ಪ್ರಗತಿವಾಹಿನಿ ಸುದ್ದಿ, ಚಿಕ್ಕಮಗಳೂರು: ಬಸ್ ಇಳಿಯುವಾಗ ಆಯತಪ್ಪಿ ಬಿದ್ದ ವಿದ್ಯಾರ್ಥಿನಿಯೊಬ್ಬಳ ಮೆದುಳು ನಿಷ್ಕ್ರಿಯಗೊಂಡಿದೆ.
ಜಿಲ್ಲೆಯ ಸೋಮನಹಳ್ಳಿ ತಾಂಡಾದ ರಕ್ಷಿತಾ ದುರ್ದೈವಿ ವಿದ್ಯಾರ್ಥಿನಿ. ಚಿಕ್ಕಮಗಳೂರಿನ ಬಸವನಹಳ್ಳಿ ಸರಕಾರಿ ಪಿಯು ಕಾಲೇಜಿನಲ್ಲಿ ಓದುತ್ತಿದ್ದ ರಕ್ಷಿತಾ ಬುಧವಾರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಇಳಿಯುತ್ತಿದ್ದ ವೇಳೆಯೇ ಬಸ್ ಚಲಿಸಿದ್ದರಿಂದ ಆಯ ತಪ್ಪಿ ನೆಲಕ್ಕುರುಳಿದಳು.
ತಲೆಗೆ ತೀವ್ರ ಏಟು ತಗುಲಿದ ಆಕೆಯನ್ನು ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಲ್ಲಿ ಅವಳ ಮೆದುಳು ನಿಷ್ಕ್ರಿಯಗೊಂಡಿದ್ದಾಗಿ ವೈದ್ಯರು ತಿಳಿಸಿದರು.
ರಕ್ಷಿತಾಳ ಅಂಗಾಂಗ ದಾನಕ್ಕೆ ತಂದೆ ಸುರೇಶ ನಾಯ್ಕ ಹಾಗೂ ತಾಯಿ ಒಪ್ಪಿಗೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಜೆ ಚಿಕ್ಕಮಗಳೂರಿಗೆ ವಿಶೇಷ ವೈದ್ಯರ ತಂಡ ಆಗಮಿಸಲಿದ್ದು ಗುರುವಾರ ಮಧ್ಯಾಹ್ನ ಎರಡು ಪ್ರತ್ಯೇಕ ಹೆಲಿಕಾಪ್ಟರ್ ಗಳಲ್ಲಿ ಆಕೆಯ ಅಂಗಾಂಗ ರವಾನೆ ಮಾಡಲಾಗುತ್ತಿದೆ ಎಂದು ಜಿಲ್ಲಾ ಆಸ್ಪತ್ರೆ ಅಧೀಕ್ಷಕರು ತಿಳಿಸಿದ್ದಾರೆ.
ಇತರರಿಗೆ ಅಂಗಾಂಗ ದಾನದ ಮೂಲಕವಾದರೂ ಮಗಳು ಇನ್ನಷ್ಟು ದಿನ ತಮ್ಮೊಂದಿಗಿರಲಿದ್ದಾಳೆ ಎಂದು ಭಾವಿಸಿ ಅಂಗಾಂಗ ದಾನಕ್ಕೆ ಒಪ್ಪಿಗೆ ನೀಡಿರುವುದಾಗಿ ರಕ್ಷಿತಾ ತಂದೆ ಸುರೇಶ ನಾಯ್ಕ್ ಹೇಳಿದ್ದಾರೆ.
ಅಥಣಿ ಆಸ್ಪತ್ರೆಯಿಂದ ನವಜಾತ ಗಂಡು ಶಿಶು ಕಳ್ಳತನ; ಕೆಲವೇ ಗಂಟೆಯಲ್ಲಿ ಶಿಶು, ಮಹಿಳೆಯನ್ನು ವಶಕ್ಕೆ ಪಡೆದ ಪೊಲೀಸರು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ