Latest

6 ವರ್ಷದ ಬಳಿಕ ಪಾಕ್ ವಿರುದ್ಧ ಭಾರತಕ್ಕೆ ಸೋಲು

ಪ್ರಗತಿವಾಹಿನಿ ಸುದ್ದಿ; ಢಾಕಾ: ಮಹಿಳಾ ಕ್ರಿಕೇಟ್ ನ ಟಿ 20 ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಪಾಕಿಸ್ತಾನ ತಂಡ ಭಾರತವನ್ನು 13 ರನ್ ಗಳಿಂದ ಸೋಲಿಸಿದೆ.

ಮೊದಲು ಬ್ಯಾಟ್ ಮಾಡಿದ ಪಾಕ್ ಮಹಿಳಾ ತಂಡ 6 ವಿಕೇಟ್ ನಷ್ಟಕ್ಕೆ 137 ರನ್ ಪೇರಿಸಿತು. ಗುರಿಯನ್ನು ಬೆನ್ನತ್ತಿದ ಭಾರತ ಮಹಿಳಾ ತಂಡ 124 ರನ್ ಗಳಿಗೆ ಆಲ್ ಔಟ್ ಆಯಿತು.

ಭಾರತ ಮಹಿಳಾ ಕ್ರಿಕೇಟ್ ತಂಡ ಸುದೀರ್ಘ ಆರು ವರ್ಷಗಳ ಬಳಿಕ ಪಾಕ್ ಮಹಿಳಾ ತಂಡದ ವಿರುದ್ಧ ಸೋಲು ಕಂಡಿದೆ. ಅಲ್ಲದೇ ಮಹಿಳಾ ಟಿ 20 ಏಷ್ಯಾ ಕಪ್ ನಲ್ಲಿ ಇದೇ ಮೊದಲ ಬಾರಿಗೆ ಪಾಕಿಸ್ತಾನ ತಂಡದ ವಿರುದ್ಧ ಸೋಲುಂಡಿದೆ.
ಪಾಕ್ ಪರ ಅಬ್ಬರದ ಬ್ಯಾಟಿಂಗ್ ಮಾಡಿದ ನಿದಾ ಧರ್ 37 ಬಾಲ್ ಗಳಲ್ಲಿ 56 ರನ್ ಸಿಡಿಸಿದರು.

ಹಲವು ಅನುಮಾನಗಳಿಗೆ ಕಾರಣವಾಯ್ತು ಅಮೇರಿಕ ರಾಯಭಾರಿಯ ಸ್ವತಂತ್ರ ಕಾಶ್ಮೀರ ಹೇಳಿಕೆ

https://pragati.taskdun.com/latest/india-rises-objection-us-envoy-callsajad-kashmir/

Related Articles

Back to top button