ಪ್ರಗತಿವಾಹಿನಿ ಸುದ್ದಿ, ಕ್ಯಾನ್ ಬೆರಾ: ಬರುವ ಭಾನುವಾರ (ಅ.16) ದಿಂದ ಆರಂಭಗೊಳ್ಳುವ ವಿಶ್ವಕಪ್ T20 ಸರಣಿಯಲ್ಲಿ ಭಾಗವಹಿಸಲು ರೋಹಿತ್ ಶರ್ಮಾ ನಾಯಕತ್ವದಲ್ಲಿ ಈಗಾಗಲೇ ಆಸ್ಟ್ರೇಲಿಯಾಕ್ಕೆ ತಲುಪಿರುವ ಟೀಂ ಇಂಡಿಯಾ ಗೆಲುವಿನ ರೂವಾರಿಯಾಗಲು ಕಠಿಣ ಅಭ್ಯಾಸಗಳನ್ನು ಆರಂಭಿಸಿದೆ.
ಇದೇ ವೇಳೆ ಗೆಲುವಿಗಾಗಿ ನಾನಾ ತಂತ್ರಗಳನ್ನು ರೂಪಿಸಲಾಗುತ್ತಿದ್ದು ಸೋಮವಾರವಷ್ಟೇ ಆಸ್ಟ್ರೇಲಿಯಾ ತಂಡದ ವಿರುದ್ಧ ಮೊದಲ ಅನಧಿಕೃತ ಅಭ್ಯಾಸ ಪಂದ್ಯವನ್ನೂ ಆಡಿ13 ರನ್ ಗಳ ಜಯ ಸಾಧಿಸಿದೆ.
ಈ ಹಿಂದೆ ಎಂ.ಎಸ್. ಧೋನಿ ಕೂಡ ಇದೇ ರೀತಿ ತಂತ್ರಗಾರಿಕೆ ನಡೆಸಿ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಜೋಡಿಯನ್ನು ಓಪನಿಂಗ್ ಗೆ ಸಿದ್ಧಪಡಿಸಿದ್ದರು. ಆ ವೇಳೆ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಜಯ ಸಾಧಿಸಿದ್ದಷ್ಟೇ ಅಲ್ಲ, ರೋಹಿತ್ ಶರ್ಮಾ ಭವಿಷ್ಯವೇ ಬದಲಾಯಿತು. ಈ ಧೋನಿ ಕಾರ್ಯತಂತ್ರಕ್ಕೆ ಕ್ರಿಕೆಟ್ ಜಗತ್ತು ತಲೆದೂಗಿತ್ತು.
ಈಗ ಅದೇ ಕಾರ್ಯತಂತ್ರವನ್ನು ಸ್ವತಃ ರೋಹಿತ್ ಶರ್ಮಾ ಕಾರ್ಯರೂಪಕ್ಕೆ ತರುತ್ತಿದ್ದಾರೆ.
ರಷ್ಯಾ ಘಟಕವನ್ನು ಬರಿ ಒಂದು ಯುರೋಗೆ ಮಾರಾಟ ಮಾಡಲು ಮುಂದಾದ ನಿಸ್ಸಾನ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ