Kannada NewsKarnataka NewsLatest

ಬೆಳಗಾವಿ ಜಿಲ್ಲಾ ಪೊಲೀಸ್ ಈಗ ಜನರಿಗೆ ಇನ್ನಷ್ಟು ಹತ್ತಿರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –  ಜನರಿಗೆ ಇನ್ನಷ್ಟು ಹತ್ತಿರವಾಗುವ ನಿಟ್ಟಿನಲ್ಲಿ ಬೆಳಗಾವಿ ಜಿಲ್ಲಾ ಪೊಲೀಸ್ ಇಲಾಖೆ ವಿನೂತನ ಕ್ರಮವೊಂದನ್ನು ತೆಗೆದುಕೊಂಡಿದೆ.
ಸಂಜೀವ ಪಾಟೀಲ

  ಸಾರ್ವಜನಿಕ ಸಂಪರ್ಕವನ್ನು ಸುಧಾರಿಸುವ  ಪ್ರಯತ್ನವಾಗಿ ವಾಟ್ಸಪ್ ಗ್ರುಪ್ ಗಳನ್ನು ರಚಿಸಲಾಗಿದ್ದು,  431 ಬೀಟ್ WhatsApp ಗುಂಪುಗಳಿಗೆ 1,17,579 ನಾಗರಿಕರನ್ನು ಸೇರಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ ಪಾಟೀಲ ಈ ಕುರಿತು ಮಾಹಿತಿ ನೀಡಿದ್ದಾರೆ.

 ಸಾರ್ವಜನಿಕರು ತಮ್ಮ ಬೀಟ್ ಪೊಲೀಸ್ ಮತ್ತು ಪಿಎಸ್‌ಐಗೆ ತ್ವರಿತ ಸಂಪರ್ಕ ಸಾಧಿಸಲು ಅನುವು ಮಾಡಿಕೊಡುವುದು ಇದರ ಉದ್ದೇಶವಾಗಿದೆ. ತೊಂದರೆ ಅಥವಾ ಯಾವುದೇ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಯಂತಹ ಯಾವುದೇ ಸಮಸ್ಯೆಗಳನ್ನು ಗಮನಕ್ಕೆ ತರಲು, ಹಬ್ಬಗಳು, ಜಾತ್ರೆ ಸಾರ್ವಜನಿಕ ಸಭೆಗಳು ಮುಂತಾದ ಸಂದರ್ಭದಲ್ಲಿ ಅಗತ್ಯವಿದ್ದಲ್ಲಿ ಪೊಲೀಸ್ ಉಪಸ್ಥಿತಿಯನ್ನು ಕೋರಲು ಈ ಗ್ರುಪ್ ಬಳಕೆಯಾಗಲಿದೆ.
ಟ್ರಾಫಿಕ್ ಸಮಸ್ಯೆಗಳನ್ನು ತಿಳಿಸಲು ಮತ್ತು ಸಂಚಾರ ನಿಯಮ ಉಲ್ಲಂಘನೆ ಕಂಡುಬಂದಲ್ಲಿ ವರದಿ ಮಾಡಲು, ಸುರಕ್ಷತಾ ಸಮಸ್ಯೆಗಳನ್ನು ಎತ್ತಿ ತೋರಿಸಲು, ಶಾಲಾ ಮಕ್ಕಳು ಅಥವಾ ಕಾಲೇಜು ವಿದ್ಯಾರ್ಥಿಗಳ ಸಮಸ್ಯೆಗಳನ್ನು ಗಮನಕ್ಕೆ ತರಲು,  ಮಾದಕ ವಸ್ತುಗಳ ಉಪದ್ರವವನ್ನು ವರದಿ ಮಾಡಲು, ಶಾಲೆಗಳು ಮತ್ತು ಕಾಲೇಜುಗಳ ಬಳಿ ತಂಬಾಕು ಬಳಕೆ ಅಥವಾ ಮಾರಾಟವನ್ನು ವರದಿ ಮಾಡಲು ಇತ್ಯಾದಿಗಳನ್ನು ವರದಿ ಮಾಡುವುದು,  ಎಲ್ಲಕ್ಕಿಂತ ಮುಖ್ಯವಾಗಿ ಗ್ರಾಮದಲ್ಲಿ ಹರಡುವ ಸುಳ್ಳು ಸುದ್ದಿ/ವದಂತಿಗಳನ್ನು ವರದಿ ಮಾಡುವುದು, ಮಕ್ಕಳ ಅಪಹರಣದಂತಹ ವದಂತಿ ತಡೆಯಲು ಸಹಾಯಕವಾಗಲಿದೆ.
 ಜಿಲ್ಲೆಯಾದ್ಯಂತ ಬೀಟ್ ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸಲು ಈ Whtsapp ಗುಂಪುಗಳಲ್ಲಿ ಉಳಿಯ ಬೇಕು ಎಂದು ನಾಗರಿಕರನ್ನು ಕೋರಿರುವ ಸಂಜೀವ ಪಾಟೀಲ,  ಕಾರ್ಯನಿರ್ವಹಣೆಯಲ್ಲಿ ಶ್ರಮಿಸಿದ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ಪ್ರಶಂಸಿಸಿದ್ದಾರೆ.

 

https://pragati.taskdun.com/belgaum-news/kptcl-exam-scam-three-more-accused-arrested/

 

 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button