Latest

ರಾಜ್ಯದ 50.36 ಲಕ್ಷ ರೈತರಿಗೆ 1007.26 ಕೋಟಿ ರೂ. ವರ್ಗಾವಣೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 12ನೇ ಕಂತಿನ ನೆರವನ್ನು ಬಿಡುಗಡೆ ಮಾಡಿದ್ದು, ರಾಜ್ಯದ 50.36 ಲಕ್ಷ ರೈತರಿಗೆ 1007.26 ಕೋಟಿ ರೂ. ಗಳನ್ನು ವರ್ಗಾವಣೆ ಮಾಡಲಾಗುತ್ತಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಸಚಿವ ಸಂಪುಟದ ಸಹೋದ್ಯೋಗಿಗಳು, ಸರ್ಕಾರದ ಹಿರಿಯ ಅಧಿಕಾರಿಗಳು ಹಾಗೂ ಎಲ್ಲ ಜಿಲ್ಲಾಧಿಕಾರಿಗಳೊಂದಿಗೆ ವರ್ಚುವಲ್ ಆಗಿ ಈ ಸಮಾರಂಭದಲ್ಲಿ ಪಾಲ್ಗೊಂಡರು.

ಈ ಯೋಜನೆಯ ಪ್ರಮುಖ ಅಂಶಗಳು:

ಇಲ್ಲಿಯವರೆಗೆ, ಕೇಂದ್ರ ಸರ್ಕಾರದಿಂದ 53.83 ಲಕ್ಷ ರೈತ ಕುಟುಂಬಗಳು ಕನಿಷ್ಠ ಒಂದು ಕಂತು ಪಡೆಯುವ ಮೂಲಕ ಯೋಜನೆಯ ಲಾಭವನ್ನು ಪಡೆದಿರುತ್ತಾರೆ. ಮಾರ್ಚ್ 2019 ರಿಂದ ಜುಲೈ 2022 ರವರೆಗೆ 53.83 ಲಕ್ಷ ರೈತ ಕುಟುಂಬಗಳು ಭಾರತ ಸರ್ಕಾರದಿಂದ ಒಟ್ಟು ರೂ.9968.57 ಕೋಟಿ ಆರ್ಥಿಕ ಸಹಾಯಧನವನ್ನು ಪಡೆದಿರುತ್ತದೆ.

Home add -Advt

2022-23 ನೇ ಸಾಲಿನಲ್ಲಿ 1251.98 ಕೋಟಿಗಳ ಆರ್ಥಿಕ ಸಹಾಯಧನ ವರ್ಗಾವಣೆಯಾಗಿರುತ್ತದೆ.
ರಾಜ್ಯ ಸರ್ಕಾರದಿಂದ ಪಿ.ಎಂ. ಕಿಸಾನ್ – ಕರ್ನಾಟಕ ಯೋಜನೆಯಡಿ ಭಾರತ ಸರ್ಕಾರದಿಂದ ಅನುಮೋದಿಸಲ್ಪಟ್ಟ ರೈತ ಕುಟುಂಬಗಳಿಗೆ 2019 ರಿಂದ ಇಲ್ಲಿವರೆಗೆ ರೂ. 4821.37 ಕೋಟಿಗಳ ಆರ್ಥಿಕ ಸಹಾಯಧನವನ್ನು ನೀಡಲಾಗಿರುತ್ತದೆ. 2022-23 ನೇ ಸಾಲಿನಲ್ಲಿ 956.71 ಕೋಟಿಗಳ ಆರ್ಥಿಕ ನೆರವನ್ನು ರೈತರ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆ ಮಂಜೂರಾತಿ ನೀಡಲಾಗಿದೆ.

ಈ ಯೋಜನೆಯಡಿ ಎಲ್ಲಾ ಪಾವತಿಗಳನ್ನು ಸಾಧ್ಯವಾದಷ್ಟು ಆಧಾರ್ ಆಧಾರಿತ ಡಿಬಿಟಿ ಮುಖಾಂತರ ಮಾಡಬೇಕೆಂದು ಭಾರತ ಸರ್ಕಾರ ಬಯಸುತ್ತದೆ. ಎಲ್ಲಾ ರಾಜ್ಯಗಳ ಪೈಕಿ, ಕರ್ನಾಟಕ ರಾಜ್ಯವು ಅತಿ ಹೆಚ್ಚು ಶೇಕಡಾವಾರು (96%) ಆಧಾರ್ ಆಧಾರಿತ ವಹಿವಾಟುಗಳನ್ನು ಅತ್ಯುತ್ತಮವಾಗಿ ನಿರ್ವಹಿಸಿದ ಹಿನ್ನೆಲೆಯಲ್ಲಿ 2020-21 ಸಾಲಿನಲ್ಲಿ ಭಾರತ ಸರ್ಕಾರದಿಂದ ಕರ್ನಾಟಕ ರಾಜ್ಯಕ್ಕೆ ಪ್ರಶಸ್ತಿ ದೊರೆತಿರುತ್ತದೆ.

ನಿರಂತರ ಮೇಲ್ವಿಚಾರಣೆಯ ಭಾಗವಾಗಿ ಯೋಜನೆಯ ಫಲಾನುಭವಿಗಳಾಗಿರುವ ರೈತ ಕುಟುಂಬಗಳ ಅರ್ಹತೆಯನ್ನು ನಿಯತಕಾಲಿಕವಾಗಿ ಪರಿಶೀಲಿಸಲಾಗುತ್ತಿದೆ.

ಬಿಜೆಪಿ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದೆ; ಅರುಣ್ ಸಿಂಗ್ ವಿಶ್ವಾಸ

https://pragati.taskdun.com/politics/bjpwill-form-govtkarnataka-againarun-singh/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button