, ಯೋಜನೆ ಹಾಗೂ ಸಾಧನೆಗಳ ಕುರಿತಾಗಿ ಬೌದ್ಧಿಕ ಸಭೆಗಳನ್ನು ಪ್ರತಿ ಮಂಡಲದಲ್ಲಿ ನಡೆಸಲಾಗುವುದು, ವಿವಿಧ ಲೇಖಕರಿಂದ ಪ್ರಧಾನ ಮಂತ್ರಿಗಳ ಜೀವನ ಹಾಗೂ ಗುರಿಯ ಕುರಿತು ಲೇಖನಗಳನ್ನು ಸಿದ್ಧಪಡಿಸಲಾಗುವುದು ಎಂದ ಅವರು ಇದೇ ಸೆ, 25 ರಂದು ಬಿಜೆಪಿ ಸಂಸ್ಥಾಪಕರಾದ ಪಂ.ದೀನದಯಾಳ ಉಪಾಧ್ಯಾಯರ ಜಯಂತಿ ಅಂಗವಾಗಿ ಪ್ರತಿಯೊಂದು ಬೂತ್ ನಲ್ಲಿ ಒಂದು ಗುಣಾತ್ಮಕ ಕಾರ್ಯಕ್ರಮ ಹಾಗೂ ದೀನದಯಾಳಜಿ ಕುರಿತು ಸಂವಾದ ಕಾರ್ಯಕ್ರಮ ನಡೆಸಲಿದ್ದೇವೆ ಹಾಗೂ ಸೆ.25 ಭಾನುವಾರದಂದು ಪ್ರಸಾರವಾಗಲಿರುವ ಮನ್ ಕಿ ಬಾತ್ ಕಾರ್ಯಕ್ರಮವನ್ನು ಪ್ರತಿ ಬೂತ್ ನಲ್ಲಿ ಸಾಮೂಹಿಕವಾಗಿ ವೀಕ್ಷಿಸುವ ಕಾರ್ಯ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಒ.ಬಿ.ಸಿ ಮೋರ್ಚಾ ವತಿಯಿಂದ ಅರಳಿ ಮರ ನೆಡುವ ಅಭಿಯಾನವನ್ನು ಹಮ್ಮಿಕೊಂಡು ಸಾರ್ವಜನಿಕ ಸ್ಥಳಗಳಲ್ಲಿ, ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ, ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಅರಳಿ ಗಿಡದ ಸಸಿಗಳನ್ನು ನೇಡುವುದು , ವಸತಿ ಪ್ರದೇಶಗಳಲ್ಲಿ ಅರಳಿ ಗಿಡದ ಸಸಿಗಳನ್ನು ಮನೆ ಮನೆಗೆ ವಿತರಿಸುವುದು ಎಂದು ಹೇಳಿದರು.
ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷರಾದ ದೀಪಕ ಪಾಟೀಲ್ ಸ್ವಾಗತಿಸಿದರು, ಪ್ರಕೋಷ್ಠದ ಸಂಕುಲ ಪ್ರಮುಖರಾದ ಗಿರೀಶ್ ಶಿರಗೆಯವರು ವಂದನೆಗಳು ತಿಳಿದರು, ಪ್ರಾಸ್ತಾವಿಕವಾಗಿ ಪ್ರಧಾನ ಕಾರ್ಯದರ್ಶಿ ಸತೀಶ ಅಪ್ಪಾಜಿಗೋಳ ಮಾತನಾಡಿದರು, ಮಹಿಳಾ ಮೋರ್ಚಾ ಜಿಲ್ಲಾ ಅಧ್ಯಕ್ಷೆ ಶಾಂಭವಿ ಅಶ್ವತ್ಥಪೂರ ನಿರೂಪಿಸಿದರು. ಚಿಕ್ಕೋಡಿ ಸದಲಗಾ ಮಂಡಲ ಅಧ್ಯಕ್ಷ ಸಂಜೀವ ಪಾಟೀಲ,ಕುಡಚಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಖಾನಗೌಡರ , ಸಾಮಾಜಿಕ ಜಾಲತಾಣ ಜಿಲ್ಲಾ ಸಂಚಾಲಕ ಪ್ರಸಾದ ಪಚಂಡಿ, ಎಲ್ಲಾ ಮೋರ್ಚಾದ ಜಿಲ್ಲಾ ಮತ್ತು ಮಂಡಲಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
https://pragati.taskdun.com/politics/anti-convertion-bil-passaraga-jnanendrareaction/
ಮಹಿಳೆಗೆ ಚಾಕು ತೋರಿಸಿ ಬೆದರಿಸಿ ಅತ್ಯಾಚಾರಕ್ಕೆ ಯತ್ನ
https://pragati.taskdun.com/latest/attempt-to-rapewomanbangalorecomplaint-file/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ