ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಈ ಹಿಂದೆ ಗ್ರಾಮೀಣ ಕ್ಷೇತ್ರದ ಜನರಿಗೆ ವಿವಿಧ ಸೌಲಭ್ಯಗಳು ಸರಿಯಾಗಿ ತಲುಪುತ್ತಿರಲಿಲ್ಲ. ಲಕ್ಷ್ಮೀ ಹೆಬ್ಬಾಳಕರ್ ಶಾಸಕರಾದ ನಂತರ ಸರಕಾರ ನೀಡುವ ಎಲ್ಲ ಸೌಲಭ್ಯಗಳನ್ನೂ ಸ್ವಲ್ಪವೂ ಲೋಪವಿಲ್ಲದೆ ತಲುಪಿಸಲಾಗುತ್ತಿದೆ ಎಂದು ಯುವ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಮೃಣಾಲ ಹೆಬ್ಬಾಳಕರ್ ಹೇಳಿದ್ದಾರೆ.
ಪಶು ಸಂಗೋಪನೆ ಇಲಾಖೆಯ ವತಿಯಿಂದ ಬೆಳಗಾವಿ ಗ್ರಾಮೀಣ ಕ್ಷೇತ್ರದ ಒಟ್ಟು 49 ಫಲಾನುಭವಿಗಳಿಗೆ ಮೇವು ಕತ್ತರಿಸುವ ಯಂತ್ರ ಹಾಗೂ 41 ಫಲಾನುಭವಿಗಳಿಗೆ ಹಸುವಿಗೆ ಹಾಸುವ ಮ್ಯಾಟ್ ಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಈ ಮೊದಲು ಅನೇಕ ಸೌಲಭ್ಯಗಳಿರುವುದೇ ಜನರಿಗೆ ಗೊತ್ತಾಗುತ್ತಿರಲಿಲ್ಲ. ದೇವರು ಕೊಟ್ಟರಬ ಪೂಜಾರಿ ಕೊಡ ಎನ್ನುವಂತೆ ಸರಕಾರ ಕೊಟ್ಟರೂ ತಲುಪಿಸಬೇಕಾದವರು ಕಾಳಜಿ ವಹಿಸುತ್ತಿರಲಿಲ್ಲ. ಈಗ ಹಾಗಲ್ಲ ಯಾವೊಂದು ಸೌಲಭ್ಯವೂ ತಪ್ಪದಂತೆ ಶಾಸಕರು ಮುತುವರ್ಜಿ ವಹಿಸುತ್ತಿದ್ದಾರೆ ಎಂದು ಮೃಣಾಲ ಹೇಳಿದರು.
ಎಪಿಎಂಸಿ ಅಧ್ಯಕ್ಷ ಯುವರಾಜ ಕದಂ ಮೇವು ಕತ್ತರಿಸುವ ಯಂತ್ರ ಹಾಗೂ ಮ್ಯಾಟ್ ಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ನಾರಾಯಣ ನಲವಡೆ, ಪುಂಡಲೀಕ ಬಾಂದುರ್ಗೆ, ಪದ್ಮರಾಜ ಪಾಟೀಲ, ಜಯವಂತ ಬಾಳೇಕುಂದ್ರಿ, ಗುರುನಾಥ್ ಪಾಟೀಲ, ಪ್ರಕಾಶ ಪಾಟೀಲ, ಹೊಳೆಪ್ಪ ನಾಯ್ಕ, ಸಾತೇರಿ ಕಾಕತಿಕರ್, ಪಶು ಇಲಾಖೆಯ ವೈದ್ಯಾಧಿಕಾರಿಗಳಾದ ಆನಂದ ಪಾಟೀಲ, ಮಹಾದೇವ ತೇಲಿ, ದೀಪಕ್ ಯಲಿಗಾರ, ಲಕ್ಷ್ಮಣ ಜಂಬಗಿ, ಪರಸಪ್ಪ ತೇಲಿ, ವಿವೇಕ ಮಲ್ಲಾಪುರ, ಗುರುಲಿಂಗ ಪತ್ತಾರ, ವಿಠ್ಠಲ ಸಂಗನಟ್ಟಿ ಹಾಗೂ ಕಾರ್ಯಕರ್ತರು, ಆಪ್ತ ಸಹಾಯಕರು ಉಪಸ್ಥಿತರಿದ್ದರು.
https://pragati.taskdun.com/latest/https-pragativahini-com-politics-pfi-bhagyaposter-releaser-ashoksiddaramaiah/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ