Latest

ಪರಿಸರ ದಿನಾಚರಣೆ ಹಿಂದುಗಳಿಗೆ ಹಾಸ್ಯಾಸ್ಪದ -ಅನಂತಕುಮಾರ ಹೆಗಡೆ

 

ಪ್ರಗತಿವಾಹಿನಿ ಸುದ್ದಿ, ಶಿರಸಿ: 
ಜೂನ್ 5 ರಂದು ನಡೆಯುವ ಪರಿಸರ ದಿನಾಚರಣೆಯು ಒಂದು ಹಾಸ್ಯಾಸ್ಪದ ವಿಷಯ ಎಂದು ಸಂಸದ ಅನಂತಕುಮಾರ ಹೆಗಡೆ ಅಭಿಪ್ರಾಯಪಟ್ಟಿದ್ದಾರೆ.
ಹಿಂದೂಗಳಿಗೆ ಪರಿಸರದ ಜೊತೆಗೆ ಬದುಕುವುದು ಸಂಪ್ರದಾಯ. ಪರಿಸರ ರಕ್ಷಣೆ ನಮ್ಮ ಕರ್ತವ್ಯ. ನಮ್ಮ ಜೀವನ ಪದ್ಧತಿ ಮೂಲ ಸನಾತನ ಆಶಯದಂತೆ ನಡೆದಲ್ಲಿ ಒಂದು ದಿನದ ಪರಿಸರ ದಿನದ ನಾಟಕ ಅಗತ್ಯವಿರುವುದಿಲ್ಲ ಎಂದು ಹೇಳಿದ್ದಾರೆ.
ಪರಿಸರ ನಾಶವಾಗುತ್ತಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ಮಂಡಿಸಿರುವ ಸಂಸದ ಹೆಗಡೆ, ಹಿಂದೂಗಳಿಗೆ ಪರಿಸರ ದಿನಾಚರಣೆ ಒಂದು ವಿಷಯವಲ್ಲ. ಪರಿಸರ ರಕ್ಷಣೆ ಬದುಕಲ್ಲಿ ನಡೆಸಿಕೊಂಡು ಬಂದಿರುವುದು. ನಮ್ಮ ಬದುಕಿನ ಹಾದಿಯಿದು. ಹಿಂದೂ ಜೀವನದ ಪದ್ಧತಿ ಪ್ರಬುದ್ಧವಾಗಿದೆ. ಮತಿಗೆಟ್ಟ ಮೂಲಭೂತವಾದಿಗಳು ಮಾತ್ರ ಇನ್ನೊಂದು ಕೋಮಿನ ವಿಚಾರಕ್ಕೆ ಹೋಲಿಸುತ್ತಾರೆ. ಅದಕ್ಕೆ ನಾವು ಏನೂ ಮಾಡಲು ಬರುವುದಿಲ್ಲ ಎಂದಿದ್ದಾರೆ. 
ಪರಿಸರ ರಕ್ಷಣೆ ಹಿಂದೂಗಳಿಗೆ ಒಂದು ಟಾಸ್ಕ್ ಅಲ್ಲ. ತಾಯಿಯ ಸೇವೆ ಮಗನ ಜನ್ಮಜಾತ ಕರ್ತವ್ಯ. ಅದು ಕೆಲಸವಲ್ಲ, ಕರ್ತವ್ಯ.  ಇದನ್ನು ಉಳಿಸುಕೊಂಡು ಬೆಳೆಸಿಕೊಂಡು ಮುಂದಿನ ತಲೆಮಾರಿಗೆ ಹೀಗೆ ಇಡಬೇಕು ಎಂದು ಹೇಳಿದ್ದಾರೆ. 

Related Articles

Back to top button