Latest

ಋತುಬಂಧ; ಮಾನಸಿಕ ಒತ್ತಡದ ಸಮಯ; ಎದುರಿಸುವುದು ಹೇಗೆ?

ಪ್ರಗತಿ ವಾಹಿನಿ ಹೆಲ್ತ್ ಟಿಪ್ಸ್ : ಋತುಬಂಧ ಎನ್ನುವುದು ಮಹಿಳೆಯ ಜೀವನದಲ್ಲಿ ಇನ್ನು ಮುಂದೆ ಸಂತಾನೋತ್ಪತ್ತಿ ಮಾಡಲು ಸಾಧ್ಯವಾಗದ ಸ್ಥಿತಿ ತಲುಪುವುದಾಗಿದೆ. ಋತುಬಂಧದ ಬಳಿಕ ಋತುಚಕ್ರವು ಕೊನೆಗೊಳ್ಳುತ್ತದೆ.

ಮುಟ್ಟು ನಿಲ್ಲುವ ಅವಧಿ ಎಂದು ಬಳಕೆಯಲ್ಲಿ ಕರೆಯಲ್ಪಡುವ  ಈ ಸಮಯವು ಮಹಿಳೆಯರಿಗೆ ದೈಹಿಕವಾಗಿ ಮಾತ್ರವಲ್ಲದೇ ಮಾನಸಿಕವಾಗಿಯೂ ಬಹಳ ಕಿರಿಕಿರಿ ಅನುಭವಿಸವ ಸಮಯವಾಗಿದೆ. ಭಾವನೆಗಳು ಕೆರಳುವುದು, ಕೋಪ, ಆತಂಕ, ದುಖಃ ಮೊದಲಾದ ಮಾನಸಿಕ ತುಮುಲಗಳಿಗೆ ಮಹಿಳೆಯರು ಋತುಬಂಧದ ಸಮಯದಲ್ಲಿ ಒಳಗಾಗುತ್ತಿದ್ದು, ಈ ಸಮಯದಲ್ಲಿ ಕೆಲ ಉಪಾಯಗಳ ಮೂಲಕ ಭಾವನಾತ್ಮಕವಾಗಿ ಸದೃಢರಾಗಬಹುದು.

ಋತು ಬಂಧದ ಸಮಯದಲ್ಲಿ ಮಹಿಳೆಯರು ಮಾನಸಿಕವಾಗಿ ಕುಗ್ಗುತ್ತಾರೆ. ಪದೇ ಪದೆ ಮೂಡ್ ಬದಲಾಗುವುದರಿಂದ ಹೆಚ್ಚು ತೊಳಲಾಟಕ್ಕೆ ಒಳಗಾಗುತ್ತಾರೆ.

ಪಾಶ್ಚಿಮಾತ್ಯ ರಾಷ್ಟçಗಳಲ್ಲಿ ಮಹಿಳೆಯರ ಋತುಬಂಧದ ಅವಧಿ ಸರಾಸರಿ 51 ವರ್ಷವಾಗಿದ್ದರೆ ಭಾರತದಲ್ಲಿ ಸರಾಸರಿ 46  ವರ್ಷ ವಯೋಮಾನದಲ್ಲಿ ಮಹಿಳೆಯರು ಋತುಬಂಧಕ್ಕೊಳಗಾಗುತ್ತಾರೆ.

ಮಹಿಳೆ ಮುಟ್ಟಾದ ಕೊನೇಯ ದಿನದಿಂದ ಮುಂದಿನ ಒಂದು ವರ್ಷದೊಳಗೆ ಮುಟ್ಟಾಗದಿದ್ದರೆ ಅದನ್ನು ಋತುಬಂಧ ಅಥವಾ ಮೊನೊಪಾಸ್ ಎಂದು ಕರೆಯಲಾಗುತ್ತದೆ.

ಋತು ಬಂಧ ಮಹಿಳೆಯರ ಜೀವನದ  ನೈಸರ್ಗಿಕ ಪ್ರಕ್ರಿಯೆಯಾಗಿದ್ದರೂ ಅದರ ಪರಿಣಾಮ ಒಬ್ಬರಿಂದೊಬ್ಬರಿಗೆ ಬದಲಾಗುತ್ತದೆ. ಋತುಬಂಧದ ಸಮಯದಲ್ಲಿ ಉಂಟಾಗುವ ಮಾನಸಿಕ ತುಮಲಗಳನ್ನು ಹತೋಟಿಗೆ ತಂದು ಆರೋಗ್ಯಕರವಾಗಿ ಜೀವನ ನಡೆಸಲು ಕೆಲವು ಹೆಜ್ಜೆಗಳನ್ನು ಮಹಿಳೆಯರು ಕೈಗೊಳ್ಳಬಹುದು.

ಋತುಬಂಧದ ಲಕ್ಷಣಗಳ ಬಗ್ಗೆ ಆತ್ಮೀಯರು, ಕುಟುಂಬದವರೊಂದಿಗೆ ಮುಕ್ತವಾಗಿ ಮಾತಾಡಬೇಕಿದೆ. ಇದರಿಂದ ಮಾನಸಿಕ ಸ್ಥಿತಿ ದೃಢವಾಗುತ್ತದೆ. ಕುಟುಂಬದವರು ಮತ್ತು ಸ್ನೇಹಿತರ ವಲಯದವರಿಂದ ಸೂಕ್ತ ಬೆಂಬಲ ಪಡೆಯಲು ಸಹಾಯವಾಗುತ್ತದೆ.

 

ಋತುಬಂಧದ ಸಂದರ್ಭದಲ್ಲಿ ಮಾನಸಿಕ ಒತ್ತಡವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಲು ಧ್ಯಾನ, ಯೋಗ, ವಿಶ್ರಾಂತಿಯನ್ನು ಅವಲಂಭಿಸಬಹುದು.

ಋತುಬಂಧಕ್ಕೆ ಪೂರ್ವದಲ್ಲೇ  ಮಹಿಳೆಯರಲ್ಲಿ ಹಾರ್ಮೋನುಗಳ ಬದಲಾವಣೆಗಳು ಉಂಟಾಗುತ್ತವೆ. ಸುಮಾರು 40ನೇ ವರ್ಷದಿಂದಲೇ ಈ ಬದಲಾವಣೆಗಳು ಪ್ರಾರಂಭವಾಗುತ್ತವೆ. ಈ ಅವಧಿಯು ಗಮನಾರ್ಹವಾಗಿ ಮಾನಸಿಕ ಆರೋಗ್ಯದ ಮಲೆ ಪರಿಣಾಮ ಬೀರುತ್ತದೆ. ಹೀಗಾಗಿ ಈ ಅವಧಿಯಲ್ಲಿ ಖಿನ್ನತೆ ಉಂಟಾಗಬಹುದು. ಖಿನ್ನತೆ, ದುಖಃ, ಮಾನಸಿಕ ಒತ್ತಡಗಳು ಪದೇ ಪದೆ ಕಾಡಿದಲ್ಲಿ ಮಾನಸಿಕ ತಜ್ಞರ ಸಲಹೆ ಪಡೆಯುವುದು ಉತ್ತಮ.

ನಿಮ್ಮ ಸಹೋದ್ಯೋಗಿಗಳು ಮತ್ತು ಗೆಳೆಯರೊಂದಿಗೆ ಮಾತನಾಡುವುದರಿಂದ ನೀವು ಕೆಲಸ ಮಾಡುವಾಗ ಹೆಚ್ಚು ನಿರಾಳವಾಗಿರಬಹುದು. ನಿಮ್ಮಂತೆ ಇತರೆ ಮಹಿಳೆಯರು ಇದೇ ರೀತಿಯ ಅನುಭವ ಹೊಂದಿದ್ದರೆ ಅವರು ಇದನ್ನು ಹೇಗೆ ನಿರ್ವಹಿಸಿದರು ಎಂಬುದನ್ನು ನೀವು ಅವರ ಜೊತೆ ಕೇಳಿ ತಿಳಿಯಬಹುದು.

ಋತುಬಂಧಕ್ಕೆ ಒಳಗಾದ ಇತರ ಮಹಿಳೆಯರ ಜೊತೆ ಚರ್ಚಿಸುವುದರಿಂದ ನಿಮಗೆ ಹಲವಾರು ಪ್ರಯೋಜನಗಳು ಲಭಿಸುತ್ತವೆ. ಮಹಿಳೆಯರು ಋತುಬಂಧದಂತಹ ಸ್ಥಿತಿಗಳನ್ನು ನಿರ್ವಹಿಸಲು ಸಹಾಯ ಮಾಡಲೆಂದೇ ಕೆಲವು ನಿರ್ದಿಷ್ಟ ವೇದಿಕೆಗಳಿವೆ. ಇದರಲ್ಲಿ ನೀವು ಎದುರಿಸುತ್ತಿರುವ ಸಮಸ್ಯೆ, ಲಕ್ಷಣಗಳನ್ನು ಹಂಚಿಕೊಂಡು ಸಲಹೆ ಪಡೆಯಬಹುದು.

ಪರಿಪೂರ್ಣ ನಿದ್ರೆ, ಉತ್ತಮ ಆಹಾರ, ವಿಶ್ರಾಂತಿ, ವೈದ್ಯರ ಸಲಹೆಗಳನ್ನು ನಿರಂತರವಾಗಿ ಪಡೆಯುವ ಮೂಲಕ  ಋತುಬಂಧ ಸಮಯದಲ್ಲಿ ಉಂಟಾಗುವ ಮಾನಸಿಕ ಒತ್ತಡ ಮತ್ತು ಸಮಸ್ಯೆಗಳನ್ನು ಎದುರಿಸಿ ನೆಮ್ಮದಿ ಪಡೆಯಬಹುದು.

ಪಾಲಿಕೆ ಎದುರು ಕಾರ್ಪೋರೇಟರ್ ಪ್ರತಿಭಟನೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button