ಖಾನಾಪುರ: ಹೂವು, ಹಣ್ಣಿನ ಗಿಡ ನೆಟ್ಟು ಮೋದಿ ಜನ್ಮ ದಿನಾಚರಣೆ; ಡಾ. ಸೋನಾಲಿ ಸರ್ನೋಬತ್ ನೇತೃತ್ವದಲ್ಲಿ ಕಾರ್ಯಕ್ರಮ
ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಪ್ರಧಾನಿ ನರೇಂದ್ರ ಮೋದಿಯವರ 72 ನೇ ಜನ್ಮದಿನದ ಮುನ್ನಾದಿನ
ಖಾನಾಪುರದಲ್ಲಿ ಬಿಜೆಪಿ ಕುಂದುಕೊರತೆ ನಿವಾರಣಾ ಕೇಂದ್ರದ ಕಾರ್ಯಕರ್ತರು ಬಿಜೆಪಿ ಮಹಿಳಾ ಮೋರ್ಚಾ ಗ್ರಾಮಾಂತರ ಉಪಾಧ್ಯಕ್ಷೆ ಡಾ. ಸೋನಾಲಿ ಸರ್ನೋಬತ್ ನೇತೃತ್ವದಲ್ಲಿ ಹಣ್ಣು ಮತ್ತು ಹೂವಿನ ಗಿಡಗಳನ್ನು ನೆಟ್ಟರು.
ಭಾರತಮಾತೆ ಮತ್ತು ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಗಳಿಗೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ವೇಳೆ ಮಾತನಾಡಿದ ಡಾ. ಸೋನಾಲಿ ಸರ್ನೋಬತ್ ಅವರು ನರೇಂದ್ರ ಮೋದಿಯವರು ಮಾಡಿದ ಯೋಜನೆಗಳು ಮತ್ತು ಹಲವಾರು ಅಭಿವೃದ್ಧಿ ಯೋಜನೆಗಳ ಬಗ್ಗೆ ವಿವರಿಸಿದರು.
ಬಸವರಾಜ ಕಡೇಮನಿ, ಬಾಳೇಶ ಚವ್ವಣ್ಣವರ, ಪರಶ್ರಾಮ ಕೋಲ್ಕಾರ, ಕುಶ ಅಂಬೋಜಿ, ಕಲ್ಲಪ್ಪ ಕಂಗ್ರಾಳಕರ, ವೈಷ್ಣವಿ ಭೋಸಲೆ, ದೀಪಕ ಚೌಗುಲೆ, ಶಶಿಕಾಂತ ನಾಯಿಕ, ನಾಗೇಶ ರಾಮಜಿ, ವಿನಾಯಕ ನಾಯ್ಕ, ವಿನೋದ ಪಾವಲೆ, ಅಕ್ಷಯ ಕುಸ್ತಿ ಮತ್ತಿತರರು ಉಪಸ್ಥಿತರಿದ್ದರು.
ಲಿಫ್ಟ್ ನ ಡೋರ್ ಮಧ್ಯೆ ಸಿಲುಕಿ ಶಿಕ್ಷಕಿ ದಾರುಣ ಸಾವು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ