ಇದು ಕೊಲೆ ಎಂಬುದರಲ್ಲಿ ಎರಡು ಮಾತಿಲ್ಲ; ಸಾಕ್ಷ್ಯ ನಾಶಮಾಡಿದ ಸಿದ್ದರಾಮಯ್ಯ ಕ್ಷಮೆ ಕೇಳಲಿ; BJP ಸದಸ್ಯ ರವಿಕುಮಾರ್ ಆಗ್ರಹ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಪರೇಶ್ ಮೇಸ್ತ ಪ್ರಕರಣದ ಸಿಬಿಐ ವರದಿ ವಿಚಾರವಾಗಿ ಬಿಜೆಪಿ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ. ಸಿದ್ದರಾಮಯಯ ಅವಧಿಯ ಸರ್ಕಾರ ಪ್ರಕರಣದ ಸಾಕ್ಷ್ಯ ನಾಶ ಮಾಡಿದೆ ಎಂದು ಬಿಜೆಪಿ ಪರಿಷತ್ ಸದಸ್ಯ ರವಿಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಸಿಬಿಐ ವರದಿಯಲ್ಲಿ ಪರೇಶ್ ಮೇಸ್ತ ಸಾವು ಕೊಲೆಯಲ್ಲ, ಸಹಜ ಸಾವು ಎಂದು ತಿಳಿಸಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಆರೋಪ ಮಾಡಿ ಸುಳ್ಳು ಹೇಳಿದ್ದ ಬಿಜೆಪಿ ಕ್ಷಮೆಯಾಚಿಸಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದರು. ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ರವಿಕುಮಾರ್, ಕ್ಷಮೆಯಾಚಿಸುವ ಪ್ರಶ್ನೆಯೇ ಇಲ್ಲ. ಪರೇಶ್ ಮೇಸ್ತನದ್ದು ಸಹಜ ಸಾವಲ್ಲ ಎಂಬುದು ಖಚಿತ. ಸ್ವತ: ಆತನ ತಂದೆ, ಕುಟುಂಬದವರೂ ಹೇಳುತ್ತಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಸಿಬಿಐಗೆ ಸಾಕ್ಷಗಳೇ ಸಿಗದಂತೆ ಸಾಕ್ಷ್ಯ ನಾಶ ಮಾಡಿದೆ. ಹುಬ್ಬಳ್ಳಿಯಲ್ಲಿ ಯೋಗೇಶ್ ಕೊಲೆಯಾದಾಗ ಏನಾಯ್ತು? ರಾಜ್ಯದಲ್ಲಿ ನಡೆದಿರುವ ಕೊಲೆಗಳಿಗೆ ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ಕಾರಣ ಎಂದು ಗುಡುಗಿದರು.
ಪರೇಶ್ ಮೇಸ್ತ ಹತ್ಯೆ ಹಿಂದೆ ಪಿಎಫ್ ಐ ಕೈವಾಡವಿದೆ. ಆತಮನದ್ದು ಆಕಸ್ಮಿಕ ಸಾವಾಗಿದ್ದರೆ ರಕ್ತದ ಮಡುವಿನಲ್ಲಿ ಯಾಕೆ ಬೀಳುತ್ತಿದ್ದ. ರಕ್ತದ ಮಡುವಲ್ಲಿ ಪರೇಶ್ ಶವ ಪತ್ತೆಯಾಗಿದೆ ಎಂದರೆ ಸಹಜ ಸಾವಾಗಲು ಹೇಗೆಸಾಧ್ಯ? ಇದು ಕೊಲೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಸಾಕ್ಷ್ಯ ನಾಸಹ ಮಾಡಲಾಗಿದೆ. ಸಿದ್ದರಾಮಯ್ಯ ಸರ್ಕಾರ ಸಾಕ್ಷ್ಯ ನಾಶ ಮಾಡಿದ್ದಕ್ಕೆ ಅವರು ರಾಜ್ಯದ ಜನರ ಕ್ಷಮೆ ಕೇಳಬೇಕು. ಮೊದಲು ಸಿಬಿಐ ಕೋರ್ಟ್ ಗೆ ಸಲ್ಲಿಸಿದ ತನಿಖಾ ವರದಿ ಬಗ್ಗೆ ಸಂಪೂರ್ಣ ಮಾಹಿತಿ ಬಹಿರಂಗವಾಗಲಿ ಎಂದರು.
ಧಾರವಾಡದಲ್ಲಿ ಯೋಗೇಶ್ ಗೌಡ ಹತ್ಯೆಗೆ ಮಾಜಿ ಶಾಸಕ ವಿನಯ್ ಕುಲಕರ್ಣಿ ಕಾರಣ ಎಂಬುದು ಗೊತ್ತಿರಲಿಲ್ಲವೇ? ಡಿ.ಕೆ.ರವಿ ಆತ್ಮಹತ್ಯೆ, ಡಿವೈ ಎಸ್ ಪಿ ಗಣಪತಿ ಆತ್ಮಹತ್ಯೆ ಪ್ರಕರಣಗಳಲ್ಲಿ ಸಾಕ್ಷ್ಯ ನಾಶ ಮಾಡಿದ್ದಾರೆ. ಡಿವೈ ಎಸ್ ಪಿ ಗಣಪತಿ ಆತ್ಮಹತ್ಯೆಗೆ ಕೆ.ಜೆ.ಜಾರ್ಜ್ ಕಾರಣ. ಪರೇಶ್ ಮೇಸ್ತ ಪ್ರಕರಣದ ಬಗ್ಗೆ ಸಿಬಿಐ ವರದಿಯನ್ನು ನಾವು ಒಪ್ಪಲು ಸಾಧ್ಯವಿಲ್ಲ ಪ್ರಕರಣದ ಹಿಂದೆ ಕಾಂಗ್ರೆಸ್ ಕೈವಾಡವಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪರೇಶ್ ಮೇಸ್ತ ಸಾವು ಪ್ರಕರಣ; ಬಿಜೆಪಿಯನ್ನು ಕುಟುಕಿದ ಕಾಂಗ್ರೆಸ್
https://pragati.taskdun.com/politics/paresh-mesta-death-casecbi-reportcongress-tweetbjp/