ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕೆಎಲ್ಇ ಜೆಎನ್ ಎಂಸಿ ಸಭಾಗೃಹದಲ್ಲಿ ಕೆಎಲ್ ಇ ಸಂಗೀತ ಮಹಾವಿದ್ಯಾಲಯದ ವತಿಯಿಂದ ಭಜನೆ ಸ್ಪರ್ಧೆಗಳ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.
ದಿ. ಭಜನಾಚಾರ್ಯ ಬಿ. ವಿ. ಕಡಲಾಸ್ಕರ್ ಗುರುಗಳ ಜನ್ಮ ಶತಮಾನೋತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ ಭಜನಾ ಸ್ಪರ್ಧೆಗಳಲ್ಲಿ ಸುಮಾರು 25 ಭಜನಾ ಗುಂಪುಗಳು ಭಾಗವಹಿಸಿದ್ದು ಬೆಳಗಾವಿಯ ಎಲ್ಲ ಮಹಿಳಾಮಂಡಳದ ಭಜನೆ ಗುಂಪುಗಳು, ಹಾಗೂ ಬೆಳಗಾವಿ ಜಿಲ್ಲೆಯ ರಾಮದುರ್ಗ, ಗೋಕಾಕ ಬೈಲಹೊಂಗಲ, ಚಿಕ್ಕೋಡಿ, ಚಿಂಚಲಿ, ಚಂದಗಡ, ನಂದಗಡ, ಹಾಗೂ ಮಹಾರಾಷ್ಟ್ರದಿಂದ ಜನರು ಭಾಗವಹಿಸಿದ್ದು ವಿಶೇಷವಾಗಿತ್ತು.
ಈ ಸ್ಪರ್ಧೆಯಲ್ಲಿ ಕಡ್ಲಾಸ್ಕರ್ ಗುರುಗಳ ಹಿರಿಯ ಶಿಷ್ಯಂದಿರಾದ ಮೀನಾ ತಾಯಿ, ಪಂಡಿತ್ ರಾಜಪ್ರಭು ಧೋತ್ರೆ, ರುದ್ರಮ್ಮ ಯಾಳಗಿ, ಗುರುರಾಜ್ ಕುಲಕರ್ಣಿ, ಜಿತೇಂದ್ರ ಸಾಬಣ್ಣವರ್, ಸೀಮಾ ಕುಲಕರ್ಣಿ, ವಾಮನವಾಗುಕರ್, ಇವರಿಗೆ ಸಂಗೀತ ವಿದ್ಯಾಲಯದಿಂದ ಸನ್ಮಾನಿಸಲಾಯಿತು.
ಬೆಳಗ್ಗೆ 9 ರಿಂದ ಶುರುವಾದ ಸ್ಪರ್ಧೆಗಳು ರಾತ್ರಿ 8 ಗಂಟೆಗೆ ಬಹುಮಾನ ವಿತರಣೆ ಸಮಾರಂಭದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. ಪ್ರಥಮ ಬಹುಮಾನದ ಎರಡು ಗುಂಪುಗಳಲ್ಲಿ ಹಂಚಿಹೋದವು.
ಶಬ್ರಿದೇವಿ ಭಜನೆ ಮಂಡಳ ರಾಮದುರ್ಗ ಮತ್ತು ವಿಠ್ಠಲ ರುಕ್ಮಾಯಿ ಭಜನೆ ಮಂಡಳ ಕುದುರೆಮನಿ 15 ಸಾವಿರರೂ. ನಗದು ಬಹುಮಾನ ಪಡೆದರು.ದ್ವಿತೀಯ ಬಹುಮಾನ ಇಬ್ಬರಲ್ಲಿ ಹಂಚಿಹೋಗಿದ್ದು ಶ್ರೀ ಪವಾಡ ಬಸವೇಶ್ವರ ಭಜನೆ ಮಂಡಲ ಇಂಚಲ ಮತ್ತು ರಾಜಾ ಪಂಡರಿಚಾ ಭಜನೆ ಮಂಡಲ ಗಳತಗಾ ಇವರು 10 ಸಾವಿರ ನಗದು ಬಹುಮಾನ ಪಡೆದರು.
3 ಸತ್ಯವೀರ ತೀರ್ಥ ಮಹಿಳಾ ಮಂಡಲ ಗೋಕಾಕ ಇವರು ತೃತೀಯ ಬಹುಮಾನ ಪಡೆದು 5000 ನಗದು ಬಹುಮಾನವನ್ನು ಪಡೆದರು.
ಸಮಾಧಾನಕರ ಬಹುಮಾನ ಶ್ರೀ ವಿಠ್ಠಲ್ ಭಜನೆ ಮಂಡಲ ಹಾಗೂ ರವಳ್ನತ್ ಭಜನೆ ಮಂಡಲ್ ಖಾನಾಪುರ್ ಪಡೆದರು. ಬೆಳಗಾವಿಯ ಡಾಕ್ಟರ್ ಅಭಿಜಿತ್ ಗೋಗಟೆ ಹಾಗೂ ಡಾ. ವಂದನಾ ಗೋಗಟೆ ಈ ಕಾರ್ಯಕ್ರಮದ ಪ್ರಾಯೋಜಕರಾಗಿದ್ದರು.
ಜೆಎನ್ ಎಂಸಿ ಉಪ ಪ್ರಾಚಾರ್ಯ ಡಾ. ರಾಜೇಶ್ ಪವಾರ ಹಾಗೂ ಸಂಗೀತ ಮಹಾವಿದ್ಯಾಲಯ ಸಂಯೋಜಕ ಡಾ. ರಾಜೇಂದ್ರ ಭಾಂದೂರಕರ, ಪ್ರಾ ಚಾರ್ಯೆ ಡಾ. ಸ್ನೇಹಾ ರಾಜೂರಿಕರ, ಪ್ರಾಧ್ಯಾಪಕ ಡಾ. ಸುನೀತಾ ಪಾಟೀಲ್, ಡಾ. ದುರ್ಗಾ ನಾಡ ಕರಣಿ, ಜಿತೇಂದ್ರ ಸಾಬಣ್ಣವರ್, ರಾಘವೇಂದ್ರ ಪೂಜಾರಿ, ಅಭಿಷೇಕ್ ಗುಪ್ಪೆ ರಾಹುಲ್ ಮಂಡೂಲ್ಕರ್ ಅತಿಥಿಯಾಗಿ ಆಗಮಿಸಿದ್ದ ಡಾ. ಅಭಿಜಿತ್ ಹಾಗೂ ಡಾ ವಂದನಾ ಗೋಗಟೆ, ಇವರಿಗೆ ಸನ್ಮಾನಿಸಲಾಯಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ