ಪ್ರಗತಿವಾಹಿನಿ ಸುದ್ದಿ; ರಾಮನಗರ: ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಕಂಚುಗಲ್ ಬಂಡೆ ಮಠದ ಬಸವಲಿಂಗ ಸ್ವಾಮೀಜಿ (45) ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮೂರು ಪುಠಗಳಷ್ಟು ಡೆತ್ ನೋಟ್ ಬರೆದಿಟ್ಟಿರುವ ಸ್ವಾಮೀಜಿ, ತಮ್ಮ ಕೊಠಡಿಯ ಕಿಟಕಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಲವರು ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ನನ್ನ ಪರವಾಗಿ ಯಾರೂ ನಿಲ್ಲುತ್ತಲೂ ಇಲ್ಲ. ಕೆಲವರಿಂದ ಬೆದರಿಕೆ ಕರೆಗಳು ಕೂಡ ಬಂದಿವೆ ಎಂದು ಡೆತ್ ನೋಟ್ ನಲ್ಲಿ ಸ್ವಾಮೀಜಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.
ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನಲ್ಲಿ ಅತಿದೊಡ್ಡ ಮಠ ಎಂದೇ ಖ್ಯಾತಿ ಪಡೆದಿದ್ದ ಬಂಡೆ ಮಠದ ಸ್ವಾಮೀಜಿ ಆತ್ಮಹತ್ಯೆ ಅಚ್ಚರಿಗೆ ಕಾರಣವಾಗಿದೆ. ಮಠದ ಆವರಣದಲ್ಲಿ ಶಾಲಾ-ಕಾಲೇಜುಗಳು ಇದ್ದವು. 50 ಕೋಟಿಗೂ ಅಧಿಕ ಆಸ್ತಿಯನ್ನು ಹೊಂದಿರುವ ಮಠ ಇದಾಗಿದೆ. ಸ್ವಾಮೀಜಿ ವಿರುದ್ಧ ಕೆಲ ಆರೋಪಗಳು ಕೇಳಿಬಂದಿದ್ದು, ಮರ್ಯಾದೆಗೆ ಅಂಜಿ ಸ್ವಾಮೀಜಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಹರ್ಷ ಸಹೋದರಿ ಸೇರಿ 15 ಜನರ ವಿರುದ್ಧ FIR ದಾಖಲು
https://pragati.taskdun.com/latest/harsha-sisterfir-fileshivamogga/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ