Kannada NewsKarnataka NewsLatest

ಹುಕ್ಕೇರಿ: ಸರಣಿ ಅಪಘಾತ ; ತಾಯಿ, ಮಗು ಸಾವು

ಪ್ರಗತಿವಾಹಿನಿ ಸುದ್ದಿ, ಹುಕ್ಕೇರಿ –   ಮೂರು ಕಾರು  ಹಾಗೂ ಬೈಕ್ ನಡುವೆ  ಹುಕ್ಕೇರಿ ಸಮೀಪದ ರಕ್ಷಿ ಕ್ರಾಸ್ ನಲ್ಲಿ ನಡೆದ ಅಪಘಾತದಲ್ಲಿ ಬೈಕ್ ನಲ್ಲಿ ತೆರಳುತ್ತಿದ್ದ ತಾಯಿ , ಮಗ ಮೃತಪಟ್ಟಿದ್ದಾರೆ.
    ಭಾರತಿ ಅನೀಲ ಪೂಜೇರಿ ( 28)  ಹಾಗೂ ವೇದಾಂತ ಅನೀಲ ಪೂಜೇರಿ ( 6) ಮೃತ ದುರ್ದೈವಿಗಳು.
   ಬೈಕ್ ಚಲಾಯಿಸುತ್ತಿದ್ದ ಅನೀಲ ಶಂಕರಯ್ಯಾ ಪೂಜೇರಿ (35) ಹಾಗೂ ಕಾರಿನಲ್ಲಿ ಪ್ರಯಾಣಿಸುತ್ತಿದ್ದ  ಕಿರಣ ಲೋಕಯ್ಯ ಸಾಲಿಮಠ ( 28) ಗಾಯಗೊಂಡಿದ್ದಾರೆ.
  ಅನೀಲ ಪೂಜೇರಿ, ಅವರ ಪತ್ನಿ ಭಾರತಿ ಮತ್ತು ಮಗ ವೇದಾಂತ ಬೈಕಿನಲ್ಲಿ ತೆರಳುತ್ತಿದ್ದರು. ಈ ವೇಳೆ ಗೋಕಾಕದಿಂದ ಹುಕ್ಕೇರಿ ಕಡೆಗೆ ತೆರಳುತ್ತಿದ್ದ ಒಂದು ಕಾರು, ಹುಕ್ಕೇರಿಯಿಂದ ಘಟಪ್ರಭಾ ಕಡೆಗೆ ತೆರಳುತ್ತಿದ್ದ ಎರಡು ಕಾರುಗಳು ಮತ್ತು ಅನೀಲ ಪೂಜೇರಿ ಅವರು ಚಲಾಯಿಸುತ್ತಿದ್ದ ಬೈಕ್ ನಡುವೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಮತ್ತು ಒಂದು ಇಂಡಿಕಾ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದ್ದು ಬೈಕಿನಲ್ಲಿ  ಅನೀಲ ಪೂಜೇರಿ ಅವರ ಹಿಂಬದಿಗೆ ಕುಳಿತು ಸವಾರಿ ಮಾಡುತ್ತಿದ್ದ  ಭಾರತಿ ಮತ್ತು ವೇದಾಂತ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಹುಕ್ಕೇರಿ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿದ್ದಾರೆ.

 

https://pragati.taskdun.com/politics/ramesh-kattihukkerisultanapuralake/

Home add -Advt

Related Articles

Back to top button