Latest

ಹಲವು ಅನುಮಾನಗಳಿಗೆ ಕಾರಣವಾಯ್ತು ಅಮೇರಿಕ ರಾಯಭಾರಿಯ ಸ್ವತಂತ್ರ ಕಾಶ್ಮೀರ ಹೇಳಿಕೆ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಇತ್ತೀಚೆಗೆ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ( pok) ಭೇಟಿ ನೀಡಿದ ಪಾಕಿಸ್ತಾನದ ಅಮೇರಿಕ ರಾಯಭಾರಿ ಡೊನಾಲ್ಡ್ ಬ್ಲೋಮ್, ಪಿಒಕೆ ಯನ್ನು ಸ್ವತಂತ್ರ್ಯ ಜಮ್ಮು ಕಾಶ್ಮೀರ ( ಆಜಾದ್ ಜಮ್ಮು ಕಾಶ್ಮೀರ ಎಂದು ಕರೆದಿರುವುದನ್ನು ಭಾರತದ ವಿದೇಶಾಂಗ ಸಚೀವಾಲಯ ತೀವ್ರವಾಗಿ ಖಂಡಿಸಿದೆ.

ವಿದೇಶಾಂಗ ಇಲಾಖೆಯ ವಕ್ತಾರ ಅರಿಂಧಮ್ ಬಾಗ್ಚಿ ಅವರು ಈ ಕುರಿತು ಅಮೇರಿಕ ಸರಕಾರಕ್ಕೆ ನಮ್ಮ ಖಂಡನೆಯನ್ನು ತಿಳಿಸಲಾಗಿದೆ ಎಂದಿದ್ದಾರೆ.

Home add -Advt

ಡೋನಾಲ್ಡ್ ಬ್ಲೋಮ್ ಅವರು ಪಾಕ್ ಆಕ್ರಮಿತ ಕಾಶ್ಮೀರದ ತಮ್ಮ ಭೇಟಿಯಲ್ಲಿ ಹಲವಾರು ಬಾರಿ ಆಜಾದ್ ಜಮ್ಮು ಕಾಶ್ಮೀರ ಎಂದು ಕರೆದಿದ್ದಾರೆ. ಇದು ಭಾರತ ಸರಕಾರದ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಇತ್ತೀಚೆಗೆ ಅಮೇರಿಕ ಪಾಕಿಸ್ತಾನಕ್ಕೆ ಯುದ್ಧ ವಿಮಾನಗಳನ್ನು ಪೂರೈಸಿದ ಬೆನ್ನಲ್ಲೇ ಅಲ್ಲಿನ ರಾಯಭಾರಿಯಿಂದ ಇಂಥದ್ದೊಂದು ಹೇಳಿಕೆ ಹೊರಬಿದ್ದಿರುವುದು ಹಲವು ಅನುಮಾನಗಳಿಗೂ ಕಾರಣವಾಗಿದೆ.

ಡೆವಿಡ್ ಬ್ಲೋಮ್ ಹಲವು ಬಾರಿ ಆಜಾದ್ ಜಮ್ಮು ಕಾಶ್ಮೀರ ಎಂದು ಉಚ್ಚರಿಸಿರುವ ಹಿನ್ನೆಲೆಯಲ್ಲಿ ಅದು ಆಕಸ್ಮಿಕವಾಗಿ ಹೊರಬಿದ್ದ ಮಾತು ಎಂದು ಹೇಳುವಂತಿಲ್ಲ. ಭಾರತೀಯ ವಿದೇಶಾಂಗ ಸಚಿವಾಲಯದ ಖಂಡನೆಗೆ ಅಮೇರಿಕದ ಪ್ರತಿಕ್ರಿಯೆ ಏನಿರಬಹುದು ಎಂಬುದು ಕುತೂಹಲವಿದೆ.

ರಾಜ್ಯ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರ ತುಟ್ಟಿಭತ್ಯೆ ಹೆಚ್ಚಳ

https://pragati.taskdun.com/politics/state-govt-employeesretired-employeesda-increase/

Related Articles

Back to top button