Kannada NewsKarnataka News
ಅಥಣಿ ಆಸ್ಪತ್ರೆಯಿಂದ ನವಜಾತ ಗಂಡು ಶಿಶು ಕಳ್ಳತನ; ಕೆಲವೇ ಗಂಟೆಯಲ್ಲಿ ಶಿಶು, ಮಹಿಳೆಯನ್ನು ವಶಕ್ಕೆ ಪಡೆದ ಪೊಲೀಸರು
ಪ್ರಗತಿವಾಹಿನಿ ಸುದ್ದಿ, ಅಥಣಿ – ಅಥಣಿ ಸರಕಾರಿ ಆಸ್ಪತ್ರೆಯಿಂದ ನವಜಾತ ಗಂಡು ಶಿಶುವಿನ ಕಳ್ಳತನ ಕಳ್ಳತನವಾಗಿ ಕೆಲವೇ ಗಂಟೆಗಳಲ್ಲಿ ಶಿಶು ಕದ್ದಿದ್ದ ಮಹಿಳೆಯನ್ನು ಬಂಧಿಸಿ, ಶಿಶುವನ್ನು ಸುರಕ್ಷಿತವಾಗಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ನರ್ಸ್ ವೇಶದಲ್ಲಿ ಬಂದಿದ್ದ ಮಹಿಳೆ ಮಗುವಿನ ತೂಕ ಮಾಡಿಸಬೇಕೆಂದು ತೆಗೆದುಕೊಂಡು ಹೋಗಿ, ಶಿಶುವಿನೊಂದಿಗೆ ನಾಪತ್ತೆಯಾಗಿದ್ದಳು. ಶಿಶು ನಿನ್ನೆ ರಾತ್ರಿ 11.30 ಗಂಟೆಗೆ ಜನಿಸಿತ್ತು.
ಬಿಳಿ ಬಣ್ಣದ ಎಪ್ರಾನ್, ಕಪ್ಪು ಬಣ್ಣದ ಚೂಡಿದಾರ ಧರೆಸಿದ ಮಹಿಳೆಯೋರ್ವಳು ಶಿಶು ಅಪಹರಿಸಿದ್ದಳು. ಆಸ್ಪತ್ರೆಯ ಸಿಸಿ ಕ್ಯಾಮರಾದಲ್ಲಿ ಮಹಿಳೆ ವಾರ್ಡಗೆ ತೆರಳಿ ವಾಪಸ್ಸಾದ ಫುಟೆಜ್ ಲಭ್ಯವಾಗಿದೆ.
ಕಾಗವಾಡ ತಾಲೂಕಿನ ಐನಾಪುರ ಗ್ರಾಮದ ಅಂಬಿಕಾ ಬೋವೇರ್ ನಿನ್ನೆ ರಾತ್ರಿ 11.30ಕ್ಕೆ ಗಂಡು ಮಗುವಿಗೆ ಜನ್ಮ ನೀಡಿದ್ದಳು.
ನರ್ಸ ವೇಶದಲ್ಲಿ ಮಾಸ್ಕ್ ಧರೆಸಿ ಬಂದ ಮಹಿಳೆ ಮಗುವಿನ ತೂಕ ಮಾಡಿಸಬೇಕು ಎಂದು ಮಗುವಿನ ತಾಯಿಗೆ ಹೇಳಿ ಮಗುವನ್ನು ಎತ್ತಿಕೊಂಡು ಹೋಗಿದ್ದಾಳೆ ಎಂದು ತಾಯಿ ಅಂಬಿಕಾ ಆಸ್ಪತ್ರೆ ವೈದ್ಯಾಧಿಕಾರಿಗೆ ಹೇಳಿದ್ದಾಳೆ.
ಸುದ್ದಿ ತಿಳಿದ ಅಥಣಿ ಪೊಲೀಸರು ಆಸ್ಪತ್ರೆಗೆ ಧಾವಿಸಿ ಮಗುವಿನ ತಾಯಿ ಹಾಗೂ ಸಂಬಂಧಿಕರಿಂದ ಮಾಹಿತಿ ಪಡೆದಿದ್ದಾರೆ. ನಂತರ ತಾವ್ರ ಕಾರ್ಯಾಚರಣೆ ನಡೆಸಿ ಮಹಿಳೆ ಮತ್ತು ಶಿಶುವನ್ನು ಪತ್ತೆ ಮಾಡಿದ್ದಾರೆ. ಮಹಿಳೆಯನ್ನು ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದ್ದು. ಶಿಶು ತಾಯಿಯ ಮಡಿಳು ಸೇರಿದೆ.
https://pragati.taskdun.com/crime/iit-bombay-girl-hostelvideo-bathroom-worker-arrested/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ