ಪ್ರಗತಿವಾಹಿನಿ ಸುದ್ದಿ, ಬಾಗಲಕೋಟೆ – ಬಾಣಂತಿಯಾಗಿದ್ದ ಪತ್ನಿಯನ್ನು ಕ್ರೂರವಾಗಿ ಕೊಲೆ ಮಾಡಿದ ಹುನಗುಂದ ತಾಲೂಕಿನ ಜಂಬಲದಿನ್ನಿ ಗ್ರಾಮದ ಆರೋಪಿಗೆ ಬಾಗಲಕೋಟೆ ಜಿಲ್ಲಾ ನ್ಯಾಯಾಲಯವು ಮರಣ ದಂಡನೆ ಶಿಕ್ಷೆ ವಿಧಿಸಿದೆ.
ರಾಮಪ್ಪ ಹನುಮಂತಪ್ಪ ವಡ್ಡರ್ ಶಿಕ್ಷೆಗೊಳಗಾದ ಆರೋಪಿ. ಈತನಿಗೆ ಇಳಕಲ್ ಪಟ್ಟಣದ ಜೋಶಿ ಗಲ್ಲಿಯ ನಿವಾಸಿಯಾಗಿದ್ದ ಜೀಜಾಬಾಯಿ (25) ಎಂಬುವವಳನ್ನು ಮದುವೆ ಮಾಡಿ ಕೊಡಲಾಗಿತ್ತು.
ಜೀಜಾಬಾಯಿ 2016 ರ ಮೇ ತಿಂಗಳಲ್ಲಿ ಮಗುವಿಗೆ ಜನ್ಮ ನೀಡಿದ್ದು, ಮಗು ನಿಧನ ಹೊಂದಿತ್ತು. ಜೀಜಾಬಾಯಿ ಬಾಳಂತಿಯಾಗಿದ್ದು ಆರೈಕೆ ಮಾಡಿಕೊಳ್ಳುತ್ತಿದ್ದಳು. ಆದರೆ ಪತಿ ರಾಮಪ್ಪ ಪತ್ನಿ ಜೀಜಾಬಾಯಿಗೆ ಪದೇ ಪದೆ ಲೈಂಗಿಕ ಕ್ರಿಯೆಗೆ ಒತ್ತಾಯಿಸುತ್ತಿದ್ದ. ಜೀಜಾಬಾಯಿ ನಿರಾಕರಿಸುತ್ತಿದ್ದ ಕಾರಣ 2016 ರ ಜೂನ್ 13 ರಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಶೌಚಕ್ಕೆ ಹೋಗಿದ್ದ ಜೀಜಾಬಾಯಿಯ ಹೊಟ್ಟೆಯ ಕೆಳ ಭಾಗಕ್ಕೆ ಒದ್ದು ಟಾಯ್ಲೆಟ್ ಬಾಗಿಲಿನ ಕಟ್ಟಿಗೆಯ ಪಟ್ಟಿಯನ್ನು ಜನನೇಂದ್ರಿಯದೊಳಗೆ ತೂರಿ ಅತೀ ಕ್ರೂರವಾಗಿ ಕೊಲೆ ಮಾಡಿದ್ದ.
ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಇಳಕಲ್ ಪೊಲೀಸರು, ಸಾಕ್ಷಾಧಾರಗಳನ್ನು ಸಂಗ್ರಹಿಸಿ, ಅಂದಿನ ತನಿಖಾಧಿಕಾರಿಯಾಗಿದ್ದ ಸಿಪಿಐ ಕುರುನೇಶಗೌಡ ಅವರು ಆರೋಪಿತನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಯ್ಯದ್ ಬಳಗುರ ರೆಹಮಾನ್ ಅವರು ಆರೋಪಿ ರಾಮಪ್ಪ ಹನಮಂತಪ್ಪ ವಡ್ಡರ್ ಕೊಲೆ ಮಾಡಿದ ಅಪರಾಧ ಸಾಬೀತಾಗಿದೆ ಎಂದು ತೀರ್ಮಾನಿಸಿ ಆರೋಪಿತನಿಗೆ ಕಲಂ: 302, ಐಪಿಸಿ ಅಡಿ ಮರಣದಂಡಣೆ ಮತ್ತು 1 ಲಕ್ಷ ರೂ. ದಂಡ ವಿಧಿಸಿದೆ.
ಪ್ರಕರಣದಲ್ಲಿ ಮೃತಳ ಮಕ್ಕಳಿಗೆ ಪರಿಹಾರವಾಗಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ 5 ಲಕ್ಷ ರೂ. ನೀಡಬೇಕೆಂದು ಶುಕ್ರವಾರ ತೀರ್ಪು ನೀಡಿದ್ದಾರೆ. ಈ ಪ್ರಕರಣವನ್ನು ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಸುನೀಲ ಎಂ. ಹಂಜಿ ವಾದ ಮಂಡಿಸಿದ್ದರು.
https://pragati.taskdun.com/politics/pm-narendra-modibirthdaytamilnadu-bjpgold-ring/
https://pragati.taskdun.com/latest/belgaum-horrible-murder-of-a-man-who-was-riding-a-bike/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ