ಪ್ರಗತಿ ವಾಹಿನಿ ಸುದ್ದಿ, ಮೆಲ್ಬೋರ್ನ್ –
ವಿಶ್ವಾದ್ಯಂತ ಕೋಟ್ಯಾಂತರ ಕ್ರಿಕೇಟ್ ಪ್ರಿಯರು ಕಾತರದಿಂದ ನಿರೀಕ್ಷಿಸುತ್ತಿರುವ ಆಸ್ಟ್ರೇಲಿಯಾದಲ್ಲಿ ನಡೆದಿರುವ ಪ್ರಸಕ್ತ ಟಿ ೨೦ ವಿಶ್ವ ಕಪ್‌ನ ಭಾರತ- ಪಾಕ್ ಪಂದ್ಯಕ್ಕೆ ಮಳೆಯ ಆತಂಕ ಕಾಡಿದೆ.
ಭಾರತ- ಪಾಕ್ ನಡುವಿನ ಕ್ರಿಕೇಟ್ ಪಂದ್ಯವೆಂದರೆ ಹೈ ವೋಲ್ಟೇಜ್ ಪಂದ್ಯವೆಂದೇ ಬಣ್ಣಿಸಲಾಗುತ್ತದೆ. ಕೇವಲ ಭಾರತ ಮತ್ತು ಪಾಕಿಸ್ತಾನದ ಕ್ರಿಕೇಟ್ ಪ್ರೇಮಿಗಳು ಮಾತ್ರವಲ್ಲ, ವಿಶ್ವದಾದ್ಯಂತ ಕ್ರಿಕೇಟ್ ಅಭಿಮಾನಿಗಳಿಗೆ ಈ ಪಂದ್ಯದ ಬಗ್ಗೆ ವಿಪರೀತ ಕಾತರ. ಅ.೨೩ರಂದು ಭಾರತ- ಪಾಕಿಸ್ತಾನ ಮೇಲ್ಬೋರ್ನ್ ಸ್ಟೇಡಿಯಂನಲ್ಲಿ ಎದುರಾಗಲಿವೆ.
ಆದರೆ ಈ ಬಾರಿ ಟಿ-೨೦ ವಿಶ್ವ ಕಪ್‌ನ ಭಾರತ- ಪಾಕಿಸ್ತಾನ ಪಂದ್ಯದ ವೇಳೆ ಮಳೆ ಸುರಿಯಬಹುದು ಎಂದು ಆಸ್ಟೇಲಿಯಾದ ಹವಾಮಾನ ಇಲಾಖೆ ತಿಳಿಸಿದೆ. ಅಂದು ಯಲ್ಲೋ ಅಲರ್ಟ್ ಘೋಷಿಸಲಾಗಿದೆ. ಗುಂಪು ಹಂತದ ಪಂದ್ಯಗಳಿಗೆ ಮೀಸಲು ದಿನ ಇರದ ಕಾರಣ ಮಳೆ ಬಂದರೆ ಪಂದ್ಯ ರದ್ದಾಗಲಿದೆ.
ಕಳೆದ ವರ್ಷ ಯುಎಇಯಲ್ಲಿ ನಡೆದ ಟಿ ೨೦ ವಿಶ್ವ ಕಪ್ ಪಂದ್ಯದಲ್ಲಿ ಟೀಂ ಇಂಡಿಯಾ ಪಾಕಿಸ್ತಾನದ ವಿರುದ್ಧ ೧೦ ವಿಕೇಟ್‌ಗಳ ಸೋಲು ಕಂಡಿತ್ತು. ಅದಕ್ಕೂ ಪೂರ್ವದಲ್ಲಿ ಯಾವುದೇ ಮಾದರಿಯ ಕ್ರಿಕೇಟ್‌ನ ವಿಶ್ವ ಕಪ್ ಪಂದ್ಯಗಳಲ್ಲಿ ಭಾರತ ತಂಡ ಪಾಕ್ ವಿರುದ್ಧ ಸೋತಿರಲಿಲ್ಲ.
https://pragati.taskdun.com/religion/rishab-shettys-father-reacted-to-actor-chetans-statement/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ