ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಬೀಡಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇ ಶಾಲೆ ಉದ್ಘಾಟನೆ ಶುಕ್ರವಾರ ನಡೆಯಲಿದೆ.
ಶಾಸಕಿ ಅಂಜಲಿ ನಿಂಬಾಳಕರ್ ಅವರ ಶಾಸಕರ ನಿಧಿ ಮತ್ತು ಮೆಂಡಾ ಫೌಂಡೇಶನ್ ಸಹಯೋಗದಲ್ಲಿ, ಖಾನಾಪುರ ತಾಲೂಕಿನ 40 ಶಾಲೆಗಳಲ್ಲಿ ಸೆಲ್ಕೊ ಸೊಲಾರ್ ಅನುಷ್ಠಾನಗೊಳಿಸುತ್ತಿದೆ.
ಸರಕಾರಿ ಶಾಲೆಗಳ ಶಿಕ್ಷಣ ಗುಣಮಟ್ಟ ಸುಧಾರಿಸುವ ಮಹತ್ವದ ಹೆಜ್ಜೆ ಇದಾಗಿದ್ದು, ತಾಲೂಕಿನ ಪ್ರಭುನಗರ ಶಾಲೆಯಲ್ಲಿ ಮೊದಲ ಬಾರಿಗೆ ಯೋಜನೆ ಅನುಷ್ಠಾನವಾಗಿರುವುದನ್ನು ನೋಡಿದ ಅಂಜಲಿ ನಿಂಬಾಳಕರ್ ಕ್ಷೇತ್ರದ 40 ಶಾಲೆಗಳಿಗೆ ತಮ್ಮ ಶಾಸಕ ನಿಧಿಯನ್ನು ನೀಡಿದ್ದಾರೆ.
ಇದೇ ವೇಳೆ ವಿವಿಧ ಶಾಲೆಗಳ 13 ಕೊಠಡಿಗಳ ಉದ್ಘಾಟನೆ ಹಾಗೂ ಸಾಧಕ ವಿದ್ಯಾರ್ಥಿ, ಶಿಕ್ಷಕರ ಸನ್ಮಾನ ಸಹ ನಡೆಯಲಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ