ಪ್ರಗತಿವಾಹಿನಿ ಸುದ್ದಿ; ವಿಜಯಪುರ: ಬಾರ್ ಮಾಲೀಕರಿಂದ ಹಣ ವಸೂಲಿ ಮಾಡುತ್ತಿದ್ದ ಅಬಕಾರಿ ಸಿಪಿಐ ಓರ್ವರನ್ನು ಸಸ್ಪೆಂಡ್ ಮಾಡಿ ಅಬಕಾರಿ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದ ಅಬಕಾರಿ ಸಿಪಿಐ ಜ್ಯೋತಿ ಮೇತ್ರಿ ಅಮಾನತುಗೊಂಡವರು. ಸಿಪಿಐ ಜ್ಯೋತಿ ಬಾರ್ ಮಾಲೀಕರೊಂದಿಗೆ ಡೀಲ್ ಮಾಡಿಕೊಂಡು ಹಣ ವಸೂಲಿ ಮಾಡುತ್ತಿದ್ದರು.
ಕೊಡೋದು ಕೊಡಿ, ಇಲ್ಲದಿದ್ರೆ ಚೆನ್ನಾಗಿರಲ್ಲ ಎಂದು ಸಿಪಿಐ ಜ್ಯೋತಿ ಬಾರ್ ಮಾಲೀಕರಿಗೆ ಧಮ್ಕಿ ಹಾಕುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ಪ್ರತಿ ಬಾರ್ ಗಳಿಂದ ತಲಾ 15,000 ರೂಪಾಯಿ ಬೇಡಿಕೆಯಿಟ್ಟಿದ್ದರು ಎನ್ನಲಾಗಿದೆ. ಹಣ ವಸೂಲಿ ಮಾಡುತ್ತಿದ್ದ ಸಿಪಿಐ ಜ್ಯೋತಿ ಅವರನ್ನು ಇದೀಗ ಸಸ್ಪೆಂಡ್ ಮಾಡಿ ಬೆಂಗಳೂರು ಅಬಕಾರಿ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಶಿವಸೇನೆ ನಾಯಕನ ಮೇಲೆ ಗುಂಡಿನ ದಾಳಿ; ಹಾಡಹಗಲೇ ಬರ್ಬರ ಹತ್ಯೆ
https://pragati.taskdun.com/latest/shivasena-leadersudheer-surishoot-dead/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ