Latest

ದೇಶದಲ್ಲೇ ಅತಿ ದೊಡ್ಡ ಉದ್ಯೋಗ ಅಭಿಯಾನಕ್ಕೆ ಪ್ರಧಾನಿ ಮೋದಿ ಚಾಲನೆ; 10 ಲಕ್ಷ ಸಿಬ್ಬಂದಿ ನೇಮಕಾತಿ ಆರಂಭ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ರೋಜ್ ಗಾರ್ ಮೇಳಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದರು. ಈ ಮೂಲಕ 10 ಲಕ್ಷ ಸಿಬ್ಬಂದಿಗಳ ನೇಮಕಾತಿ ಮಾಡುವ ಅಭಿಯಾನ ಆರಂಭಗೊಂಡಿದೆ.

ಈ ಅಭಿಯಾನದಲ್ಲಿ ಮೊದಲ ಹಂತದಲ್ಲಿ 75,000 ಯುವಕರಿಗೆ ನೇಮಕಾತಿ ಪತ್ರ ವಿತರಿಸಲಾಗಿದೆ. ರೋಜ್ ಗಾರ್ ಮೇಳದ ಪ್ರಯುಕ್ತ ವಿವಿಧ ಸರ್ಕಾರಿ ಉದ್ಯೋಗಗಳಿಗೆ ಆಯ್ಕೆಯಾದ ಕೆಲವು ಅಭ್ಯರ್ಥಿಗಳಿಗೆ ಕೇಂದ್ರ ಸಚಿವರು ದೇಶಾದ್ಯಂತ ವಿವಿಧ ಭಾಗಗಳಲ್ಲಿ ನೇಮಕಾತಿ ಪತ್ರಗಳನ್ನು ಹಸ್ತಾಂತರಿಸಲಿದ್ದಾರೆ.

ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ, ದೇಶದಲ್ಲೇ ಅತಿ ದೊಡ್ಡ ಉದ್ಯೋಗ ಅಭಿಯಾನಕ್ಕೆ ಚಾಲನೆ ನೀದಲಾಗಿದೆ. 2023ರ ವೇಳೆಗೆ 10 ಲಕ್ಷ ನೌಕರಿ ನೀಡುವ ಗುರಿ ಹೊಂದಲಾಗಿದೆ. 1 ಕೋಟಿಗೂ ಹೆಚ್ಚು ಜನರಿಗೆ ಖಾದಿ, ಗ್ರಾಮೋದ್ಯೋಗ ಕ್ಷೇತ್ರದಲ್ಲೂ ಉದ್ಯೋಗಾವಕಾಶ ಸಿಗಲಿದೆ. ಮಹಿಳೆಯರಿಗೂ ಲಾಭವಾಗಲಿದೆ. ಈ ಮೂಲಕ ಆತ್ಮ ನಿರ್ಭರ ಭಾರತದ ಸಂಕಲ್ಪವು ಈಡೇತುತ್ತಿದೆ. ದೇಶಾದ್ಯಂತ ಕೌಶಲಾಭಿವೃದ್ಧಿ ಕೇಂದ್ರ ಆರಂಭಿಸಿದ್ದೇವೆ. ಡಿಜಿಟಲ್ ಇಂಡಿಯಾ ಅಭಿಯಾನದ ಮುಲಕವೂ ಉದ್ಯೋಗ ನೀಡಲಾಗುತ್ತಿದೆ. ದೇಸಾದ್ಯಂತ 5 ಲಕ್ಷಕ್ಕೂ ಅಧಿಕ ಸರ್ವಿಸ್ ಸೆಂಟರ್ ತೆರೆಯಲಾಗುತ್ತಿದೆ. 5ಜಿ ಆರಂಭದಿಂದ ಲಕ್ಷ ಲಕ್ಷ ಯುವಕರಿಗ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಹೇಳಿದರು.

ಬಿಜೆಪಿ ಲೇವಡಿಗೆ ತಿರುಗೇಟು ನೀಡಿದ ಡಿ.ಕೆ.ಶಿವಕುಮಾರ್

https://pragati.taskdun.com/politics/bharath-jodo-yatreraichurd-k-shivakumar/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button