Latest

ಇನ್ನು ಮುಂದೆ ಔಷಧಗಳಿಗೂ ಬರಲಿದೆ QR Code; ನಕಲಿ ಮತ್ತು ಕಳಪೆ ಔಷಧಗಳಿಗೆ ಬೀಳಲಿದೆ ಮೂಗುದಾರ

ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ಮಾರುಕಟ್ಟೆಯಲ್ಲಿ ನಕಲಿ ಔಷಧಗಳ ಹಾವಳಿ ತಡೆಯಲು ಕೇಂದ್ರ ಸರಕಾರ ಶೀಘ್ರವೇ Track and Trace ವಿಧಾನ ಜಾರಿಗೆ ತರಲು ಮುಂದಾಗಿದೆ.

ಇದರ ಅಡಿಯಲ್ಲಿ ಔಷಧಗಳ ಪ್ರಾಥಮಿಕ ಪ್ಯಾಕೇಜಿಂಗ್ ಲೇಬಲ್‌ಗಳಲ್ಲಿ QR Code ಗಳನ್ನು ಮುದ್ರಿಸಲಾಗುತ್ತದೆ ಎಂದು ವರದಿಗಳು ತಿಳಿಸಿವೆ. QR  Codeಗಳು ಗ್ರಾಹಕರಿಗೆ ೌಷಧ ಅಸಲಿಯೋ, ನಕಲಿಯೋ ಎಂಬ ಬಗ್ಗೆ ಮಾಹಿತಿ ಹೊಂದಲು ನೆರವಾಗಲಿವೆ.

ಈ ವಿಧಾನ ಒಂದು ದಶಕದ ಹಿಂದಿನ ಪರಿಕಲ್ಪನೆಯಾಗಿದ್ದು ದೇಶದ ಫಾರ್ಮಾ ಕಂಪನಿಗಳಲ್ಲಿ ಸಿದ್ಧತೆಯ ಕೊರತೆಯಿಂದಾಗಿ ಹಿನ್ನಡೆಯಾಗಿತ್ತು. ಆದರೆ ತಡವಾಗಿಯಾದರೂ ಅದನ್ನು ಈಗ ಕಾರ್ಯರೂಪಕ್ಕೆ ತರಲು ಯೋಚಿಸಲಾಗಿದೆ. ಇನ್ನುಮುಂದೆ ಇದು ರಫ್ತಾಗುವ ಔಷಧಗಳಿಗೂ ಅನ್ವಯಿಸಲಿದೆ. ಬರುವ ಏಪ್ರಿಲ್ ನಿಂದ ಇದು ಜಾರಿಗೊಳ್ಳುವ ಸಾಧ್ಯತೆಗಳಿರುವುದಾಗಿ ಮೂಲಗಳು ತಿಳಿಸಿವೆ.

ಪ್ರಾರಂಭದಲ್ಲಿ ಇದನ್ನು 300 ಗರಿಷ್ಠ ಮಾರಾಟವಾಗುವ ಔಷಧಗಳಿಗೆ ಅಳವಡಿಸಲಾಗುತ್ತಿದೆ. ಆ್ಯಂಟಿ ಬಯಾಟಿಕ್ ಗಳು, ಹೃದ್ರೋಗ ಸಂಬಂಧಿ ಔಷಧಗಳು, ನೋವು ನಿವಾರಕ ಮಾತ್ರೆಗಳು, 100ರೂ. ಗಿಂತ ಅಧಿಕ MRP ಹೊಂದಿದ ಅಲರ್ಜಿ ಪ್ರತಿರೋಧಕ ಔಷಧಗಳಿಗೆ ಇವುಗಳನ್ನು ಅಳವಡಿಸಲಾಗುತ್ತಿದೆ.

Home add -Advt

ಈ ವಿಧಾನ ಜಾರಿಗೆ ಬಂದರೆ, ಗ್ರಾಹಕರು ಸಚಿವಾಲಯವು ಅಭಿವೃದ್ಧಿಪಡಿಸಿದ ಪೋರ್ಟಲ್‌ನಲ್ಲಿ   ID ಕೋಡ್ ಅನ್ನು ನಮೂದಿಸುವ ಮೂಲಕ ಔಷಧದ ನೈಜತೆಯನ್ನು ಪರಿಶೀಲಿಸಲು ಸಾಧ್ಯವಾಗುತ್ತದೆ ಮತ್ತು ನಂತರ ಅದನ್ನು ಮೊಬೈಲ್ ಫೋನ್ ಅಥವಾ Text ಸಂದೇಶವನ್ನು ಬಳಸಿಕೊಂಡು ಪತ್ತೆ ಮಾಡಬಹುದು.

ಇದರೊಂದಿಗೆ ಈ ವಿಧಾನದ ಅನುಷ್ಠಾನ ಔಷಧಗಳ ಮೇಲೆ  ಶೇ. 3-4 ರಷ್ಟು ವೆಚ್ಚವನ್ನು ಹೆಚ್ಚಿಸಲಿದೆ ಎನ್ನಲಾಗಿದೆ.

ಕಾರು ಅಪಘಾತದ ಮಾಹಿತಿಯನ್ನು ತುರ್ತು ಸಹಾಯವಾಣಿಗೆ ಸ್ವಯಂಚಾಲಿತವಾಗಿ ನೀಡಿದ ಐಫೋನ್ 14

Related Articles

Back to top button