
ಪ್ರಗತಿವಾಹಿನಿ ಸುದ್ದಿ; ಕಾರವಾರ: ಆಗಸದಲ್ಲಿ ಹಾರಾಡುತ್ತಿದ್ದ ಹೆಲಿಕಾಪ್ಟರ್ ಒಂದು ಕಾರವಾರ ನಗರದ ಎರಡು ಕಡೆ ಭೂ ಸ್ಪರ್ಷಕ್ಕೆ ಪ್ರಯತ್ನಿಸಿದ್ದು ಜನರನ್ನು ಕೆಲ ಕಾಲ ಬೆಚ್ಚಿ ಬೀಳಿಸಿದೆ.
ನಗರದ ಕೋಡಿಬಾಗ ರಸ್ತೆಯಲ್ಲಿರುವ ಮಾಲಾದೇವಿ ಕ್ರೀಡಾಂಗಣದಲ್ಲಿ ಮೊದಲು ಹೆಲಿಕಾಪ್ಟರ್ ಭೂ ಸ್ಪರ್ಷಕ್ಕೆ ಯತ್ನಿಸಿದೆ. ಆದರೆ ಇನ್ನೇನು ಹೆಲಿಕಾಪ್ಟರ್ ಮೈದಾನದಲ್ಲಿ ಲ್ಯಾಂಡ್ ಆಗುತ್ತದೆ ಎನ್ನುವಷ್ಟರಲ್ಲಿ ಮತ್ತೆ ಗಗನಕ್ಕೇರಿದೆ. ಅಲ್ಲಿಂದ ನೇರವಾಗಿ ಕಾರವಾರದ ಬೀಚ್ನಲ್ಲಿ ಇದೇ ರೀತಿ ಭೂ ಸ್ಪರ್ಷಕ್ಕೆ ಯತ್ನಿಸಿ ಅಲ್ಲಿಯೂ ಲ್ಯಾಂಡ್ ಆಗದೆ ವಾಪಸ್ ತೆರಳಿದೆ.
ಹೆಲಿಕಾಪ್ಟರ್ ಹೀಗೆ ಲ್ಯಾಂಡ್ ಆಗುವ ಹಂತದಲ್ಲಿ ಮತ್ತೆ ಆಗಸಕ್ಕೇರಿ ಹೊರಟುಹೋದ ವಿದ್ಯಮಾನ ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಗಿದೆ. ಬಳಿಕ ಕೋಸ್ಟ್ ಗಾರ್ಡ್ ಅಧಿಕಾರಿ ಈ ಬಗ್ಗೆ ಸ್ಪಷ್ಟೀಕರಣ ನೀಡಿದ್ದು, ಕೋಸ್ಟ್ ಗಾರ್ಡ್ನ ಹೆಲಿಕಾಪ್ಟರ್ ಅನ್ನು ಎಮರ್ಜೆನ್ಸಿ ಲ್ಯಾಂಡಿಂಗ್ ಪ್ರಾಕ್ಟೀಸ್ ಮಡಲಾಗುತ್ತಿತ್ತು. ಈ ಬಗ್ಗೆ ಜಿಲ್ಲಾಧಿಕಾರಿಯಿಂದ ಅನುಮತಿ ಪಡೆದು ತರಬೇತಿ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.
ಸರ್ಕಾರಿ ಶಾಲೆಗಳಿಂದ ಪ್ರತಿ ತಿಂಗಳು 100 ರೂಪಾಯಿ ದೇಣಿಗೆ; ಆಕ್ರೋಶಕ್ಕೆ ಕಾರಣವಾಯ್ತು ಶಿಕ್ಷಣ ಇಲಾಖೆ ಸುತ್ತೋಲೆ
https://pragati.taskdun.com/latest/100rs-per-monthparentsgovt-schooleducation-department-circuler/




