Kannada NewsLatest

ಬೆಳಗಾವಿಯಲ್ಲಿ ಘೋರ ಘಟನೆ: ಮಗುವನ್ನು ಕೊಂದು ಆತ್ಮಹತ್ಯೆಗೆ ಶರಣಾದ ತಾಯಿ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಪತಿಯ ಕುಡಿತದ ಚಟಕ್ಕೆ ಮುದ್ದು ಕಂದಮ್ಮ ಸೇರಿ ಮೂವರ ಜೀವವನ್ನೇ ಬಲಿಪಡೆದ ಘಟನೆ ಬೆಳಗಾವಿ ತಾಲೂಕಿನ ಮಂಟಮೂರು ಗ್ರಾಮದಲ್ಲಿ ನಡೆದಿದೆ.

ಹೊಳೆಪ್ಪ ಮಾರುತಿ ಮಸ್ತಿ (25) ಪತ್ನಿ ವಾಸಂತಿ (22) ಹಾಗೂ ಒಂದುವರೆ ವರ್ಷದ ಮಗು ಮೃತರು. ಗಲಾಟೆ ಮಾಡುತ್ತಿದ್ದ. ಪೈಯ ಕಾಟಕ್ಕೆ ಬೇಸತ್ತ ಪತ್ನಿ ಬುದ್ಧಿವಾದ ಹೇಳಿದ್ದಾಳೆ. ಇದರಿಂದ ಕೋಪಗೊಮ್ದ ಪತಿ ಪತ್ನಿಯೊಂದಿಗೆ ಜಗಳವಾಡಿದ್ದಾನೆ. ಸಾಲದ್ದಕ್ಕೆ ಪತ್ನಿಯನ್ನು ಹೆದರಿದ್ಸಲು ವಿಷ ಕುಡಿದಿದ್ದಾನೆ.

Home add -Advt

ತೀವ್ರ ಅಸ್ವಸ್ಥನಾದ ಹೊಳೆಪ್ಪನನ್ನು ಅಕ್ಕ ಪಕ್ಕದ ಮನೆಯವರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೇ ಹೊಳೆಪ್ಪ ಸಾವನ್ನಪ್ಪಿದ್ದಾನೆ. ವಿಷಯ ತಿಳಿದು ಮನನೊಂದ ಪತ್ನಿ ವಾಸಂತಿ ತನ್ನ ಒಂದುವರೆ ವರ್ಷದ ಮಗುವನ್ನು ಕತ್ತು ಹಿಸುಕಿ ಕೊಂದು ಬಳಿಕ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಕಾಕತಿ ಠಾಣೆಯಲ್ಲಿ ಈ ಬಗ್ಗೆ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ.

ಪುನೀತ ಪರ್ವ ನೋಡುತ್ತಿದ್ದಾಗಲೇ ಹೃದಯಾಘಾತ; ಅಪ್ಪು ಅಭಿಮಾನಿ ಸಾವು

https://pragati.taskdun.com/latest/puneeth-rajkumarfansheart-attackdeath/

Related Articles

Back to top button