Kannada NewsKarnataka NewsLatest

ನವೆಂಬರ್ ನಲ್ಲಿ ಬೆಳಗಾವಿಗೆ ಅರವಿಂದ ಕೇಜ್ರೀವಾಲ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:  ಕಬ್ಬು ಬೆಳೆಗಾರರ ಸಮಸ್ಯೆ  ಬಗೆ ಹರಿಸುವಲ್ಲಿ ರಾಜ್ಯ ಬಿಜೆಪಿ ಸರಕಾರ ವಿಫಲವಾಗಿದೆ. ಈ‌ ಹಿನ್ನೆಲೆಯಲ್ಲಿ ರೈತರ ಸಮಸ್ಯೆಗೆ ಸ್ಪಂದಿಸಲು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮುಂದಿನ ತಿಂಗಳು ಬೆಳಗಾವಿಗೆ ಆಗಮಿಸಲಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷ ಭಾಸ್ಕರ್ ರಾವ್ ಹೇಳಿದರು.

ಬುಧವಾರ ನಗರದ ಪ್ರವಾಸಿ ಮಂದಿರದಲ್ಲಿ ಕರೆಯಲಾದ ಸುದ್ದಿ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ಬೆಳಗಾವಿ ಕಬ್ಬು ಬೆಳೆಗಾರರ ಸಮಸ್ಯೆ ಆಲಿಸಲು ಸರಕಾರಕ್ಕೆ ಇಚ್ವಾಶಕ್ತಿ ಇಲ್ಲ. 40% ಭ್ರಷ್ಟಾಚಾರದಲ್ಲಿ‌ ಮುಳುಗಿರುವ ಸರಕಾರದ ಅವಧಿ ಮುಗಿಯುವ ವೇಳೆಗೆ ರೈತರಿಗೆ ಅನಕೂಲವಾಗುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು‌.

ಉತ್ತರ ಕರ್ನಾಟಕದ ಬೆಳಗಾವಿ ಜಿಲ್ಲೆ ಸಕ್ಕರೆ ನಾಡು. ಕಬ್ಬು ಬೆಳೆಗಾರರಿಗೆ ಎಲ್ಲ ಸರಕಾರ ಆಶ್ವಾಸನೆ ಕೊಡುತ್ತಿದ್ದಾರೆ ವಿನಃ ಯಾರೂ ಶಾಶ್ವತ ಪರಿಹಾರ ಕಲ್ಪಿಸುತ್ತಿಲ್ಲ ಎಂದು‌ ಅಸಮಾಧಾನ ವ್ಯಕ್ತಪಡಿಸಿದರು.

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಬೆಳಗಾವಿಗೆ ಬರಲಿದ್ದಾರೆ. ಪಂಜಾಬ್ ಸರಕಾರ ಕಬ್ಬಿಗೆ ನಿಗದಿ ಪಡಿಸಿದ ದರದ ಹಾಗೆ ಕರ್ನಾಟಕದಲ್ಲಿ ಆಗಬೇಕು. ಆದರೆ ಕರ್ನಾಟಕ ಸರಕಾರ ಕೇವಲ 2,700 ರೂ. ಪ್ರತಿ ಟನ್ ಕಬ್ಬಿಗೆ ದರ ನಿಗದಿ ಮಾಡಿದ್ದಾರೆ. ಈಗಾಗಲೇ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಸಮೀಕ್ಷೆ ನಡೆಸಿ ದೆಹಲಿ ಸಿಎಂಗೆ ವರದಿ ಸಲ್ಲಿಸಲಾಗುವುದು ಎಂದರು.

ದೀರ್ಘಕಾಲದ ನ್ಯಾಯ ರೈತರಿಗೆ ಸಿಗಬೇಕಾದ ಕಬ್ಬಿನ ದರ ಕರ್ನಾಟಕದ ರೈತರಿಗೆ ಸಿಕ್ಕಿಲ್ಲ. ಪಂಜಾಬ್ ಸರಕಾರ ಪ್ರತಿ  ಟನ್ ಕಬ್ಬಿಗೆ 3,800 ರೂ. ದರ ನಿಗದಿ ಮಾಡಿ ತೆಗೆದುಕೊಂಡ ನಿರ್ಧಾರದ ಬಗ್ಗೆ ಕರ್ನಾಟಕದ ರೈತರಿಗೆ‌ ಮನವರಿಕೆ ಮಾಡಿಕೊಡಲಿದ್ದಾರೆ ದೆಹಲಿ ಸಿಎಂ ಎಂದರು.

ಬೆಳಗಾವಿಯ ಕಬ್ಬು ಬೆಳೆಗಾರರನ್ನು ಬೆಂಗಳೂರಿಗೆ ಕರೆಸಿ ಸಭೆ ನಡೆಸುವುದು ಬೇಡ. ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ‌ ಸಿಎಂ ಬಸವರಾಜ ಬೊಮ್ಮಾಯಿ‌ ‌ಅವರು ಸಭೆ ಕರೆಯಬೇಕು ಎಂದು ಒತ್ತಾಯಿಸಿದರು.

ಉತ್ತರ ವಲಯ ಉಸ್ತುವಾರಿ ರಾಜಕುಮಾರ ಟೋಪಣ್ಣವರ, ವಲಯ ಸಂಯೋಜಕ ವಿಜಯ ಶಾಸ್ತ್ರಿಮಠ, ಜಿಲ್ಲಾ ಸಂಯೋಜಕ ಶಂಕರ ಹೆಗಡೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಅಮೀರ್ ಖಾನ್ ಸುತ್ತ ಮತ್ತೊಂದು ವಿವಾದ ; ಹಿಂದೂ ಸಂಪ್ರದಾಯ ಟೀಕಿಸಿದ ಆರೋಪ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button