Latest

ಟಿಪ್ಪರ್- ಬೈಕ್ ಮಧ್ಯೆ ಡಿಕ್ಕಿ; ಬೈಕ್ ಸವಾರರು ಸ್ಥಳದಲ್ಲೇ ಸಾವು

 ಪ್ರಗತಿವಾಹಿನಿ ಸುದ್ದಿ, ಬಾಗಲಕೋಟೆ: ಟಿಪ್ಪರ್ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಜಮಖಂಡಿ ರಸ್ತೆಯ ಲೋಕಾಪುರ- ಖಜ್ಜಿಡೋಣಿ ನಡುವೆ ಈ ಅಪಘಾತ ಸಂಭವಿಸಿದೆ. ಲೋಕಾಪುರದ ಶಾರದಾಳ ಗ್ರಾಮದ ಯಂಕಣ್ಣ ತಳವಾರ (29) ಹಾಗೂ ಉದಗಟ್ಟಿ ಗ್ರಾಮದ ಹನುಮಂತ ಪೂಜಾರ (28) ಮೃತಪಟ್ಟವರು.

ಇವರಿಬ್ಬರೂ ಲೋಕಾಪುರ ಪಟ್ಟಣದಿಂದ ತಮ್ಮ ಊರಿನತ್ತ ತೆರಳುತ್ತಿದ್ದಾಗ ಬೈಕ್ ಹಾಗೂ ಟಿಪ್ಪರ್ ಮಧ್ಯೆ ಡಿಕ್ಕಿ ಸಂಭವಿಸಿ ಈ ದುರ್ಘಟನೆ ನಡೆದಿದೆ.

ಈ ಕುರಿತು ಲೋಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿಗುಲೆ ಗ್ರಾಮಸ್ಥರಿಗೆ ಉಚಿತ ನೇತ್ರ ತಪಾಸಣೆ ಶಿಬಿರ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button