Kannada NewsLatest

ಹುಕ್ಕೇರಿಯ 19 ಕೆರೆಗಳಿಗೆ ನೀರು ಪೂರೈಕೆ; 4 ಕೋಟಿ ಯೋಜನೆಗೆ ಸರ್ಕಾರ ಸಮ್ಮತಿ ; ರಮೇಶ ಕತ್ತಿ

ಉಮೇಶ ಕತ್ತಿ ಮಾದರಿಯಲ್ಲಿ ರೈತರಿಗೆ ಸೌಲಭ್ಯ ಒದಗಿಸಲು ಬದ್ಧ; ರಮೇಶ ಕತ್ತಿ ಭರವಸೆ

ಪ್ರಗತಿವಾಹಿನಿ ಸುದ್ದಿ; ಹುಕ್ಕೇರಿ : ಕ್ಷೇತ್ರದಲ್ಲಿ 35 ಕೆರೆಯನ್ನು ನಿರ್ಮಾಣಮಾಡಿ ರೈತರ ಜಮೀನುಗಳಿಗೆ ಶೇ. 85 ರಷ್ಟು ನೀರಾವರಿ ಮಾಡಿದ ಸಹೋದರ ಸಚಿವ ದಿ. ಉಮೇಶ ಕತ್ತಿ ಅವರು ನಮ್ಮೊಂದಿಗೆ ಇಲ್ಲದ ನೆನಪು ನಮ್ಮೆಲ್ಲರನ್ನು ಕಾಡುತ್ತಿದೆ. ಸಹೋದರನ ಮಾದರಿಯಲ್ಲಿ ರೈತರಿಗೆ ಬೇಕಾಗುವ ಸೌಲಭ್ಯ ಒದಗಿಸಲು ಬದ್ದನಾಗಿದ್ದೇನೆ ಎಂದು ಮಾಜಿ ಸಂಸದ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ತಿಳಿಸಿದ್ದಾರೆ.
ಅವರು ರವಿವಾರ ಮುಂಜಾನೆ ಸಚಿವ ದಿ. ಉಮೇಶ ಕತ್ತಿ ಅವರ ಮಾದರಿಯಲ್ಲಿ ತಾಲೂಕಿನ ಶಿರಹಟ್ಟಿ, ಬೆಳವಿ, ಯಾದಗೂಡ ವಿವಿಧ ಗ್ರಾಮಗಳು ಸೇರಿದಂತೆ 10 ಕೆರೆಗಳನ್ನು ವೀಕ್ಷಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ಮಾತನಾಡಿದರು.

ಬೇಸಿಗೆಯಲ್ಲಿಯೂ ಕೂಡ ಕೆರೆಗಳಲ್ಲಿ ನೀರು ಸಂಗ್ರಹಿಸುವ ಹಿನ್ನೆಲೆಯಲ್ಲಿ ಹಿರಣ್ಯಕೇಶಿ ನದಿಯ ಸುಲ್ತಾನಪುರ ಬ್ಯಾರೆಜ್‌ದಿಂದ ಹುಕ್ಕೇರಿ ತಾಲೂಕಿನ 19 ಕೆರೆಗಳಿಗೆ ನೀರು ಪೂರೈಕೆಗೆ 4 ಕೋಟಿ ರೂ ಯೋಜನೆಗೆ ಸರಕಾರ ಅನುಮತಿ ದೊರೆತಿದೆ. ಈಗಾಗಲೇ ಹಿರಣ್ಯಕೇಶಿ ನದಿ ಸಂಕೇಶ್ವರ ಬ್ಯಾರೇಜದಿಂದ 27 ಕೆರೆಗಳಗೆ ನೀರು ಪೂರೈಕೆ ಮಾಡಲಾಗುತ್ತಿತ್ತು. ಆದರೆ ನದಿಯಲ್ಲಿ ನೀರು ಇದ್ದಾಗ ಮೂರು ತಿಂಗಳು ಮಾತ್ರ ನೀರು ಪೂರೈಕೆಯಾಗುತ್ತಿತು. ಸುಲ್ತಾನಪುರ ಹೊಸ ಬ್ಯಾರೆಜ್‌ ಕಾಮಗಾರಿ ಪೂರ್ಣಗೊಂಡಲ್ಲಿ 19 ಕೆರೆಗಳಿಗೆ ಬೇಸಿಗೆಯಲ್ಲಿ ನೀರು ಪೂರೈಕೆಯಾಗಲಿದೆ ಎಂದರು.

ಸಚಿವ ದಿ.ಉಮೇಶ ಕತ್ತಿ ಅವರು ಲೋಕೋಪಯೋಗಿ ಇಲಾಖೆ, ಪಂಚಾಯತ್‌ರಾಜ್ ಎಂಜನೀಯರಿಂಗ್ ಉಪವಿಭಾಗದಿಂದ ಕೈಗೆತ್ತಿಕೊಂಡ ರಸ್ತೆ ಸುಧಾರಣೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೈಗೆತ್ತಿಕೊಂಡ ಜಲಜೀವನ ಮಿಷನ್‌ನ ಪ್ರತಿ ಮನೆ ಮನೆಗಳ ಸಂಪರ್ಕ ಕಾಮಗಾರಿಗೆ ಚಲಾನೆಯಲ್ಲಿರುವ ಕಾಮಗಾರಿಯನ್ನು ವೀಕ್ಷಿಸಿದರು. ಗುಣಮಟ್ಟದ ಕಾಮಗಾರಿಗಳನ್ನು ಮಾಡಬೇಕೆಂದು ಗುತ್ತಿಗೆದಾರರಿಗೆ ಸೂಚಿಸಿದರು.

ಇದೇ ವೇಳೆ ಗ್ರಾಮಗಳ ಸಾರ್ವಜನಿಕರ ಕುಂದುಕೊರತೆ, ಅಹವಾಲುಗಳನ್ನು ಆಲಿಸಿ ಪರಿಹರಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ದೂರವಾಣ ಮೂಲಕ ಸೂಚಿಸಿದರು.

ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಸತ್ಯಪ್ಪಾ ನಾಯಿಕ, ಶಿವನಗೌಡ ಪಾಟೀಲ, ಕೆ.ಜಿ ಪಾಟೀಲ, ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿ ಸಂತೋಷ ಕಬ್ಬಗೋಳ, ವಿವಿಧ ಗ್ರಾಮಗಳ ರೈತರು ಮುಖಂಡರು, ಸಾರ್ವಜನಿಕರು ಉಪಸ್ಥಿತರಿದ್ದರು.

ರಾಮದುರ್ಗ: ಚಾಕು ಇರಿತ, ರಾಡ್ ನಿಂದ ಹಲ್ಲೆ, ನಾಲ್ವರಿಗೆ ಗಾಯ

https://pragati.taskdun.com/latest/belagaviknife-attackshriramasena-activist/

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button