Latest

ಬಾಲಕಿ ಅತ್ಯಾಚಾರ, ಹತ್ಯೆ ಪ್ರಕರಣ; ಪಾಠವಾಗುವಂತೆ ಆರೋಪಿಗೆ ಉಗ್ರಶಿಕ್ಷೆ; ಸಿಎಂ ಭರವಸೆ

ಪ್ರಗತಿವಾಹಿನಿ ಸುದ್ದಿ; ಮಂಡ್ಯ: ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ನಡೆದ ಬಾಲಕಿ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಬಾಲಕಿ ಕುಟುಂಬಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.

ಕೆ.ಆರ್.ಪೇಟೆಯ ತ್ರಿವೇಣಿ ಸಂಗಮದಲ್ಲಿ ಕುಂಭಮೇಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವಂತೆ ಪೊಲೀಸ್ ಮಹಾನಿರ್ದೇಶಕರಿಗೆ ಅಂದೇ ಸೂಚಿಸಿದ್ದೇನೆ. ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು. ಆ ನಿಟ್ಟಿನಲ್ಲಿ ಕ್ರಮ ಜರುಗಿಸಬೇಕು ಎಂದರು.

ಬಾಲಕಿ ಮೇಲೆ ಅತ್ಯಾಚಾರ ಹಾಗೂ ಹತ್ಯೆ ಇದೊಂದು ಅಮಾನುಷ ಕೃತ್ಯ. ಮನುಷತ್ವವಿಲ್ಲದವರು ಮಾತ್ರ ಮಾಡಲು ಸಾಧ್ಯ. ಆ ಕಂದಮ್ಮಳ ಪರಿಸ್ಥಿತಿ ನೋಡಿದರೆ ಕರುಳು ಕಿತ್ತು ಬರುತ್ತೆ. ನಾನು ಪೊಲೀಸ್ ಇಲಾಖೆಗೆ ಅಂದೇ ಹೇಳಿದ್ದೇನೆ. ಪ್ರಕರಣ ಗಂಭೀರವಾಗಿ ಪರಿಗಣಿಸಿ. ಬರಿ ಚಾರ್ಜ್ ಶೀಟ್ ಹಾಕುವುದಲ್ಲ. ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಸೂಚಿಸಿದ್ದೆ. ನಿಮ್ಮ ಮನಸ್ಸಿನಲ್ಲಿ ಆರೋಪಿಗೆ ಯಾವ ಶಿಕ್ಷೆಯಾಗಬೇಕು ಎಂಬುದಿದೆ ನನ್ನ ಮನಸ್ಸಿನಲ್ಲೂ ಅದೇ ಭಾವನೆ ಇದೆ. ಸಮಾಜಕ್ಕೆ ಇದೊಂದು ಪಾಠವಾಗುವಂತೆ ಆರೋಪಿಗೆ ಉಗ್ರ ಶಿಕ್ಷೆ ನೀಡುತ್ತೇವೆ ಎಂದು ಹೇಳಿದರು.

ಎಫ್ ಎಸ್ ಎಲ್ ವರದಿ ಬಳಿಕ ಇದೊಂದು ವಿಶೇಷ ಪ್ರಕರಣ ಎಂದು ಪರಿಗಣಿಸಲಾಗುವುದು. ಈಗಾಗಲೇ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಹೇಳಿದರು.

ಇನ್ನು ಕುಂಭಮೇಳ ವಿಚಾರವಾಗಿ ಮಾತನಾಡಿದ ಮುಖ್ಯಮಂತ್ರಿಗಳು, ನಾಗರಿಕತೆ ಬೇರೆ, ಸಂಸ್ಕೃತಿ ಬೇರೆ. ನಾವೇನು ಆಗಿದ್ದೇವೆ ಎಂಬದನ್ನು ಪ್ರತಿಯೊಬ್ಬರು ಅರಿತುಕೊಳ್ಳಬೇಕು. ಆತ್ಮಸಾಕ್ಷಿ, ಆತ್ಮ ಸ್ಥೈರ್ಯ ಇದ್ದಾಗ ಮಾತ್ರ ಆತ್ಮ ಗೌರವ ಸಿಗುತ್ತದೆ. ಆತ್ಮಗೌರವ ಸಿಕ್ಕಾಗ ಮಾತ್ರ ಆತ್ಮ ಸಂತೃಪ್ತವಾಗಿರುತ್ತದೆ. ಯಾವ ವ್ಯಕ್ತಿಯ ಆತ್ಮಸಂತೃಪ್ತವಾಗಿರುತ್ತೋ ಆತ ಸ್ಥಿತಪ್ರಜ್ಞನಾಗಿರುತ್ತಾನೆ. ಸ್ಥಿತಪ್ರಜ್ಞನಾಗಿರುವ ವ್ಯಕ್ತಿ ಏನೇ ಸಂದರ್ಭ ಬಂದರೂ ವಿಚಲಿತನಾಗುವುದಿಲ್ಲ. ಯಾವುದೇ ತಪ್ಪು ಮಾಡಲ್ಲ ಎಂದರು.

ಜೀವನದಲ್ಲಿ ಗುರು ಹಾಗೂ ಗುರಿ ಇರಬೇಕು. ಗುರು ಸಿಗುವುದು ಶ್ರದ್ಧಾ ಭಕ್ತಿಯಿಂದ. ಭಕ್ತಿ ಎಂದರೆ ಉತ್ಕೃಷ್ಟವಾದ ಪ್ರೀತಿ. ಪ್ರೀತಿಯಲ್ಲಿ ನನಾಅವಿಧಗಳಿವೆ ಒಂದು ಡೀಲ್ ಮಾಡಿಕೊಂಡು ಕರಾರು ಮಾಡಿಕೊಂಡ ಪ್ರೀತಿ. ಇನ್ನೊಂದು ಇದ್ಯಾವುದರ ಗೊಡವೆಯಿಲ್ಲದ ಕರಾರು ರಹಿತವಾದ ಪ್ರೀತಿ. ಕರಾರು ರಹಿತ ಪ್ರೀತಿಯೇ ಭಕ್ತಿ. ಆಧ್ಯಾತ್ಮದ ಒಳಾರ್ಥ ಕೊಟ್ಟವರೇ ಶಂಕರಾಚಾರ್ಯರು. ಶಂಕರಾಚಾರ್ಯರು ದಕ್ಷಿಣದವರೆಗೂ ಪ್ರಯಾಣಿಸದಿದ್ದರೆ ಹಿಂದೂ ಸಮಾಜ ಹಲವು ಸವಾಲು ಎದುರಿಸಬೇಕಿತ್ತು. ನಮ್ಮದು ಶ್ರೀಮಂತ ದೇಶ. ಸಾಮಾಜಿಕ ಮೌಲ್ಯಗಳನ್ನು ಹೊಂದಿರುವ ಬದುಕು ನಮ್ಮದು. ಆರ್ಥಿಕವಾಗಿ ಸದೃಢರಲ್ಲದಿದ್ದರೂ ಸಂಸ್ಕೃತಿಯಲ್ಲಿ ಶ್ರೀಮಂತರಿರಾಗಿದ್ದೇವೆ. ಇದನ್ನು ಉಳಿಸಿಕೊಂದು ಹೋಗುವುದು ನಮ್ಮ ಕರ್ತವ್ಯ. ಕುಂಭಮೇಳ ಒಂದು ಪುಣ್ಯ ಕಾರ್ಯವಾಗಿದ್ದು. ಇದು ಮುಂದುವರೆಯಬೇಕು. ಸಂಗಮದಲ್ಲಿ ಕುಂಭಮೇಳ ಕಾರ್ಯಕ್ಕೆ ಶ್ರಮಿಸಿದ ಎಲ್ಲರಿಗೂ ಅಭಿನಂದನೆಗಳು ಎಂದು ಹೇಳಿದರು.

 
ಕರಳು ಕಿವುಚಿಬರುತ್ತದೆ:
ಮಳವಳ್ಳಿ  ಘಟನೆ ಬಗ್ಗೆ ಎಲ್ಲರೂ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಸಮಾಜದಲ್ಲಿ ಎಂದಿಗೂ ಇಂಥದ್ದು ನಡೆಯಬಾರದು. ಅತ್ಯಂತ ಅಮಾನುಷ ಕೃತ್ಯವಿದು. ಮನುಷ್ಯತ್ವವಿಲ್ಲದವರು ಮಾತ್ರ ಇಂಥ ಕೆಲಸ ಮಾಡಲು ಸಾಧ್ಯ . ಇದನ್ನು ಶಬ್ದಗಳಲ್ಲಿ ಖಂಡಿಸಲಾಗದು.  ಅರಿಯದ ಕಂದಮ್ಮನ ಪರಿಸ್ಥಿತಿ ಕೇಳಿದರೆ ಕರಳು ಕಿವುಚಿಬರುತ್ತದೆ. ಈಗಾಗಲೇ ಅಧಿಕಾರಿಗಳು ಕ್ರಮ ತೆಗೆದುಕೊಂಡು ಅಪರಾಧಿಯನ್ನು ಬಂಧಿಸಲಾಗಿದೆ. ಎಲ್ಲ 302, 307, ಪೋಕ್ಸೋ ಸೆಕ್ಷನ್ ಗಳನ್ನು ಹಾಕಿದ್ದಾರೆ. ನಮ್ಮ ಪೊಲೀಸ್ ಮಹಾನಿರ್ದೇಶಕರಿಗೆ ಅಂದೇ  ಸೂಚನೆ ನೀಡಿ ಕೂಡಲೇ ತನಿಖೆಯಾಗಿ ತಪ್ಪಿ ತಸ್ಥರನ್ನು ಶಿಕ್ಷೆಗೊಳಪಡಿಸಬೇಕೆಂದು ಸೂಚಿಸಿದ್ದೆ. ಅವರು ಎಫ್.ಎಸ್.ಎಲ್ ವರದಿ ಒಂದು ವಾರದಲ್ಲಿಯೇ ನೀಡಲಾಗುವುದೆಂದು ಹೇಳಿದ್ದು, ಬಂದ ಕೂಡಲೇ ಆರೋಪ ಪಟ್ಟಿ ಸಿದ್ಧಪಡಿಸಿ ಪೋಕ್ಸೋ ನ್ಯಾಯಾಲಯಕ್ಕೆ ಕಳುಹಿಸಿ, ಆದಷ್ಟು ಬೇಗ ನ್ಯಾಯ ನೀಡಲು ಕ್ರಮ ಕೈಗೊಂಡು  ಇನ್ನೊಮ್ಮೆ ಹೀಗಾದರೆ ಅತಿ ಕಡಿಮೆ ಸಮಯದಲ್ಲಿ ಉಗ್ರ ಶಿಕ್ಷೆ ಈ ವ್ಯವಸ್ಥೆ ನೀಡಲಿದೆ ಎಂಬ ಸಂದೇಶವನ್ನು ಸಾರಲಾಗುವುದೆಂದು ಈ ಪ್ರಕರಣದಲ್ಲಿ ಸಾಬೀತು ಮಾಡುತ್ತೇವೆ ಎಂದರು.
*ಉಗ್ರ ಶಿಕ್ಷೆ*
ಅಪರಾಧಿಗೆ ಉಗ್ರ ಶಿಕ್ಷೆ  ನೀಡಲಾಗುವುದು. ನಿಮ್ಮ ಮನಸ್ಸಿನಲ್ಲಿರುವುದೇ ನಮ್ಮ ಮನಸ್ಸಿನಲ್ಲಿದೆ. ನಿಮ್ಮ ಭಾವನೆಗಳನ್ನು ಅರ್ಥ ಮಾಡಿಕೊಳ್ಳುತ್ತೇವೆ. ಮೌಲ್ಯಗಳ ಕುಸಿತದಿಂದ ಇವೆಲ್ಲಾ ಆಗುತ್ತಿದೆ. ಯಾವುದು ಸರಿ, ತಪ್ಪು ಎಂದು ಸ್ಪಷ್ಟ ತೆ ಇಲ್ಲ. ಭಯ, ಭಕ್ತಿ ಇಲ್ಲ. ಇವುಗಳು ಇರಬೇಕಾದರೆ ಸಂಸ್ಕಾರ , ಸಂಸ್ಕೃತಿ ಅಗತ್ಯ. ಅಮಾನುಷ ಕೃತ್ಯ ಸಮಾಜದಲ್ಲಿ ಆಗಬಾರದೆಂದರೆ ನೈತಿಕ ಬದ್ಧತೆ, ಭಯ ಬರಬೇಕಾದರೆ ಸಂಸ್ಕಾರ ಅಗತ್ಯ ಎಂದರು. ನಾವೇನಾಗಿದ್ದೇವೆ ಎಂಬ ಪ್ರಶ್ನೆಯನ್ನು ಪ್ರತಿಯೊಬ್ಬರು ಕೇಳಿಕೊಳ್ಳಬೇಕು ಎಂದರು.
*ಬೆಳೆ ನಾಶಕ್ಕೆ  2.30 ಕೋಟಿ ರೈತರಿಗೆ ಪರಿಹಾರ*
ಮಳೆ ಕರ್ನಾಟಕದ ಉದ್ದಗಲಕ್ಕೂ ಆಗುತ್ತಿದೆ. ಕೆರೆಕಟ್ಟೆಗಳು ತುಂಬಿವೆ.ಆದರೆ ಕೆಲವು ಕಡೆ ಪ್ರವಾಹ ಆಗಿದೆ. ಜನವಸತಿ ತೊಂದರೆಯಾಗಿದ್ದು, ಸಮಸ್ಯೆ ನಿವಾರಣೆಗೆ ಕ್ರಮ ವಹಿಸಿದೆ. ಮಂಡ್ಯಕ್ಕೆ ಸಂಬಂಧಿಸಿದಂತೆ ವೀಡಿಯೊ ಸಂವಾದದಲ್ಲಿ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದೆ.   ಬೆಳೆ ನಾಶಕ್ಕೆ  2.30 ಕೋಟಿ ರೈತರಿಗೆ ಪರಿಹಾರವನ್ನು ಒದಗಿಸಲಾಗಿದೆ. ಅದರ ಜೊತೆಗೆ ಇಬ್ಬರು ಮರಣ ಹೊಂದಿದವರಿಗೆ ತಲಾ 5 ಲಕ್ಷ ರೂ.ಗಳ ಪರಿಹಾರ ನೀಡಿದೆ. ಬಿದ್ದುಹೋಗಿದ್ದ  304 ಮನೆಗಳಿಗಳಿಗೆ 100ಕ್ಕೆ 100 ಪರಿಹಾರ ನೀಡಲಾಗಿದೆ. ಮತ್ತೆ ಒಂದು ವಾರದಿಂದ ಆಗುತ್ತಿರುವ ಮಳೆಗೆ ಕೂಡಲೇ ಬೆಲೆ ನಾಶ, ಮನೆಗಳಿಗೆ ಸಂಬಂಧಿಸಿದಂತೆ ವರದಿ ನೀಡಿದರೆ  ಕೂಡಲೇ ಪರಿಹಾರ ನೀಡಲಾಗುವುದು ಎಂದರು.
ಬೆಳೆ ನಾಶ ಆದಾಗ ಒಂದೂವರೆ ವರ್ಷ ಆಗುತ್ತಿತ್ತು.  ನಾನು ಮುಖ್ಯ ಮಂತ್ರಿ ಆದಾಗಿನಿಂದ ಒಂದೂವರೆ ತಿಂಗಳಲ್ಲಿ ಡಿಬಿಟಿ ಮುಖಾಂತರ ಪರಿಹಾರ ವಿತರಣೆಯಾಗುತ್ತಿದೆ ಎಂದರು. ಖಾತೆಗಳಿಗೆ ನೇರವಾಗಿ ಹೋಗುತ್ತಿದೆ. ಪರಿಹಾರವನ್ನು ಎರಡು ಪಟ್ಟು ಹೆಚ್ಚಿಸಲಾಗಿದೆ. ಒಣಬೇಸಾಯಕ್ಕೆ 13600ರೂ., ನೀರಾವರಿಗೆ 25 ಸಾವಿರ ಪರಿಹಾರ ನೀಡುತ್ತಿದ್ದೇವೆ. ತೋಟಗಳಿಗೆ ಕೇಂದ್ರ 18 ಸಾವಿರ ರೂ.ಗಳನ್ನು ನೀಡಿದರೆ ರಾಜ್ಯ ಸರ್ಕಾರ 28 ಸಾವಿರ ರೂ.ಗಳನ್ನು ನೀಡುತ್ತಿದೆ . ಮನೆಗಳಿಗೆ ಕೇಂದ್ರ ಸರ್ಕಾರ 95 ಸಾವಿರ ರೂ. ನೀಡುತ್ತದೆ. ನಾವು ಪೂರ್ಣ ಬಿದ್ದಿರುವ ಮನೆಗಳಿಗೆ  5 ಲಕ್ಷ, ಭಾಗಶಃ ಹಾಳಾಗಿರುವ ಮನೆಗಳಿಗೆ 3 ಲಕ್ಷ, ಹಾಗೂ ಸ್ವಲ್ಪ ಹಾಳಾಗಿರುವ ಮನೆಗಳಿಗೆ 50 ಸಾವಿರ ರೂ.ಗಳನ್ನು ನೀಡುತ್ತಿದ್ದೇವೆ. ಹೀಗೆ ಕಷ್ಟದಲ್ಲಿರುವ ಜನರಿಗೆ ನೆರ ವಾಗುತ್ತಿದ್ದೇವೆ ಎಂದರು.  ಹಿಂದೆ  ಈ ರೀತಿ ಪ್ರಕ್ರಿಯೆಗಳಾಗುತ್ತಿರಲಿಲ್ಲ. ಮನೆಗಳ ಜೊತೆಗೆ ಬೆಳೆಗಳ ನಾಶಕ್ಕೆ ಎರಡು ಪಟ್ಟುಪರಿಹಾರ ನೀಡುತ್ತಿರುವುದು ಬಿಜೆಪಿ ಸರ್ಕಾರ. ರೈತರ ಪರವಾಗಿ ನಾವು ಇದ್ದು, ಏನೇ ಸಂಕಷ್ಟ ಬಂದರೂ ಅವರೊಂದಿಗೆ ನಿಲ್ಲುತ್ತೇವೆ ಎಂದರು.
*ರಾಷ್ಟ್ರೀಯ ಹೆದ್ದಾರಿ: ಶೀಘ್ರ ಕ್ರಮ*
  ರಾಷ್ಟ್ರೀಯ ಹೆದ್ದಾರಿ ಗಳ ಬಗ್ಗೆ ಇದೇ ವಾರದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿ, ಬೆಂಗಳೂರು- ಮೈಸೂರಿ ಹೆದ್ದಾರಿಯಲ್ಲಿ ಪದೇ ಪದೇ ನೀರು ನಿಂತು ತೊಂದರೆಯಾಗುತ್ತಿದ್ದು, ಇದರಲ್ಲಿ ವಿನ್ಯಾಸದ ಸಮಸ್ಯೆ
ಯೋ ಅಥವಾ ನಿರ್ವಹಣೆಯ ಸಮಸ್ಯೆಯೂ ಎಂದು ಪರಿಶೀಲಿಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಯಾವುದೇ ನೀರು ಬರದಂತೆ ವಿಶೇಷ ವ್ಯವಸ್ಥೆ ಮಾಡಿ, ಬ್ಲಾಕ್ ಸ್ಟಾಟ್ ಗಳನ್ನು ತೆಗೆದುಕೊಳ್ಳುತ್ತೇವೆ ಎಂದರು.

ಕೇಬಲ್ ನೆಟ್ ಮೂಲಕ ಮೀನುಗಾರಿಕೆಗೆ ಸಹಾಯಧನ: 1000 ಮೀನುಗಾರರಿಗೆ ಹೆಚ್ಚಳ

https://pragati.taskdun.com/politics/olanadu-meenu-utpadakara-samaveshacm-basavaraj-bommaibanglaore/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button