Latest

ಕಾಂಗ್ರೆಸ್ ಪಕ್ಷ ಮನವೊಲಿಕೆಯ ರಾಜಕಾರಣ ಮಾಡುತ್ತಿದೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಪ್ರಗತಿವಾಹಿನಿ ಸುದ್ದಿ; ಹುಬ್ಬಳ್ಳಿ: ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷದ ಅವಧಿಯಲ್ಲಿ ಆಗಿರುವ ಭಯೋತ್ಪಾದನೆ ಹಾಗೂ ಇತರ ದುಷ್ಕೃತ್ಯಗಳನ್ನು ಮುಚ್ಚಿಕೊಳ್ಳಲು ಮನವೊಲಿಕೆಯ ರಾಜಕಾರಣವನ್ನು ಮಾಡುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಇಂದು ಹುಬಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿದು, ಆನಂದ ಮಾಮನಿಯವರ ಅಂತ್ಯಕ್ರಿಯೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಸವದತ್ತಿಗೆ ತೆರಳುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದರು.

ಆರ್ ಎಸ್ ಎಸ್ ಮತ್ತು ಭಾಜಪ ಪಕ್ಷ ಭಾರತದಲ್ಲಿ ಹಿಂಸೆಯನ್ನು ಹಬ್ಬಿಸುತ್ತಿದೆ ಎಂದು ರಾಹುಲ್ ಗಾಂಧಿಯವರು ಆರೋಪಿಸಿರುವುದಕ್ಕೆ ಪ್ರತಿಕ್ರಿಯೆ ನೀಡಿ, ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಮನವೊಲಿಕೆಯ ರಾಜಕಾರಣ ಮಾಡುತ್ತಾ ಆರ್ ಎಸ್ ಎಸ್ ನ್ನು ದೂಷಿಸುತ್ತಿದ್ದಾರೆ ಎಂದರು.

ಆರ್ ಎಸ್ ಎಸ್ ರಾಷ್ಟ್ರಪ್ರೇಮ ಹೊಂದಿರುವ ಸಂಘಟನೆ :

ಆರ್ ಎಸ್ ಎಸ್ ರಾಷ್ಟ್ರಪ್ರೇಮ ಹೊಂದಿರುವ ಸಂಘಟನೆ ವಿನಾಕಾರಣ ಅದರ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ದೇಶದ ಜನರಿಗೆ ಇದರ ಬಗ್ಗೆ ಅರಿವಿದೆ. ಕಾಂಗ್ರೆಸ್ ಕಾಲದಲ್ಲಿ ದೊಡ್ಡ ಪ್ರಮಾಣದಲ್ಲಿ ಮುಂಬೈ, ಬೆಂಗಳೂರು,ಹೈದ್ರಾಬಾದ್ ಗಳಲ್ಲಿ ಭಯೋತ್ಪಾದನೆ ಚಟುವಟಿಕೆಗಳು ನಡೆಯಿತು. ಅವರ ಕಾಲದಲ್ಲಿ ಏನೇನಾಗಿದೆ ಎಂಬುದನ್ನು ಅವರು ಅವಲೋಕನ ಮಾಡಿಕೊಳ್ಳಬೇಕು. ಪ್ರಧಾನಿ ಮೋದಿಯವರ ಆಡಳಿತದಲ್ಲಿ ಆಂತರಿಕ ಭದ್ರತೆ, ಬಾಹ್ಯ ಭದ್ರತೆಯನ್ನು ಪರಿಣಾಮಕಾರಿಯಾಗಿ ಹೆಚ್ಚಿಸಿರುವುದನ್ನು ಎಲ್ಲರೂ ಗ್ರಹಿಸಬೇಕು. ಅವರ ನೀತಿಗಳನ್ನು ವಿವಿಧ ರಾಷ್ಟ್ರಗಳು ಹಾಗೂ ಮುಸ್ಲಿಂ ರಾಷ್ಟ್ರಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿವೆ. ಹೀಗಾಗಿ ರಾಹುಲ್ ಗಾಂಧಿಯವರ ಮಾತು ಅಸತ್ಯದಿಂದ ಕೂಡಿದ್ದು, ಅದರಲ್ಲಿ ಯಾವುದೇ ಹುರುಳಿಲ್ಲ ಎಂದರು.

ಎಲ್ಲ ವಿಚಾರಗಳನ್ನು ಹಳದಿ ಕಣ್ಣಿನಿಂದ ನೋಡುವುದು ಕಾಂಗ್ರೆಸ್ ಅಭ್ಯಾಸ :

ರಾಜ್ಯದಲ್ಲಿ ಕೋಮುವಾದವನ್ನು ಹೆಚ್ಚಿಸಲಾಗುತ್ತಿದೆ ಎಂದು ಆರೋಪಿಸಿರುವುದಕ್ಕೆ ಪ್ರತಿಕ್ರಯಿಸಿ, ಕಾಂಗ್ರೆಸ್ ನವರು ಎಲ್ಲ ವಿಷಯವನ್ನು ಹಳದಿ ಕಣ್ಣಿನಿಂದ ನೋಡುವ ಅಭ್ಯಾಸ ಮಾಡಿಕೊಂಡಿದ್ದಾರೆ. ರಾಜಸ್ತಾನದಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿದರೆ, ಯಾರು ಕೋಮುವಾದ, ಮನವೊಲಿಕೆಯ ರಾಜಕಾರಣದ ಮೂಲಕ ದೇಶ ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂಬುದು ತಿಳಿಯುತ್ತದೆ. ಮೊದಲಿಗೆ ಕಾಂಗ್ರೆಸ್ ಆಡಳಿತದಲ್ಲಿರುವ ರಾಜ್ಯದಲ್ಲಿ ಆಗುತ್ತಿರುವ ಕೋಮು ಚಟುವಟಿಕೆಗಳನ್ನು ನಿಯಂತ್ರಿಸಲಿ ಎಂದರು.

BJPಯ 14 ಬಂಡಾಯ ಅಭ್ಯರ್ಥಿಗಳ ಉಚ್ಛಾಟನೆ

https://pragati.taskdun.com/politics/14-rebel-bjp-candidatesexpulsionvijayapura/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button