ಧಾರವಾಡ ಬಳಿ ಭೀಕರ ಅಪಘಾತ: ಮುನವಳ್ಳಿ ಯುವ ಕಾಂಗ್ರೆಸ್ ಅಧ್ಯಕ್ಷ ಯಶವಂತ ಯಲಿಗಾರ ಸೇರಿ ಇಬ್ಬರು ಬಲಿ
ಪ್ರಗತಿವಾಹಿನಿ ಸುದ್ದಿ, ಮುನವಳ್ಳಿ – ಯರಗಟ್ಟಿ – ಮುನವಳ್ಳಿ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿದ್ದು ಯಶವಂತ ಯಲಿಗಾರ ನಿಧನರಾಗಿದ್ದಾರೆ. ಅವರಿಗೆ 25 ವರ್ಷ ವಯಸ್ಸಾಗಿತ್ತು.
ಕಳೆದ ರಾತ್ರಿ ನಡೆದ ರಸ್ತೆ ಅಪಘಾತದಲ್ಲಿ ಅವರು ನಿಧನರಾಗಿದ್ದಾರೆ. ಅವರ ಅಂತ್ಯಕ್ರಿಯೆ ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಮುನವಳ್ಳಿಯ ತೆಗ್ಗಿಹಾಳ ರಸ್ತೆಯ ಮುಕ್ತಿಧಾಮದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಸವದತ್ತಿಯಿಂದ ಧಾರವಾಡಕ್ಕೆ ತೆರಳುವಾಗ ಮಧ್ಯರಾತ್ರಿ ಅಪಘಾತ ಸಂಭವಿಸಿದೆ. ಯಶವಂತ ಮತ್ತು ಅವರ ಗೆಳೆಯ ಮುನವಳ್ಳಿಯ ಅಕ್ಷಯ ವಿಜಯ ಕಡಕೋಡ (25) ಕಾರಿನಲ್ಲಿ ಬರುವಾಗ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿ ಪಲ್ಟಿಯಾಗಿದೆ.
ಅಕ್ಷಯ ಕಡಕೋಡ ಮೃತದೇಹ ಕಾರಿನಿಂದ ಹಾರಿ ಮಣ್ಣಿನಲ್ಲಿ ಹೂತು ಹೋಗಿತ್ತು. ಮಂಗಳವಾರ ಬೆಳಗ್ಗೆ ಅಕ್ಷಯ ಮೃತದೇಹ ಸಿಕ್ಕಿದೆ.
ಬುಧವಾರ ನಡೆಯಲಿದ್ದ ಕಾಂಗ್ರೆಸ್ ಮುಖಂಡ ವಿಶ್ವಾಸ ವೈದ್ಯ ಜನ್ಮ ದಿನ ಕಾರ್ಯಕ್ರಮ ಸಂಬಂಧ ಮೀಟಿಂಗ್ ನಡೆಸಿ ನಂತರ ಅವರು ಧಾರವಾಡಕ್ಕೆ ತೆರಳುತ್ತಿದ್ದರು. ಯಶವಂತ ನಿಧನದ ಹಿನ್ನೆಲೆಯಲ್ಲಿ ವಿಶ್ವಾಸ ವೈದ್ಯ ಜನ್ಮದಿನದ ಎಲ್ಲ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ.
ಆಸ್ಪತ್ರೆಗೆ ತೆರಳಿ ಶಾಸಕ ಆನಂದ್ ಮಾಮನಿ, CPI ಶ್ರೀಮಂತ ಇಲ್ಲಾಳ ಆರೋಗ್ಯ ವಿಚಾರಿದ ಸಿಎಂ ಬೊಮ್ಮಾಯಿ
https://pragati.taskdun.com/politics/cm-bommai-inquired-about-the-health-of-mla-anand-mamani-and-cpi-srimanta-illal/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ