Kannada NewsLatest

ಬದುಕಿನ ಮೌಲ್ಯಗಳು ಸಿಗುವುದು ಮಠಗಳಲ್ಲಿ -ಮೃತ್ಯುಂಜಯ ಸ್ವಾಮಿ ಹಿರೇಮಠ

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ಜೀವನ ಸುಖಮಯವಾಗಿರಬೇಕಾದರೆ ನಿಂದಕರ ಓಣಿಯೊಳಗಿರಬೇಕು, ನಮ್ಮ ಬದುಕು ಕ್ರಮಬದ್ದವಾಗಿ, ಕ್ರಿಯಾಶೀಲ, ಪ್ರಾಮಾಣಿಕವಾಗಿರಬೇಕಾದರೆ, ನಮ್ಮ ಸುತ್ತ ಮುತ್ತ ನಿಂದಕರಿರಬೇಕು. ಆದರೆ ನಿಂದನೆ ಘಾಸಿಗೊಳಿಸಬಾರದು. ಹಂದಿ ಇದ್ದರೆ ಊರು ಚಂದ, ಜನ ಇದ್ದರೆ ಜಾತ್ರೆ ಚಂದ, ನಿಂದಕರಿದ್ದರೆ ಮನ ಚಂದ ಎಂದು ಗಂದಿಗವಾಡ ಶ್ರೀ ಮೃತ್ಯುಂಜಯ ಸ್ವಾಮಿ ಹಿರೇಮಠ ಹೇಳಿದರು.

ಬೆಳಗಾವಿಯ ಶ್ರೀ ಕಾರಂಜಿಮಠದಲ್ಲಿ ನಡೆದ ೨೨೬ನೇ ಮಾಸಿಕ ಶಿವಾನುಭವದ ವಿಶೇಷ ಉಪನ್ಯಾಸ ನೀಡಿದ ಅವರು,  ಕಂಡ ಭಕ್ತರಿಗೆ ಕೈ ಮುಗಿವಾತನೆ ಭಕ್ತ, ಮೃದುವಚನವೇ ಸಕಲ ಜಪಂಗಳಯ್ಯ, ಶ್ರೀ ಕಾರಂಜಿಮಠ, ಶ್ರೀ ನಾಗನೂರು ರುದ್ರಾಕ್ಷಿಮಠದಲ್ಲಿ ಮಹಾತ್ಮರ ಪ್ರವಚನ ಕೇಳಿದರೆ ಜಪ ಮಾಡಿದಂತೆ. ಬದುಕಿನ ಮೌಲ್ಯಗಳು ಸಿಗುವದು ಕೇವಲ ಶಾಲಾ- ಕಾಲೇಜು, ವಿ. ವಿ. ಗಳಲ್ಲಿ ಅಷ್ಟೇ ಅಲ್ಲ ನಿಜವಾಗಿ ಬದುಕಿನ ಮೌಲ್ಯಗಳು ದೊರೆಯುವುದು ಮಠ ಮಾನ್ಯಗಳಲ್ಲಿ ಎಂದರು.

  ಶ್ರೀಮಠದ ಪೀಠಾಧಿಪತಿಗಳಾದ  ಶ್ರೀ ಗುರುಸಿದ್ಧ  ಸ್ವಾಮಿಗಳು ಪಾವನ ಸಾನಿಧ್ಯ ವಹಿಸಿದ್ದು, ಶ್ರೀಮಠದ ಉತ್ತರಾಧಿಕಾರಿಗಳಾದ  ಶ್ರೀ ಶಿವಯೋಗಿ ದೇವರು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಮತ್ತು ಸಮಾಜ ಸೇವಕಿ  ವೈಶಾಲಿ ಸುತಾರ ಸಾ. ಕರಾಡ ಇವರನ್ನು ಸನ್ಮಾನಿಸಿದರು.
ಅಧ್ಯಕ್ಷತೆ ವಹಿಸಿದ್ದ ವಿಶ್ರಾಂತ ಪ್ರಾಚಾರ್ಯ ಪ್ರೊ. ಎಮ್. ಆರ್. ಉಳ್ಳೇಗಡ್ಡಿ ಅವರು,  ಸಮಾಜದಲ್ಲಿ ನಿಂದಕರಿರಬೇಕು, ಅವರ ಸಮೀಪ ಬುದುಕಿದರೆ ನೀರು, ಸಾಬೂನು ಇಲ್ಲದೆ ನಾವು ಸ್ವಚ್ಛವಾಗುತ್ತೇವೆ. ಜೀವನವೆಂದರೆ ಆಸ್ತಿ, ಅಧಿಕಾರ, ಅಂತಸ್ತಿನಿಂದ ಬದುಕುವುದಲ್ಲ. ನೆಮ್ಮದಿಯಿಂದ ಬದುಕುವುದು ಎಂದರು.  ಎಸ್. ಎನ್. ಮುತಾಲಿಕ ದೇಸಾಯಿ ಸ್ವಾಗತಿಸಿ ಪರಿಚಯಸಿದರು.  ಎ. ಎಸ್. ವಿಭೂತಿ ಗ್ರಂಥ ಪುಷ್ಪಾರ್ಪಣೆ, ಎ. ಕೆ. ಪಾಟೀಲ ನಿರೂಪಣೆ, ವಿ. ಕೆ. ಪಾಟೀಲ ಶರಣು ಸಮರ್ಪಣೆ ಮಾಡಿದರು.

ಹೆಚ್ಚಿನ ಸುದ್ದಿಗಳಿಗಾಗಿ pragativahini.com ನೋಡಿ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button