ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :
ವಿದ್ಯಾರ್ಥಿಗಳಿಗೆ ಶಿಕ್ಷಣ ಜತೆಗೆ ಸಹಪಠ್ಯೇತರ ಚಟುವಕೆಗಳ ಮುಖಾಂತರ ವಿದ್ಯೆ ಕಲಿಸಬೇಕು, ಪ್ರಸ್ತುತ ದಿನಗಳಲ್ಲಿ ಮಕ್ಕಳ ಭವಿಷ್ಯ ನಿರ್ಮಾಣಕ್ಕಾಗಿ ಗುಣಮಟ್ಟದ ಶಿಕ್ಷಣ ಕೊಡಿಸುವಲ್ಲಿ ಪಾಲಕರು ಮತ್ತು ಶಿಕ್ಷಕರು, ವಿದ್ಯಾರ್ಥಿಗಳು ಸಹಕಾರ ನೀಡಬೇಕೆಂದು ಶೀತಲ ಮೇಕನಮರಡಿ ಹೇಳಿದರು.
ಸ್ಥಳೀಯ ಭಾಗ್ಯನಗರದ ರಾಮನಾಥ ಮಂಗಲ ಸಭಾಭವನದಲ್ಲಿ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಸನ್ಮಾನ ಹಾಗೂ ಬೇಸಿಗೆಯ ಶೈಕ್ಷಣಿಕ ಶಿಬಿರದ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.ಬೆಳೆಯುವ ಮಕ್ಕಳ ಪ್ರತಿಭೆ ಗುರುತಿಸಲು ಬೇಸಿಗೆ ಸಂಭ್ರಮ ಶಿಬಿರಗಳು ಸಹಕಾರಿಯಾಗುತ್ತವೆ. ಎಲ್ಲ ಮಕ್ಕಳು ಇಂಥ ಶಿಬಿರಗಳ ಲಾಭ ಪಡೆಯಬೇಕು ಎಂದರು.
ಈ ಸಂದರ್ಭದಲ್ಲಿ ಅಜೀತ ಪಾಟೀಲ, ಸಂಗಮೇಶ, ಸಂತೋಷ ಸಾತಗೌಡ, ಶಶಿಕಾಂತ ಕಾಂಬಳೆ, ಮಂಜುನಾಥ ಮೋರಕರ, ಪದ್ಮರಾಜ ಬಸ್ತವಾಡ, ಸಾಗರ, ಪ್ರಕಾಶ ಪವಾರ ಹಾಗು ಉಪಸ್ಥಿತರಿದ್ದರು.////
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ