Latest

ಇನ್ನು ಮುಂದೆ ಜನನ ಪ್ರಮಾಣಪತ್ರದ ಜತೆಗೆ ಸಿಗಲಿದೆ ಶಿಶುವಿನ ಆಧಾರ್ ಕಾರ್ಡ್

ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ದೇಶದಲ್ಲಿ ನವಜಾತ ಶಿಶುಗಳ ಜನನ ಪ್ರಮಾಣಪತ್ರದೊಂದಿಗೇ ಆಧಾರ್‌ ಕಾರ್ಡ್‌ ನೀಡುವ ಹೊಸ ಯೋಜನೆಯೊಂದು ಶೀಘ್ರವೇ ಜಾರಿಗೊಳ್ಳಲಿದೆ.

ದೇಶದ 16 ರಾಜ್ಯಗಳಲ್ಲಿ ಈ ವ್ಯವಸ್ಥೆ ಒಂದು ವರ್ಷದಿಂದ ಜಾರಿಯಿದ್ದು, ಶೀಘ್ರವೇ ಕರ್ನಾಟಕ ಸೇರಿದಂತೆ ಎಲ್ಲ ರಾಜ್ಯಗಳಿಗೂ ವಿಸ್ತರಣೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.

ಪ್ರಸ್ತುತ 5 ವರ್ಷದೊಳಗಿನ ಮಕ್ಕಳ ಬಯೋಮೆಟ್ರಿಕ್ಸ್‌ ಬದಲಾಗಿ ಅವರ ವಿಶಿಷ್ಟ ಗುರುತಿನ ಸಂಖ್ಯೆಯನ್ನು (UID) ಭೌಗೋಳಿಕ ಮಾಹಿತಿ ಮತ್ತು ಮುಖದ ಫೋಟೋ ಆಧಾರದಲ್ಲಿ ನೋಂದಣಿ ಮಾಡಲಾಗುತ್ತದೆ. ಅದನ್ನು ಪೋಷಕರ  UID ಆಧಾರದಲ್ಲಿ ನಿರ್ವಹಿಸಲಾಗುತ್ತದೆ. ಮಗುವಿಗೆ 5 ಮತ್ತು 15 ವರ್ಷ ತುಂಬಿದ ನಂತರ ಬಯೋಮೆಟ್ರಿಕ್ ಅಪ್‌ಡೇಟ್ ಪಡೆಯಲಾಗುತ್ತದೆ. 

ಜನನ ಪ್ರಮಾಣ ಪತ್ರ ವಿತರಣೆಯಾಗುತ್ತಲೇ ಈ ಕುರಿತ ಮಾಹಿತಿ ಸಂದೇಶ ವಿಶಿಷ್ಟ ಗುರುತಿನ ಸಂಖ್ಯೆ ವ್ಯವಸ್ಥೆಗೆ ರವಾನೆಯಾಗುತ್ತದೆ. ಮಗುವಿನ ಹೆಸರಿನಲ್ಲಿ ಹೊಸ ಗುರುತಿನ ಸಂಖ್ಯೆ ನೋಂದಣಿಯಾಗುತ್ತದೆ. ಬಳಿಕ ಮಗುವಿನ ಫೋಟೋ ಮತ್ತು ವಿಳಾಸ ಈ ವ್ಯವಸ್ಥೆಗೆ ರವಾನೆಯಾದ ಕೂಡಲೇ ಆಧಾರ್‌ ಸಂಖ್ಯೆ ಕೂಡ ಸೃಷ್ಟಿಯಾಗುತ್ತದೆ ಎನ್ನಲಾಗಿದೆ. 

ಮುರುಘಾಶ್ರೀ ಪೀಠತ್ಯಾಗ: ಪ್ರಭಾರ ಪೀಠಾಧ್ಯಕ್ಷರಾಗಿ ಬಸವಪ್ರಭುಶ್ರೀ ನೇಮಕ ನಿರ್ಧಾರ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button